Advertisement

ಅಧಿಕಾರಿಗಳಿಗೆ ಮತ ಪಾಠ

04:46 PM May 10, 2018 | |

ಧಾರವಾಡ: ವಿಧಾನಸಭಾ ಚುನಾವಣೆ ಅಂಗವಾಗಿ ಮೇ 15ರಂದು ಮತ ಎಣಿಕೆ ಕಾರ್ಯ ನಡೆಯಲಿದ್ದು, ಮತ ಎಣಿಕೆಗೆ ನಿಯೋಜಿಸಿದ ಅಧಿಕಾರಿಗಳು, ಆಯೋಗ ನೀಡಿರುವ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಚುನಾವಣಾ ವೀಕ್ಷಕ ರೂಪಕ್‌ ಮಜುಂದಾರ್‌ ಹೇಳಿದರು.

Advertisement

ನಗರದ ಆಲೂರು ವೆಂಕಟರಾವ್‌ ಭವನದಲ್ಲಿ ಸೆಕ್ಟರ್‌ ಅಧಿಕಾರಿಗಳು, ಮತ ಎಣಿಕೆ ಮೇಲ್ವಿಚಾರಕರು ಹಾಗೂ ಮತ ಎಣಿಕೆ ಸಹಾಯಕ ಅ ಧಿಕಾರಿಗಳಿಗೆ ಮತ ಎಣಿಕೆ ಕಾರ್ಯ ಕುರಿತು ಹಮ್ಮಿಕೊಳ್ಳಲಾಗಿದ್ದ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಇದುವರೆಗೆ ಮುಕ್ತ, ನ್ಯಾಯಸಮ್ಮತ, ಶಾಂತಿಯುತ ಚುನಾವಣಾ ಪ್ರಕ್ರಿಯೆ ನಡೆಯುತ್ತಿದೆ. ಮತ ಎಣಿಕೆ ಕಾರ್ಯ ಸಹ ಸಮರ್ಪಕವಾಗಿ ನಡೆಯುವಂತೆ ಎಚ್ಚರ ವಹಿಸಬೇಕು. ಯಾವುದೇ ಒತ್ತಡಗಳಿಗೆ ಒಳಗಾಗದೇ ಕರ್ತವ್ಯ ನಿರ್ವಹಿಸಬೇಕು. ಪ್ರತಿ ಸುತ್ತಿನ ನಂತರ ಅಭ್ಯರ್ಥಿಯ ಪ್ರತಿನಿಧಿಗಳ ಸಹಿ ಪಡೆಯಬೇಕು ಎಂದರು.

ಜಿಲ್ಲಾ ಚುನಾವಣಾಧಿಕಾರಿ ಡಾ|ಎಸ್‌ .ಬಿ.ಬೊಮ್ಮನಹಳ್ಳಿ ಮಾತನಾಡಿ, ಕೃಷಿ ವಿವಿಯಲ್ಲಿ ಜಿಲ್ಲೆಯ ಎಲ್ಲ ಏಳೂ ಕ್ಷೇತ್ರಗಳ ಮತ ಎಣಿಕೆ ನಡೆಸಲಾಗುವುದು. ಈಗಾಗಲೇ ಮತ ಎಣಿಕೆ ಕೇಂದ್ರ ಸಜ್ಜುಗೊಂಡಿದೆ. ಪ್ರತಿ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆಗೆ ಪ್ರತ್ಯೇಕ ಕೊಠಡಿ ನಿಗದಿಪಡಿಸಲಾಗಿದೆ. ಇವಿಎಂ ಸ್ಟ್ರಾಂಗ್  ರೂಮ್‌ ಸ್ಥಾಪಿಸಲಾಗಿದೆ ಎಂದರು.

ಮತ ಎಣಿಕಾ ಕೇಂದ್ರದಲ್ಲಿ ಮೀಡಿಯಾ ಸೆಂಟರ್‌, ಪೊಲೀಸ್‌ ವೇಟಿಂಗ್‌ ರೂಮ್‌, ವೀಕ್ಷಕರ ಕೊಠಡಿ ಹಾಗೂ ಡಿಇಒ ರೂಮ್‌ಗಳನ್ನು ನಿಗದಿಪಡಿಸಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರದ ಮತ ಎಣಿಕೆಗಾಗಿ 14 ಟೇಬಲ್‌ನಂತೆ ವ್ಯವಸ್ಥೆ ಮಾಡಲಾಗುವುದು. ಪ್ರತಿ ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಕಾರ್ಯ ಅಂದಾಜು 15 ರಿಂದ 20 ಸುತ್ತುಗಳಲ್ಲಿ ನಡೆಯಲಿದೆ ಎಂದರು.

ಮತ ಎಣಿಕೆ ಕಾರ್ಯ ಸುಗಮವಾಗಿ ನಡೆಯಬೇಕಿದ್ದು, ಇದಕ್ಕಾಗಿ ನಿಯೋಜಿಸಲಾದ ಅಧಿಕಾರಿಗಳು ಮೇ 15ರಂದು ಬೆಳಿಗ್ಗೆ 5:30 ಗಂಟೆಗೆ ಕಡ್ಡಾಯವಾಗಿ ಕರ್ತವ್ಯಕ್ಕೆ ಹಾಜರಾಗಿ ವರದಿ ಮಾಡಿಕೊಳ್ಳಬೇಕು. ತಮಗೆ ಹಂಚಿಕೆಯಾದ ವಿಧಾನಸಭಾ ಕ್ಷೇತ್ರ ಹಾಗೂ ಟೇಬಲ್‌ ಸಂಖ್ಯೆಯನ್ನು ತಿಳಿದುಕೊಳ್ಳಬೇಕು ಎಂದರು.

Advertisement

ಬೆಳಿಗ್ಗೆ 8:00 ಗಂಟೆಗೆ ಸರಿಯಾಗಿ ಪೋಸ್ಟಲ್‌ ಮತಗಳ ಎಣಿಕೆ ಕ್ಷೇತ್ರ ಚುನಾವಣಾಧಿ ಕಾರಿಗಳ ಟೇಬಲ್‌ನಲ್ಲಿ ಪ್ರಾರಂಭಗೊಂಡು, ಉಳಿದಂತೆ ಮತಗಟ್ಟೆಗಳಲ್ಲಿ ಇವಿಎಂ ಮೂಲಕ ದಾಖಲಾದ ಮತಗಳ ಎಣಿಕೆ ಕಾರ್ಯ ಪ್ರಾರಂಭವಾಗುತ್ತದೆ. ಆಯೋಗ ನೀಡಿರುವ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದರು.

ಉಪವಿಭಾಗಾಧಿಕಾರಿ ಪಿ. ಜಯಮಾಧವ ಮಾತನಾಡಿದರು. ಅಪರ ಜಿಲ್ಲಾಧಿ ಕಾರಿ ರಮೇಶ ಕಳಸದ, ಪ್ರೊಬೆಷನರಿ ಉಪವಿಭಾಗಾ ಧಿಕಾರಿ ಶೇಖರ್‌ ಇದ್ದರು. ತರಬೇತಿಯಲ್ಲಿ ಚುನಾವಣಾ ಮತ ಎಣಿಕೆಗೆ ನಿಯೋಜನೆಗೊಂಡಿರುವ ಮತ ಎಣಿಕೆ ಮೇಲ್ವಿಚಾರಕರು ಹಾಗೂ ಮತ ಎಣಿಕೆ ಸಹಾಯಕರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next