Advertisement

ಚನ್ಮಮ್ಮನ ಕಿತ್ತೂರು ಶಕ್ತಿ ಕೇಂದ್ರವಾಗಲಿ: ಶ್ರೀಬಸವ ಜಯ ಮೃತ್ಯುಂಜಯ ಸ್ವಾಮಿ

05:47 PM Feb 03, 2024 | Team Udayavani |

ಉದಯವಾಣಿ ಸಮಾಚಾರ
ಚನ್ನಮ್ಮನ ಕಿತ್ತೂರು: ಐತಿಹಾಸಿಕ ಚನ್ಮಮ್ಮನ ಕಿತ್ತೂರು ಕರ್ನಾಟಕದ ಶಕ್ತಿ ಕೇಂದ್ರವಾಗಬೇಕು. ರಾಣಿ ಕಿತ್ತೂರು ಚನ್ನಮ್ಮನ ಲಿಂಗೈಕ್ಯ ಜ್ಯೋತಿಯು ಕೇವಲ ಲಿಂಗಾಯತ ಸಮಾಜದ ಜ್ಯೋತಿಯಾಗಬಾರದು, ಇಡಿ ರಾಜ್ಯದ 7 ಕೋಟಿ ಕನ್ನಡಿಗರ ಜ್ಯೋತಿಯಾಗಬೇಕು ಎಂದು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಬಸವ ಜಯ ಮೃತ್ಯುಂಜಯ ಸ್ವಾಮಿಗಳು ಹೇಳಿದರು.

Advertisement

ವೀರ ಮಹಿಳೆ ಕಿತ್ತೂರ ರಾಣಿ ಚನ್ನಮ್ಮನವರ 195 ನೇ ಪುಣ್ಯಸ್ಮರಣೋತ್ಸವದ ನಿಮಿತ್ತ ರಾಣಿ ಚನ್ನಮ್ಮನವರ ತವರು ಮನೆ ಕಾಕತಿಯಿಂದ ಆಗಮಿಸಿದ ಲಿಂಗೈಕ್ಯ ಜ್ಯೋತಿಯನ್ನು ಕಿತ್ತೂರು ಪಟ್ಟಣದ ಹೆದ್ದಾರಿ ಪಕ್ಕದಲ್ಲಿ ಇರುವ ಚನ್ನಮ್ಮ ಸರ್ಕಲ್‌ನಲ್ಲಿ ಅದ್ದೂರಿಯಾಗಿ ಸ್ವಾಗತಿಸಿ, ಪೂಜೆ ನೆರವೇರಿಸಿ ಅವರು ಮಾತನಾಡಿದರು.

ಐತಿಹಾಸಿಕ ಕಿತ್ತೂರು ಅಭಿವೃದ್ಧಿ ವಿಷಯದಲ್ಲಿ ಸರ್ಕಾರಗಳು ಮಲತಾಯಿ ಧೋರಣೆ ತೋರುತ್ತಿವೆ. ನಮ್ಮ ಕಿತ್ತೂರು ಅಭಿವೃದ್ಧಿ ಆಗದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವ ಎಚ್ಚರಿಕೆ ನೀಡಿದ ಅವರು, ಎಲ್ಲರೂ ಸೇರಿ ಕಿತ್ತೂರು ನಾಡನ್ನು ವಿಶ್ವಮಟ್ಟದಲ್ಲಿ ತೆಗೆದುಕೊಂಡು ಹೋಗುವಲ್ಲಿ ಶ್ರಮ ವಹಿಸೋಣ ಎಂದರು.

ಶಾಸಕ ಬಾಬಾಸಾಹೇಬ ಪಾಟೀಲ ಮಾತನಾಡಿ, ರಾಣಿ ಚನ್ನಮ್ಮನವರ ಪುಣ್ಯತಿಥಿ ಕುರಿತು ಕೆಲವರಿಗೆ ಮಾಹಿತಿ ಇಲ್ಲ. ಬರುವ ದಿನಗಳಲ್ಲಿ ಪ್ರತಿ ಪುಣ್ಯತಿಥಿಯಂದು ಅತಿ ಅದ್ದೂರಿಯಾಗಿ ಆಚರಣೆ ಮಾಡೋಣ. ಮುಂಬರುವ ದಿನಗಳಲ್ಲಿ ಕಿತ್ತೂರು ಕೋಟೆಯ ಅಭಿವೃದ್ಧಿ ಮಾಡಲಾಗುವುದು ಎಂದರು.

