Advertisement
ಭಾರತೀಯರು ಹಬ್ಬಗಳ ಪ್ರಿಯರು. ಭಾರ ತೀಯ ಸಂಸ್ಕೃತಿಯಲ್ಲಿ ವರ್ಷದ ಪ್ರತೀದಿನ ವನ್ನೂ ಒಂದೊಂದು ಹಬ್ಬವನ್ನಾಗಿ ಆಚರಿಸುವ ಕಾಲ ವಿತ್ತು. ನಮ್ಮ ಇಡೀ ಬದುಕನ್ನೇ ಸಂಭ್ರ ಮಿಸುವ ಮತ್ತು ಹಬ್ಬವಾಗಿಸುವ ಆಲೋ ಚನೆಯೇ ಇದರ ಹಿಂದಿರುವಂಥಹುದು. ಭಾರ ತೀಯ ಪರಂಪರೆ ಯಲ್ಲಿ ದೀಪಕ್ಕೆ ಬಹಳ ಮಹತ್ವದ ಸ್ಥಾನವಿದೆ. ಅದು ಪರ ಬ್ರಹ್ಮದ ಸಂಕೇತ. ದೀಪವು ಬೆಳಕಿನ ಪ್ರತೀಕವೂ ಹೌದು; ಜ್ಞಾನದ ಸಂಕೇತವೂ ಹೌದು. ಅಂತೆಯೇ, ಮನೆ-ಮನೆಯಲ್ಲೂ ಹಚ್ಚುವ ನರುಬೆಳಕು ತನ್ನ ಮಿತಿಯಲ್ಲಿ ಇರುಳ ಕತ್ತಲೆಯನ್ನು ಮೊಗೆದು ಹೊರ ಚೆಲ್ಲುವ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತದೆ. ಇದು ಕತ್ತಲು-ಬೆಳಕಿನ ಕಣ್ಣಾಮುಚ್ಚಾಲೆ.ಬೆಳಕು ಜೀವಂತಿಕೆಯ ಸಂಕೇತ. ದೀಪಾ ವಳಿಯ ಹಣತೆಯ ಬೆಳಕಿನಲ್ಲಿ ಹೊರಗೆ ಮಾತ್ರ ಪ್ರಕಾಶಿಸಿದರೆ ಸಾಲದು. ಹೊರಗಿನೊಂದಿಗೆ ನಮ್ಮೊಳಗನ್ನೂ ಬೆಳಕಿನ ನಿಕಷಕ್ಕೊಡ್ಡಬೇಕು. ಅಸತ್ಯದಿಂದ ಸತ್ಯದೆಡೆಗೆ, ಕತ್ತಲಿನಿಂದ ಬೆಳಕಿ ನೆಡೆಗೆ ಬದುಕನ್ನು ಸಾಗಿಸುವಂತೆ ಮನದಿ ರಂಗೇ ರಲಿ ಎಂಬುದೇ ಈ ದೀಪಾವಳಿಯ ಆಶಯ.
ಭೂಮಿಯ ತಾಪ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಧರೆಯೊಡಲು ಬೆಂಕಿಯಂತೆ ಸುಡು ತ್ತಿದೆ. ಕತ್ತಲನ್ನು ಗೆದ್ದೇ ತೀರುತ್ತೇನೆಂಬ ಮಾನವ ನೆದೆಯ ದಾಹವಿಂದು ಭುವಿಯ ಬೆಂಕಿ ಯಾಗಿಸುತ್ತಿದೆ. ಬೆಳಕೇ ಹೊಸಹುಟ್ಟು; ಬೆಳಕೇ ಭಾವದೀಪ್ತ ಎಂದು ಮತ್ತೆ ಮತ್ತೆ ನೆನಪಿಸುವ ಬೆಳಕಿನೊಲುಮೆಯ ಮೂಲಕ ಮನುಜ ನೆದೆಯ ಸಿಂಗರಿಸುವ ಕುಡಿ ಬೆಳಕಿನಲ್ಲಿ ಮನವ ನವಿರಾಗಿಸಿ ಸಿಂಗರಿಸುವ ದೀಪಾವಳಿ ಬೆಳಕಿನ ಒಲುಮೆಯ ಹರಡಲು ಭಾವ ದೀಪ್ತಿಯಲಿ ಸಿಂಗರಿಸಿ ನಿಂತಿದೆ.
