Advertisement

ಚೇತನ್ ಹಿಂದೂ ಧರ್ಮ ಟಾರ್ಗೆಟ್ ಮಾಡೋದನ್ನ ಬಿಡಲಿ: ಚಕ್ರವರ್ತಿ ಕಿಡಿ

07:21 PM Oct 19, 2022 | Team Udayavani |

ರಬಕವಿ-ಬನಹಟ್ಟಿ : ನಟ ಚೇತನ್‌ರಿಗೆ ಸಿನಿಮಾ ಮಾಡಿ ಹಿಟ್ ಮಾಡಿಕೊಳ್ಳುವ ಸಾಮರ್ಥ್ಯವಿಲ್ಲ, ಬದಲಾಗಿ ಒಂದಲ್ಲ ಒಂದು ವಿಚಾರದಿಂದ ಸನಾತನ ಹಿಂದೂ ಧರ್ಮವನ್ನು ಟಾರ್ಗೆಟ್ ಮಾಡುತ್ತಾ ಸದಾ ಸುದ್ದಿಯಲ್ಲಿರಬೇಕೆಂಬ ಹುಚ್ಚು ಮನಸ್ಸು ಅವರದಾಗಿದೆ. ಈಗ ರಿಷಬ್ ಶೆಟ್ಟಿಯವರ ಕಾಂತಾರ ಚಿತ್ರದಿಂದ ಮತ್ತೆ ವಿವಾದ ಎಬ್ಬಿಸಿರುವದು ಹೊಸತನವಲ್ಲವೆಂದು ಸೂಲಿಬೆಲೆ ಚಕ್ರವರ್ತಿ ಚೇತನ್ ವಿರುದ್ಧ ಕಿಡಿಕಾರಿದರು.

Advertisement

ಬಾಗಲಕೋಟೆ ಜಿಲ್ಲೆಯ ಬನಹಟ್ಟಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗುವ ಸಂದರ್ಭ ಮಾತನಾಡಿ, ಬುಡಕಟ್ಟು ಜನಾಂಗ, ಭಾರತೀಯ ಮೂಲ ಭಾರತೀಯ ಸಂಸ್ಕೃತಿ ಬೇರೆ ಎಂಬುದು ಎಡಪಂಕ್ತಿಯರ ವಾದ ಸಾಮಾನ್ಯವಾಗಿದೆ. ಇಡೀ ಜಗತ್ತು ಇದನ್ನು ತಿರಸ್ಕರಿಸಿದೆ ಆದರೂ ಈ ವಾದದಿಂದಲೇ ನೇತಾಡುವುದು ಬಿಟ್ಟರೆ ಹೋರಾಟದ ತಳಪಾಯ ತಪ್ಪುತ್ತದೆ ಎಂಬ ಕಲ್ಪನೆಯಾಗಿದೆ ಎಂದರು.

ಹಿಂದೂ ಧರ್ಮ ಎಲ್ಲವನ್ನೂ ಒಳಗೊಳ್ಳುವ ಧರ್ಮ, ಬುಡಕಟ್ಟು ಸೇರಿ ಯಾವದೇ ಸಂಸ್ಕೃತಿ ಹಿಂದೂ ಧರ್ಮದ ಅಂಗವಾಗಿದೆ. ದೇವರಗಿತಿಂತ ದೈವ ಹೆಚ್ಚು ಎಂಬುದು ಚಿತ್ರದಲ್ಲಿದೆ. ಆದರೆ ದೈವ ಮತ್ತು ದೇವರ ಪೂಜೆ ದಕ್ಷಿಣ ಕನ್ನಡದ ಜನ ಬೆಳೆಸಿಕೊಂಡು ಬಂದಿದ್ದಾರೆ. ದುರದೃಷ್ಟವೆಂದರೆ ಚೇತನ್‌ರಿಗೆ ಓದುವ ಅಥವಾ ಅರಿತುಕೊಳ್ಳಲು ಸಮಯವಿಲ್ಲ. ಅಲ್ಲಿನ ಜನರ ಸಂಸ್ಕೃತಿ ಸನಾತನ ಧರ್ಮದ ಭಾಗವಾಗಿ ಬದುಕುತ್ತಿರುವದನ್ನು ನೋಡಲಿ. ಮೂರ್ಖತನ ಬಿಟ್ಟು ಭಾರತೀಯ ಸಂಸ್ಕೃತಿಯೊಂದಿಗೆ ಒಂದಾಗಿ ಚೇತನ್ ಮುಂದುವರೆಯಲಿ. ಇವೆಲ್ಲ ಮಾತುಗಳನ್ನಾಡುವ ಮೊದಲು ಎರಡು ನಾಗರಿಕತೆಯನ್ನು ಬಿಟ್ಟು ಪಕ್ಕಾ ಭಾರತೀಯರಾಗುವುದನ್ನು ಕಲಿಯಲಿ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next