ರಾಜಗುರು ಸಂಸ್ಥಾನ ಕಲ್ಮಠದ ಶ್ರೀ ಮಡಿವಾಳ ರಾಜಯೋಗೇಂದ್ರ ಸ್ವಾಮಿಗಳು ಮಾತನಾಡಿ, ನಿನ್ನೆಯ ಬಜೆಟ್‌ನಲ್ಲಿ ಕೇಂದ್ರ ಸರ್ಕಾರ ಪ್ರವಾಸೋದ್ಯಮಕ್ಕೆ ಹೆಚ್ಚಿನ ಆದ್ಯತೆ ನೀಡುವುದಾಗಿ ಹೇಳಿದೆ. ಕೇಂದ್ರ ಸರ್ಕಾರ ಮೊಟ್ಟಮೊದಲು ಐತಿಹಾಸಿಕ ಕಿತ್ತೂರು ಪಟ್ಟಣವನ್ನು ಪ್ರವಾಸಿ ತಾಣವಾಗಿ ಮಾಡಲು ಶ್ರಮ ವಹಿಸಬೇಕು ಮತ್ತು ಇಲ್ಲಿಯ ಸ್ಮಾರಕಗಳನ್ನು ರಾಷ್ಟ್ರೀಯ ಸ್ಮಾರಕ
ಎಂದು ಘೋಷಣೆ ಮಾಡಬೇಕು ಎಂದರು.

Advertisement

ಕೆಪಿಸಿಸಿ ಸದಸ್ಯೆ ರೋಹಿಣ ಪಾಟೀಲ, ನ್ಯಾಯವಾದಿ ಎಫ್‌. ಎಸ್‌. ಸಿದ್ದನಗೌಡರ, ಪಂಚಮಸಾಲಿ ಸಮಾಜದ ಬೈಲಹೊಂಗಲ ತಾಲೂಕು ಅಧ್ಯಕ್ಷ ಶ್ರೀಶೈಲ ಬೋಳನ್ನವರ, ಕಿತ್ತೂರು ತಾಲೂಕಾ ಅಧ್ಯಕ್ಷ ಡಿ. ಆರ್‌. ಪಾಟೀಲ, ಅಡವೇಶ ಇಟಗಿ, ಮುರಿಗೆಪ್ಪ ಗುಂಡ್ಲೂರ, ಪಂಚಸೇನಾ ರಾಜ್ಯ ಅಧ್ಯಕ್ಷ ರುದ್ರಗೌಡ ಬಂಡಿ, ಜಿಲ್ಲಾಧ್ಯಕ್ಷ ರಾಮನಗೌಡ ಪಾಟೀಲ, ಉಪಾಧ್ಯಕ್ಷ ಕಿರಣ ವಾಳದ, ಕಿತ್ತೂರು ತಾಲೂಕಾ ಅಧ್ಯಕ್ಷ ಮಹಾಂತೇಶ ಕರಬಸನ್ನವರ, ಕ್ಯೂರೇಟರ್‌ ರಾಘವೇಂದ್ರ, ಕೃಷ್ಣಾ ಬಾಳೇಕುಂದರಗಿ, ಅಸ್ಪಾ ಕ ಹವಾಲ್ದಾರ, ರೂಪಾ ಮಿರಜಕರ, ರಂಜನಾ ಬುಲಬುಲೆ, ಶಿಕ್ಷಕಿ ವೀಣಾ ಹಿರೇಮಠ, ಸೌಮ್ಯ ರಾಘವೇಂದ್ರ, ಸುಧಾ ಕುಪ್ಪಸಗೌಡ್ರ,
ಶಶಿಕಲಾ ಬೆನಚಮರಡಿ, ವೀಣಾ ನಾಡಗೌಡರ, ಸೇರಿದಂತೆ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next