Advertisement
ಕೋಪಗಳನ್ನು ನಿಯಂತ್ರಿಸುವುದು ಹೇಗೆ?ನೀವು ತುಂಬಾ ಕೋಪಗೊಳ್ಳುವವರಾಗಿದ್ದಾರೆ ನಿಮ್ಮ ಕೋಪಕ್ಕೆ ಕಾರಣವಾಗುವ ವಿಷಯಗಳ ಕುರಿತು ಆತ್ಮಾವಲೋಕನ ನಡೆಸಿಕೊಳ್ಳಿ. ಇದಕ್ಕೆ ಕುಟುಂಬ ಸದಸ್ಯರ, ಗೆಳೆಯರ ಸಹಾಯ ಪಡೆದುಕೊಳ್ಳಿ.
Related Articles
Advertisement
– ಆರೋಗ್ಯಕರ ರೀತಿಯಿಂದ ಕೋಪವನ್ನು ಪ್ರಕಟಿಸಲು ಬೇರೆ ಮಾರ್ಗವನ್ನು ನೋಡಿಕೊಳ್ಳಿ. ವಾದ್ಯ ಸಂಗೀತವನ್ನು ಆಸ್ವಾದಿಸಬಹುದು. ಚಿತ್ರ ರಚನೆ ಮಾಡಬಹುದು. ಕೆಲವರು ಇಂತಹ ಸಂದರ್ಭದಲ್ಲಿ ಪತ್ರ ಬರೆಯುವುದೂ ಇದೆ. ಇವು ಅವರನ್ನು ಶಾಂತರನ್ನಾಗಿಸುತ್ತದೆ.
– ಕೋಪದಿಂದಾಗುವ ಗುಣ ದೋಷಗಳ ಒಂದು ಪಟ್ಟಿ ತಯಾರಿಸಿ. ಕೋಪ ಇಳಿದ ಸಂದರ್ಭದಲ್ಲಿ ಅದನ್ನು ಓದುತ್ತಾ ಇರಿ. ಇದು ನಿಮ್ಮ ಕೋಪವನ್ನು ಕಡಿಮೆ ಮಾಡಲಿದೆ.
– ಹಾಸ್ಯ ಎಲ್ಲ ರೀತಿಯ ಮನೋರೋಗಕ್ಕೆ ಒಳ್ಳೆಯ ಅಸ್ತ್ರ. ಈ ಮನೋಭಾವವನ್ನು ರೂಢಿಸಿಕೊಳ್ಳಿ. ಹಾಸ್ಯಬರಹ, ಕಾರ್ಟೂನ್‌ಗಳನ್ನು ಆಸ್ವಾದಿಸಿ. ನೀವು ತುಂಬಾ ಇಷ್ಟ ಪಡುವ ಹಾಸ್ಯಗಳಿಗೆ ಕಿವಿಯಾಗಲು ಪ್ರಯತ್ನಿಸಿ.
– ಕೋಪ ಪ್ರಕಟನೆಗೆ ಸಾಧ್ಯತೆ ಇಲ್ಲದಂತಾಗಲು ಬೇರೆ ಬೇರೆ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ. ಇವು ನಿಮ್ಮ ಮನಸ್ಸನ್ನು ಬೇರೆ ಕಡೆಗೆ ಕರೆದೊಯ್ಯುತ್ತದೆ. ಜೋರಾಗಿ ಹಾಡುವುದು, ಶಟ್ಲ, ವಾಲಿಬಾಲ್, ಬಾಸ್ಕೆಟ್ ಬಾಲ್, ಟೆನಿಸ್ ಮುಂತಾದ ಆಟಗಳನ್ನು ಆಡುವುದು, ಈಜುವುದು ಇವೆಲ್ಲಾ ಕೋಪದ ವ್ಯಾಪ್ತಿಯನ್ನು ತೀವ್ರತೆಯನ್ನು ಕಡಿಮೆಗೊಳಿಸುತ್ತದೆ.
– ಕೌನ್ಸೆಲರ್, ಸೈಕೋಲಜಿಸ್ಟ್, ಯೋಗ ಶಿಕ್ಷಕರು ಮೊದಲಾದ ಪ್ರೊಫೆಶನಲ್‌ಗಳ ಸಹಾಯದೊಂದಿಗೆ ಕೋಪ ನಿಯಂತ್ರಣ ಮಾಡಿಕೊಳ್ಳಲು ಸಾಧ್ಯ. ತಜ್ಞರ ಸಹಾಯದಿಂದ ರಿಲ್ಯಾಕ್ಸೇಶನ್ ಥೆರಪಿ ಅಭ್ಯಾಸ ಮಾಡಿಕೊಳ್ಳಿ.
- ಕಾರ್ತಿಕ್ ಅಮೈ