ಕತ್ತಲು ಚಿಂತನೆಗೆ ಅವಕಾಶ ನೀಡುತ್ತದೆ; ಕತ್ತಲಿನ ತಿರಸ್ಕಾರ ಸಲ್ಲದು. ಕತ್ತಲಿನಲ್ಲಿ¨ªಾಗ ಬೆಳಕಿನ ಅರಿವು ಹಾಗೂ ಬೆಳಕನ್ನು ಸೇರುವ ಪ್ರಯತ್ನ ಅಗತ್ಯ. ಅಂತೆಯೇ, ದೀಪವನ್ನು ಬೆಳ ಗುವುದು ನಮ್ಮ ಮನಸ್ಸಿನಲ್ಲಿ ಅಡಗಿರುವ ಬೆಳಕಿನ ಹಂಬಲದ ಬಾಹ್ಯರೂಪ.
Related Articles
ಈ ಬೆಳಕ ಹಬ್ಬಕ್ಕೆ ಬೆಳಕೇ ತೋರಣ. ಅದೇ ಬೆಳಕೇ ಎಲ್ಲರ ಸಂಭ್ರಮಕ್ಕೆ ಕಾರಣ. ಮನದ ಗೆಲುವಿಗೆ ಹೂರಣ. ದೀಪ ವೊಂದು ತಾನು ಬೆಳಕಾಗಿ ತನ್ಮೂಲಕ ಇನ್ನೊ ಂದು ದೀಪವ ಬೆಳಗಿಸಿ ಮತ್ತೂಂದಕ್ಕೆ ಬೆಳಕಾಗಿ ಹರಿಯುತ್ತಾ ಸಾಲು-ಸಾಲಾಗಿ ದೀಪಗಳ ಪೋಣಿಸುತ್ತಾ ಬದುಕಿನ ನಂಬಿಕೆಯಾಗಿ ಮುನ್ನಡೆಯುತ್ತದೆ.
ಇಂದು ನಿರಾಶೆಯ ಕತ್ತಲ ಹರಿದೊಗೆದು, ಮನದ ಅಂಧಕಾರವಳಿದು, ಸಮತೆ ಶಾಂತಿಯು ನೆಲೆಸಿ, ಬದುಕಿಗೆ ಪ್ರೀತಿಯ ಹೂವ ಮುಡಿಸಬೇ ಕಾಗಿದೆ. ತೋರಣದ ತಳಿರಲ್ಲಿ, ಹೊಸಿಲ ಹಣತೆಯಲ್ಲಿ, ಬಾಣ ಬಿರುಸಿನಲ್ಲೂ ನಲಿವು ಮೂಡಬೇಕಾಗಿದೆ. ಕತ್ತಲೆಯ ಪುಟಗಳಲ್ಲಿ ಬೆಳಕಿನ ಅಕ್ಷರದಲ್ಲಿ ದೀಪದ ಸಂದೇಶ ನಳನಳಿಸ ಬೇಕಾಗಿದೆ. ಅದು ಮನೆ- ಮನವ ಬೆಳಗಬೇಕಾಗಿದೆ. ಹೀಗಿ ರುವಾಗ, ದೀಪ ಒಂದನು ಬೆಳಗೆ ಮೃತ್ಯು ಭಯವಿಲ್ಲ; ಹತ್ತು ದೀಪ ಗಳನುರಿಸೆ ಅನಾರೋಗ್ಯವಿಲ್ಲ; ನೂರು ದೀಪವ ಬೆಳಗೆ ಬಂಜೆ ತನವಿಲ್ಲ.
ಕತ್ತಲೆಗೂ ಬೆಳಕಿಗೂ ಯುಗ- ಯುಗಗಳ ಸಂಘರ್ಷ; ನಿರಂತರ ಹೋರಾಟ. ಬೆಳಕು ಗೆಲ್ಲುವುದೇ ದೀಪಾವಳಿಯ ಸಂಕೇತ. ಬೆಳಕು ಎಲ್ಲ ಚೇತನಗಳ ಆಧಾರ, ಕ್ರಿಯಾಶಕ್ತಿ. ಬೆಳಕಿ ಲ್ಲದೆ ಈ ಜಗವೇ ಇಲ್ಲ; ಜಗಕೆ ಅಸ್ತಿತ್ವವಿಲ್ಲ. ಬೆಳಕೇ ಬದುಕು. ಆ ಬೆಳಕಿನ ಆರಾಧನೆಯೇ ಈ ದೀಪಾವಳಿ.
