ಬೆಂಗಳೂರು: ಗ್ಯಾರಂಟಿಗಳನ್ನು ಕೊಟ್ಟಿದ್ದರಿಂದ ಬರದ ತೀವ್ರತೆ ಕಡಿಮೆಯಾಗಿದೆ. ಬಡವರ ಕುಟುಂಬಕ್ಕೆ ಹಣ ದೊರೆಯುತ್ತಿದ್ದು, ಕೊಳ್ಳುವ ಶಕ್ತಿ ಇದೆ. ಇಲ್ಲದಿದ್ದರೆ ಹಾಹಾಕಾರ ಆರಂಭವಾಗುತ್ತಿತ್ತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಳವಳ ವ್ಯಕ್ತಪಡಿಸಿದರು.
ಸೋಮವಾರ ತಮ್ಮನ್ನು ಭೇಟಿ ಮಾಡಿ ಹೊಸವರ್ಷದ ಶುಭ ಕೋರಿದ ಅಧಿಕಾರಿಗಳು ಹಾಗೂ ನಾಡಿನ ಜನರಿಗೆ ಹೊಸವರ್ಷದ ಶುಭಾಶಯ ಕೋರಿದ ಸಿಎಂ, ನಾವೆ ಲ್ಲರೂ 2024ನೇ ವರ್ಷಕ್ಕೆ ಕಾಲಿಡು ತ್ತಿದ್ದು, ಈ ವರ್ಷ ರಾಜ್ಯಕ್ಕೆ ಆಶಾದಾಯಕವಾಗಿದೆ ಎಂದರು.
ಅಭಿವೃದ್ಧಿಯ ಫಲಕ್ಕಾಗಿ ಸಮೃದ್ಧಿಯ ಮಳೆ ಬೇಕು ರಾಜ್ಯದ 48 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ 35 ಸಾವಿರ ಕೋಟಿ ರೂ. ಮೊತ್ತದ ಬೆಳೆ ನಷ್ಟವಾಗಿದೆ. ಪ್ರಕೃತಿ ಸಹಾಯ ಇಲ್ಲದಿದ್ದರೆ, ಸರಕಾರ ಏನು ಪರಿಹಾರ ಕೊಟ್ಟರೂ ಸಾಕಾಗು ವುದಿಲ್ಲ. ಹವಾಮಾನ ಬದಲಾವಣೆ ಯಿಂದಾಗಿ ಈ ವೈಪರೀತ್ಯ ಕಾಣುತ್ತಿದ್ದೇವೆ. ಮುಂಗಾರಿ ನಲ್ಲಿ ಒಳ್ಳೆ ಮಳೆಯಾಗುವ ನಿರೀಕ್ಷೆ ಯಿದೆ. ಶೇ.60ಕ್ಕೂ ಹೆಚ್ಚು ಜನರು ವ್ಯವಸಾಯದ ಮೇಲೆ ಅವಲಂಬಿತ ರಾಗಿದ್ದಾರೆ. 2024ರಲ್ಲಿ ನಿರೀಕ್ಷಿತ ಅಭಿವೃದ್ಧಿಯ ಫಲ ಕಾಣಲು ಸಮೃದ್ಧಿ ಯಾಗಿ ಮಳೆ ಬೆಳೆ ಆಗಲಿ ಎಂದು ಪ್ರಾರ್ಥನೆ ಮಾಡುವುದಾಗಿ ತಿಳಿಸಿದರು.
ಸಂವಿಧಾನ ಅರಿತು
ಕೆಲಸ ಮಾಡೋಣ
ಇದೇ ಸಂದರ್ಭದಲ್ಲಿ ಸರ್ಕಾರದ ಅಭಿವೃದ್ಧಿ ಆಯುಕ್ತೆ ಡಾ. ಶಾಲಿನಿ ರಜನೀಶ್ ಅವರು ಬರೆದಿರುವ “ಸುಸ್ಥಿರ ಬದುಕಿನ ಸುತ್ತ ಆಶಾಕಿರಣ’ ಪುಸ್ತಕವನ್ನು ಸಿಎಂ ಬಿಡುಗಡೆ ಮಾಡಿದರು.
ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಕೆ.ಗೋವಿಂದರಾಜು, ನಜೀರ್ ಅಹ್ಮದ್, ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ಸೇರಿ ಅಧಿಕಾರಿಗಳು ಉಪಸ್ಥಿತರಿದ್ದರು. ಜನರ ನಿರೀಕ್ಷೆ ಹುಸಿಯಾಗದ ರೀತಿ ಕೆಲಸ ಮಾಡಬೇಕಿದೆ. ಸಂವಿಧಾನ ಅರಿತು ಅದರಂತೆ ನಡೆಯಬೇಕಿದೆ. ಈ ದಿಕ್ಕಿನಲ್ಲಿ ಪ್ರಯತ್ನ ಮಾಡೋಣ. ಜನರ ನಿರೀಕ್ಷೆ ಹುಸಿಯಾಗದ ರೀತಿ ಕೆಲಸ ಮಾಡಬೇಕಿದೆ ಎಂದರು.