Advertisement

ದಲಿತರಿಗೆ ಮೂಲಭೂತ ಹಕ್ಕು ಸಿಗಲಿ

12:49 PM Dec 07, 2019 | Team Udayavani |

ಗೌರಿಬಿದನೂರು: ಸಂವಿಧಾನ ಅನುಷ್ಠಾನಕ್ಕೆ ಬಂದು ಏಳು ದಶಕ ಕಳೆದರೂ ಇಂದಿಗೂ ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ರ ಆಶಯಗಳು ಇನ್ನೂ ಈಡೇರಿಲ್ಲ. ದಲಿತರಿಗೆ ಶಿಕ್ಷಣ, ಸಾಮಾಜಿಕ ಸ್ಥಿತಿಗತಿ ಮತ್ತು ಮೂಲಭೂತ ಹಕ್ಕುಗಳ ಲಭ್ಯತೆ ಮರೀಚಿಕೆಯಾಗಿಯೇ ಉಳಿದಿದೆ ಎಂದು ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕ ಹಾಗೂ ಮುಖಂಡ ಹುದಗೂರು ನಂಜುಂಡಪ್ಪ ಹೇಳಿದರು.

Advertisement

ತಾಲೂಕಿನ ಹುದೂಗೂರು ಗ್ರಾಮದಲ್ಲಿ ಡಾ.ಬಿ.ಆರ್‌.ಅಂಬೇಡ್ಕರ್‌ರ 63 ನೇ ಪರಿನಿರ್ವಾಣ ಅಂಗವಾಗಿ ಅಂಬೇಡ್ಕರ್‌ ಯುವಕರ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ನಮನ ಕಾರ್ಯ ಕ್ರಮದಲ್ಲಿ ಅವರು ಮಾತನಾಡಿದರು. ಸಂವಿಧಾನ ಯಥಾವತ್ತಾಗಿ ಜಾರಿ ಆಗದಿರುವುದರಿಂದ ದಲಿತರು ಇನ್ನೂ ಇದೇ ಸ್ಥಿತಿಯಲ್ಲಿರುವಂತಾಗಿದೆ. ಆಳುವ ಸರ್ಕಾರಗಳು ಅಧಿಕಾರಿ ಗಳಲ್ಲಿ ಕಾರ್ಯ ಬದ್ಧತೆ ಇಲ್ಲದೇ ಅವರ ಹಕ್ಕುಗಳಿಗೆ ಚ್ಯುತಿಯಾಗಿ ಅಂಧಕಾರದಲ್ಲಿ ಬದುಕು ವಂತಾ ಗಿದೆ ಎಂದರು.

ದಲಿತ ಸಂಘಟನೆಗಳ ಪದಾಧಿಕಾರಿಗಳು ಇನ್ನಾದರೂ ಎಚ್ಚೆತ್ತು ದಲಿತರಿಗೆ ಸಿಗ  ಬೇಕಾದ ಸವಲತ್ತುಗಳ ಬಗ್ಗೆ ಅರಿತು ಪಡೆಯಲು ಪ್ರಯತ್ನಿಸಬೇಕು. ಜನಪ್ರತಿನಿಧಿ ಗಳು ಹಾಗೂ ಅಧಿಕಾರಿಗಳು ಶೋಷಿತರಿಗೆ ಸವಲತ್ತು ತಲುಪುವಂತೆ ಮಾಡಬೇಕು. ದಲಿತರಿಗೆ ರಾಜಕೀಯ ಶಕ್ತಿ ತುಂಬಿದಾಗ ಮಾತ್ರ ಅವರಿಗೆ ನಿಜವಾದ ಸ್ವಾತಂತ್ರ್ಯ ಸಿಗಲಿದೆ ಎಂದರು.

ಕಾರ್ಯಕ್ರಮದಲ್ಲಿ ಗ್ರಾಮದ ದಲಿತ ಮುಖಂಡರಾದ ಎಚ್‌.ಬಿ.ನಾರಾಯಣಪ್ಪ, .ರಾಮಾಂಜಿನಪ್ಪ, ನರಸಿಂಹಮೂರ್ತಿ, ಬಾಲಪ್ಪ, ನಂಜುಂಡಯ್ಯ, ನಾರಾಯಣಸ್ವಾಮಿ, ಶಿವಶಂಕರ್‌, ಬಾಲಕೃಷ್ಣ , ಯೇಸು, ನಾಗರಾಜು, ಟೈಲರ್‌ ನಾಗಪ್ಪ, ರಮೇಶ, ಆಟೋ ರಮೇಶ್‌, ಪ್ರಸನ್ನ, ಎಚ್‌.ಎನ್‌.ಮೂರ್ತಿ ಮುಂತಾದವರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next