Advertisement
ದೀಪಾವಳಿಯ ಉದ್ದೇಶವೇ ಬದುಕಿನ ಸಂಭ್ರಮವನ್ನು ಇಮ್ಮಡಿಸುವುದು. ನಾವು ಸಿಡಿಸುವ ಪಟಾಕಿ ನಮ್ಮೊಳಗಿರುವ ಅರಿವಿನ ಕಿಚ್ಚನ್ನು ಉದ್ದೀಪಿಸಬೇಕು; ದ್ವೇಷದ ದಳ್ಳುರಿಯನ್ನು ಅಲ್ಲ. ಪಟಾಕಿ ಸುಡುವುದು ಪ್ರಸ್ತುತ ನಮ್ಮ ಭುವಿಯ ಒಳಿತಿಗೆ ಪೂರಕ ವಾಗಿಲ್ಲ. ಹೀಗಿರುವಾಗ ಮನೆಯನ್ನು ಹಸುರ ತೋರಣಗಳಿಂದ ಸಿಂಗರಿಸಿ, ಮುಸ್ಸಂಜೆಯ ವೇಳೆಯಲ್ಲಿ ಪುಟ್ಟ ಹಣತೆಯ ಬೆಳಕು ಇಡೀ ಮನೆಯನ್ನು, ಮನವನ್ನು ವ್ಯಾಪಿ ಸುವಂತೆ ಹಚ್ಚಿಟ್ಟು ಸಂಭ್ರಮಿಸುವ ರೀತಿಗಿಂತ ಮಿಗಿಲಾದುದು ಬೇರೆ ಬೇಕೇ? ಇಂದು ಸಿಡಿಸಬೇಕಾಗಿರುವುದು ಪಟಾಕಿಯನ್ನಲ್ಲ. ನಮ್ಮ ಪ್ರಾಣಶಕ್ತಿ, ಹೃದಯ, ಮನಸ್ಸು ಮತ್ತು ಈ ದೇಹವು ಸದಾ ಕ್ರಿಯಾಶೀಲವಾಗಿ ಒಳಿತಿನ ಚಿಂತ ನೆಗಳ ಒಡಗೂಡಿ ಸದಾ ಜೀವಂತ ಪಟಾಕಿ ಯಂತೆ ಸಿಡಿಯುತ್ತಿರಬೇಕು. ಆಗ ಹೊರಗಿನ ಪಟಾಕಿಯ ಅಗತ್ಯವೇ ಇರುವುದಿಲ್ಲ.
ಅಂತೆಯೇ, ಈ ದೀಪಾವಳಿಯಂದು ನಾವು ಬೆಳಗುವ ದೀವಿಗೆ ಮನೆ-ಮನಕೆ ಹೊಸ ಕಳೆಯ ತುಂಬುತ ನಂದಾದೀಪವಾಗಿ ಬೆಳಗಲಿ. ಬಾಳ ಕತ್ತಲೆಯ ಹೊಡೆದೋಡಿಸಿ ಅರಿವಿನ ಬೆಳಕಿಗೆ ಮುನ್ನುಡಿಯಾಗಲಿ. ನಮ್ಮ ಅಂತರಂ ಗವೇ ದೀಪವಾಗಿ ಸತ್ಯ, ಸ್ನೇಹ, ಕರುಣೆಗಳ ಎಣ್ಣೆ ಯನ್ನು ಹೊಯ್ದು ಜ್ಞಾನ ಜ್ಯೋತಿಯು ಸಂಭ್ರಮಿಸಲಿ.ಬೆಳಕು ಮೂಲೆ ಮೂಲೆಯ ತಬ್ಬಿ ಕತ್ತಲಿಗೆ ಮುತ್ತಿಡುತ್ತಿದೆ. ದೀಪಾವಳಿಯು ಬರೀ ಹಾವಳಿ ಯಾಗದಿರಲಿ; ಮೂಲೆ ಮೂಲೆಯ ತಬ್ಬಿ ಮುತ್ತಿಡುವ ಕತ್ತಲೆಗೆ ಚಳಿಯಿಡಲಿ. ಸುಖದ ಬೆಳಗು ಮೂಡಿಬಂದು ಮೊಗದಿ ನಗೆಯು ಚಿಮ್ಮಲಿ. ಮನುಜನೀ ಬಾಳ ಪಯಣದಲಿ ಭರವಸೆಯ ಬೆಳಕು ಹೊಮ್ಮಲಿ. ಬೆಳಕು ಬಾಳ ಬೆಳಗಲಿ. ಬದುಕು ಸದಾ ನಳನಳಿಸಲಿ. ಮನದಿ ಮುದವು ತುಂಬಲಿ… ಡಾ| ಮೈತ್ರಿ ಭಟ್, ವಿಟ್ಲ