Advertisement

ಚನ್ನಮ್ಮ ಸಮಾಧಿ ರಾಷ್ಟ್ರೀಯ ಸ್ಮಾರಕವಾಗಲಿ

05:51 PM Dec 17, 2021 | Team Udayavani |

ಬೈಲಹೊಂಗಲ: ವೀರರಾಣಿ ಕಿತ್ತೂರು ಚನ್ನಮ್ಮಾಜಿಯ ಐಕ್ಯಸ್ಥಳವನ್ನು ರಾಷ್ಟ್ರೀಯ ಸ್ಮಾರಕವನ್ನಾಗಿಘೋಷಣೆಮಾಡಿಅಭಿವೃದ್ಧಿ ಪಡಿಸುವಂತೆ ಹಾಗೂ ವೀರರಾಣಿ ಬೆಳವಡಿ  ಮಲ್ಲಮ್ಮನ ಅಶ್ವಾರೂಢ ಮೂರ್ತಿ, ಮಹಾದ್ವಾರ ನಿರ್ಮಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆಯ ನೂರಾರು ಕಾರ್ಯಕರ್ತರು ಬೃಹತ್‌ ಪ್ರತಿಭಟನಾ ಮೆರವಣಿಗೆ ನಡೆಸಿ ಉಪವಿಭಾಗಾಧಿಕಾರಿ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದರು.

Advertisement

ನೇತೃತ್ವ ವಹಿಸಿದ್ದ ಕನ್ನಡ ಪರ ಸಂಘಟನೆಗಳ ಮುಖಂಡ ಶ್ರೀಶೈಲ ಬೋಳಣ್ಣವರ ಮಾತನಾಡಿ, ಸ್ವಾತಂತ್ರ್ಯ ಸಿಕ್ಕು 75 ವರ್ಷಗಳಾದರೂ ಇಲ್ಲಿಯವರೆಗೆ ರಾಜ್ಯ-ಕೇಂದ್ರವನ್ನಾಳಿದ ಸರಕಾರಗಳು ಚನ್ನಮ್ಮಾಜಿ ಐಕ್ಯ ಸ್ಥಳವನ್ನು ಪ್ರವಾಸಿ ಕೇಂದ್ರವನ್ನಾಗಿ ಮಾಡುವಲ್ಲಿ ನಿರ್ಲಕ್ಷ್ಯತೋರಿವೆ. ಈ ಭಾಗದ ನಾಗರಿಕರ, ಅಭಿಮಾನಿಗಳ ಒತ್ತಾಸೆದಂತೆ ಈಗಾಲಾದರೂ ವೀರರಾಣಿ ಕಿತ್ತೂರು ಚನ್ನಮ್ಮಾಜಿಯ ಸಮಾಧಿ ಸ್ಥಳವನ್ನು ರಾಷ್ಟ್ರೀಯ ಸ್ಮಾರಕವನ್ನಾಗಿ ಘೋಷಣೆ
ಮಾಡಬೇಕು ಎಂದರು.

ಸಾಮಾಜಿಕ ಕಾರ್ಯಕರ್ತ ರಫೀಕ ಬಡೇಘರ, ಕರವೇ ಜಿಲ್ಲಾ ಸಂಚಾಲಕ, ಜಿಲ್ಲಾ ಪಂಚಾಯತ ಸದಸ್ಯರಾದ ವೀರಣ್ಣ ಕರೀಕಟ್ಟಿ, ರೋಹಿಣಿ ಪಾಟೀಲ, ಬೆಳವಡಿ ಗ್ರಾಮದ ಮುಖಂಡ ಪ್ರಕಾಶ ಹುಂಬಿ ಮಾತನಾಡಿ, ವೀರರಾಣಿ ಕಿತ್ತೂರು ಚನ್ನಮ್ಮಾಜಿ ಐಕ್ಯ ಸ್ಥಳವನ್ನು ರಾಷ್ಟ್ರೀಯ ಸ್ಮಾರಕವೆಂದು ಈ ಅಧಿವೇಶನದಲ್ಲಿ ಘೋಷಿಸಬೇಕು.

ಮಹಿಳಾ ಸೈನ್ಯವನ್ನು ಕಟ್ಟುವ ಮೂಲಕ ರಾಷ್ಟ್ರಮಟ್ಟದಲ್ಲಿ ಮಹಿಳಾ ಶೌರ್ಯಕ್ಕೆ ಮಾದರಿಯಾಗಿರುವ ವೀರರಾಣಿ ಬೆಳವಡಿ ಮಲ್ಲಮ್ಮನವರ ಅಶ್ವಾರೂಢ ಮೂರ್ತಿಯನ್ನು ಬೆ„ಲಹೊಂಗಲ ಧಾರವಾಡ ರಸ್ತೆಯ ಬೈಲಹೊಂಗಲ ನಗರದ ಬಿಳಿಗುಡಿ ಹತ್ತಿರ ಸೂಕ್ತ ಸ್ಥಳದಲ್ಲಿ ಪ್ರತಿಷ್ಠಾಪಿಸಬೇಕು. ಮೂರ್ತಿಯ ಸಮೀಪ ಬೆಳವಡಿ ಮಲ್ಲಮ್ಮನವರ ನೆನಪಿಗಾಗಿ ಮಹಾದ್ವಾರವನ್ನು ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿದರು.

ಮುಖಂಡರಾದ ಮುರಗೆಪ್ಪಾ ಗುಂಡೂರ, ರಾಜು ಬೋಳಣ್ಣವರ, ಬಸವರಾಜ ಗುಡ್ಡದಮಠ, ಬೆಳವಡಿ ಗ್ರಾ.ಪಂ.ಸದಸ್ಯ ಬಸಪ್ಪ ದೇಗಾಂವಿ, ಕಾಂತಯ್ಯ ಕಾರೀಮನಿ, ಶಂಕರ ಪರಮನಾಯ್ಕರ, ಬಸವರಾಜ ಕುರಿ, ಸಿದ್ಧಾರೂಢ ಹೊಂಡಪ್ಪನ್ನವರ, ಶಶಿಕುಮಾರ ಪಾಟೀಲ, ದೀಪಕ ಶೇಟೋಜಿ, ಪಕ್ರುದ್ದೀನ ಕುಸಲಾಪೂರ, ಮಲ್ಲಿಕಾರ್ಜುನ ಬಾಜಿ, ಸೋಮು ತೋಟಗಿ, ಮಹಾಂತೇಶ ಕರೀಕಟ್ಟಿ, ರಂಜಾನ ನದಾಫ, ಚಂದ್ರಿಕಾ ಕಳಂಕರ ಸೇರಿದಂತೆ ಕರವೇ ಕಾರ್ಯಕರ್ತರು, ಅಟೋ ಚಾಲಕರು, ಬೆಳವಡಿ ಗ್ರಾಮಸ್ಥರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next