Advertisement

ಬಿಜೆಪಿಗೆ ಜನರಿಂದ ತಕ್ಕ ಪಾಠ: ಸಿದ್ದರಾಮಯ್ಯ

12:24 AM Apr 10, 2019 | Lakshmi GovindaRaju |

ಮಹದೇವಪುರ: 2014ರ ಲೋಕಸಭಾ ಚುನಾವಣೆಯಲ್ಲಿ ಸುಳ್ಳು ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದು ಸಾರ್ವಜನಿಕರಿಗೆ ವಂಚಿಸಿರುವ ಬಿಜೆಪಿ ಪಕ್ಷಕ್ಕೆ ಈ ಬಾರಿ ಮತದರಾರು ತಕ್ಕ ಪಾಠ ಕಲಿಸಲಿದ್ದಾರೆಂದು ಕಾಂಗ್ರೆಸ್‌ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹೇಳಿದರು.

Advertisement

ಕ್ಷೇತ್ರದ ಆವಲಹಳ್ಳಿ ಆಯೋಜಿಸಲಾಗಿದ್ದ ಬೆಂಗಳೂರು ಕೇಂದ್ರ ಲೋಕಸಭಾ ಅಭ್ಯರ್ಥಿ ರಿಜ್ವಾನ್‌ ಅರ್ಷದ್‌ ಪರ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡು ಮಾತನಾಡಿದರು. 2014 ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರಲು ಪ್ರಧಾನಿ ನರೇಂದ್ರ ಮೋದಿ ವಿದೇಶದಲ್ಲಿರುವ ಕಪ್ಪು ಹಣ ತಂದು ಎಲ್ಲರ ಬ್ಯಾಂಕ್‌ ಖಾತೆಗಳಿಗೆ 15 ಲಕ್ಷ ರೂ. ಹಾಕುತ್ತೇನೆ ಎಂದು ಮೋಸ ಮಾಡಿದ್ದಾರೆ ಎಂದು ಟೀಕಿಸಿದರು.

ನರೇಂದ್ರ ಮೋದಿಯವರ ಬಾಯಿ ಬಡಾಯಿ ಸಾಧನೆ ಶೂನ್ಯ, ಮನ್‌ಕೀ ಬಾತ್‌ ಬೇಡ ಕಾಮ್‌ಕೀ ಬಾತ್‌ ಮಾಡಿ ಎಂದು ಲೇವಡಿ ಮಾಡಿದರು. ಈಗ ಚೌಕಿದಾರ್‌ ಎಂದು ಹೇಳುತ್ತಿದ್ದಾರೆಂದರೆ ಅದು ಚೌಕಿದಾರ್‌ ಅಲ್ಲ ಭ್ರಷ್ಟಾಚಾರದಲ್ಲಿ ಬಾಗಿದಾರ್‌ ಎಂದು ಆರೋಪಿಸಿದರು. ಬೆಂಗಳೂರು ಸೆಂಟ್ರಲ್‌ ಲೋಕಸಭಾ ಕ್ಷೇತ್ರದಿಂದ ಎರಡು ಅವಧಿಗೆ ಆಯ್ಕೆಯಾಗಿದ್ದ ಪಿ.ಸಿ.ಮೋಹನ್‌ ಕ್ಷೇತ್ರದ ಅಭಿವೃದ್ಧಿ ಮರೆತ್ತಿದ್ದಾರೆ ಅವರಿಗೆ ಈ ಬಾರಿ ಜನರು ತಕ್ಕ ಪಾಠ ಕಲಿಸಿ ಎಂದು ಸಲಹೆ ನೀಡಿದರು.

ಶಾಸಕರಾದ ಭೈರತಿ ಬಸವರಾಜ್‌, ಸುರೇಶ್‌, ವಿಧಾನ ಪರಿಷತ್‌ ಸದಸ್ಯ ಗೋವಿಂದ್‌ರಾಜ್‌, ಜಿಲ್ಲಾಧ್ಯಕ್ಷ ಶೇಖರ್‌, ಬೆಂ.ಕೇಂದ್ರ ಲೋಕಸಭಾ ಅಭ್ಯರ್ಥಿ ರಿಜ್ವಾನ್‌ ಹರ್ಷದ್‌, ಕೆಪಿಸಿಸಿ ಕಾರ್ಯದರ್ಶಿ ಎ.ಸಿ.ಶ್ರೀನಿವಾಸ್‌, ಜಿಪಂ ಸದಸ್ಯ ಕೆ.ಕೆಂಪರಾಜು, ಪಾಲಿಕೆ ಸದಸ್ಯ ನಿತೀಶ್‌ ಪುರುಷೋತ್ತಮ್‌, ಎ.ಸಿ.ಹರಿಪ್ರಸಾದ್‌, ಮುಖಂಡರಾದ ರಾಮಕೃಷ್ಣಪ್ಪ, ಸುರೇಶ್‌, ರಾಜೇಶ್‌ ಇತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next