ದೇವನಹಳ್ಳಿ: ಜಿಲ್ಲೆಯ ಎಲ್ಲಾ ಮೇಲ್ವಿಚಾರಣೆ ಜಿಲ್ಲಾಧಿಕಾರಿಗಳ ಜವಾಬ್ದಾರಿಯಾಗಿದ್ದು, ಪಂಚಾಯ್ತಿ ಸದಸ್ಯರಿಂದ ಸಂಸದರವರೆಗೂ ಹಾಗೂ ಅಧಿಕಾರಿಗಳು, ಕೊರೊನಾ ವಿರುದ್ಧ ಹೋರಾಟಕ್ಕೆಶ್ರಮಿಸುವ ಮೂಲಕ ಸೋಂಕು ಮುಕ್ತ ಗ್ರಾಮವನ್ನಾಗಿ ಮಾಡುವುದೇ ಮೊದಲ ಆದ್ಯತೆ ಆಗಿರಲಿ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಜಿಲ್ಲಾಧಿಕಾರಿಗಳಿಗೆ ಕಿವಿಮಾತು ಹೇಳಿದರು.
ಕೋವಿಡ್-19 2ನೇ ಅಲೆಯಿಂದಾಗಿ ಗ್ರಾಮೀಣಪ್ರದೇಶಗಳಲ್ಲೂ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವಹಿನ್ನೆಲೆ ಸೂಕ್ತ ನಿಯಂತ್ರಣ ಕ್ರಮ ಕೈಗೊಳ್ಳಲು ಪ್ರಧಾನಿನರೇಂದ್ರ ಮೋದಿ ವಿವಿಧ ರಾಜ್ಯಗಳ ಕೆಲವು ಜಿಲ್ಲಾಧಿಕಾರಿಗಳೊಂದಿಗೆ ನಡೆದ ವಿಡಿಯೋಕಾನ್ಫರೆನ್ಸ್ ನಲ್ಲಿ ಮಾತನಾಡಿದರು.ಆ್ಯಂಬುಲೆನ್ಸ್‌ಕೊರತೆ ಆಗದಿರಲಿ: ಜಿಲ್ಲಾಧಿಕಾರಿಗಳು ಕಮಾಂಡರ್ ರೀತಿ ಕೆಲಸ ಮಾಡಬೇಕು. ಜನಪ್ರತಿನಿಧಿಗಳ ಸಮಿತಿ ರಚಿಸಿ, ಗ್ರಾಮ ಮಟ್ಟದಿಂದ ಟಾಸ್ಕ್ಪೋರ್ಸ್ ರಚಿಸಿ, ಕೊರೊನಾ ಜಾಗೃತಿ, ಲಸಿಕೆ ಸೇರಿಸಮಗ್ರ ಮಾಹಿತಿ ತಲುಪಿಸಬೇಕು. ಅಗತ್ಯ ಬಿದ್ದಲ್ಲಿ ಕಾರ್ ಆ್ಯಂಬುಲೆನ್ಸ್ ಸಿದ್ಧಪಡಿಸಿಟ್ಟುಕೊಂಡು ಆ್ಯಂಬುಲೆನ್ಸ್‌ಕೊರತೆ ಆಗದಂತೆ ಕ್ರಮವಹಿಸಿ ಎಂದರು.
ಧೈರ್ಯವಾಗಿರಿ: ಕಂಟೈನ್ಮೆಂಟ್ ಜೋನ್‌ಗಳಲ್ಲಿ ಹೆಚ್ಚುಕೋವಿಡ್ ಪರೀಕ್ಷೆ ಮಾಡುವ ಮೂಲಕ ಕೊರೊನಾ ಸರಪಳಿ ಮುರಿಯಲು ತಿಳಿಸಿದರು. ಫ್ರಂಟ್ ಲೈನ್‌ವಾರಿಯರ್ಸ್‌ಗಳಾದ ಡಾಕ್ಟರ್, ಪೊಲೀಸ್, ಮಾಧ್ಯಮದವರೊಂದಿಗೆ ಸಮನ್ವಯ ಸಾಧಿಸುವಮೂಲಕ, ಧೈರ್ಯವಾಗಿರುವಂತೆ ಕ್ರಮವಹಿಸಿಎಂದರು.
ನಿಮ್ಮ ಜಿಲ್ಲೆಯ ಪ್ರತಿಯೊಬ್ಬರ ಜೀವ ಮುಖ್ಯವಾಗಿದ್ದು, ಎಲ್ಲಾ ವಿಭಾಗಗಳಲ್ಲೂ ಸಫಲರಾಗುವಂತೆ ಕಾರ್ಯನಿರ್ವಹಿಸಬೇಕು ಹಾಗೂ ಜಿಲ್ಲಾಧಿಕಾರಿಗಳು ಆಕ್ಸಿಜನ್ ಬಳಕೆ, ನಿರ್ವಹಣೆಸರಿಯಾಗಿ ಮಾಡಬೇಕು ಎಂದರು.ಪ್ರಧಾನಿ ನರೇಂದ್ರ ಮೋದಿ, ಬಿಬಿಎಂಪಿ ಮುಖ್ಯಆಯುಕ್ತರಾದ ಗೌರವ್ ಗುಪ್ತ ಸೇರಿ ಚಂಡೀಗಢ,ಪಾಟ್ನಾ ಡೆಹ್ರಾಡೂನ್, ಚೆನ್ಮೆ„ಹಾಗೂ ಇಂದೋನರ್‌ಜಿÇÉೆಯ ಅಧಿಕಾರಿಗಳೊಂದಿಗೆ ಸಂವಾದ ನಡೆಸಿದರು.
ಸಂವಾದ:ಕೇಂದ್ರ ಗೃಹ ಸಚಿವರಾದ ಅಮಿತ್ ಶಾ,ರಕ್ಷಣಾ ಸಚಿವರಾದ ರಾಜನಾಥ್ ಸಿಂಗ್, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮಧ್ಯಪ್ರದೇಶಮುಖ್ಯ ಮಂತ್ರಿ ಶಿವರಾಜ್‌ಸಿಂಗ್ ಚೌವ್ಹಾಣ್,ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಸೇರಿದಂತೆರಾಜ್ಯದ 17 ರಾಜ್ಯಗಳ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು ಪ್ರಧಾನಿ ಅವರ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಭಾಗವಹಿಸಿದ್ದರು.
ತಾಲೂಕಿನಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತಭವನದಲ್ಲಿರುವ ರಾಷ್ಟ್ರೀಯ ಮಾಹಿತಿ ಕೇಂದ್ರದವಿಡಿಯೋ ಕಾನ್ಫರೆನ್ಸ್ ಸಭಾಂಗಣದಲ್ಲಿ ಜಿಲ್ಲಾಧಿಕಾರಿಕೆ.ಶ್ರೀನಿವಾಸ್, ಜಿಪಂ ಸಿಇಒ ಎಂ.ಆರ್.ರವಿಕುಮಾರ್, ಅಪರ ಜಿಲ್ಲಾಧಿಕಾರಿ ಡಾ.ಜಗದೀಶ.ಕೆ.ನಾಯಕ, ಉಪ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀಗಣೇಶ್, ಉಪ ವಿಭಾಗಾಧಿಕಾರಿ ಅರುಳ್ ಕುಮಾರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಡಾ.ತಿಪ್ಪೇಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.