ಶ್ರೀರಂಗಪಟ್ಟಣ: ಕುಷ್ಠ ರೋಗ ಅನು ವಂಶಿಕ ರೋಗವಲ್ಲ, ಶಾಪ, ಪಾಪದ ಫಲವಲ್ಲ. ಈ ರೋಗ ಮೈಕೋಬ್ಯಾಕ್ಟಿರಿಯಾ ಲೆಪ್ರ ಎಂಬ ಸೂಕ್ಷ್ಮ ಜೀವಾಣುನಿಂದ ಬರುತ್ತದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಎನ್.ಕೆ. ವೆಂಕಟೇಶ್ ಹೇಳಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಮುಂಭಾಗ ನಡೆದ ಸ್ಪರ್ಶ ಕುಷ್ಠ ರೋಗ ಅರಿವು ಆಂದೋಲನದಲ್ಲಿ ಮಾತನಾಡಿ, ಜ.30 ರಿಂದ ಫೆ.13ರವರೆಗೆ ಎಲ್ಲಾ ಗ್ರಾಮ ಗಳಲ್ಲಿ ಕುಷ್ಠರೋಗ ಆಂದೋ ಲನ ಕಾರ್ಯಕ್ರಮ ನಡೆಯಲಿದೆ. ಕುಷ್ಠರೋಗವೂ ಮುಖ್ಯವಾಗಿ ಚರ್ಮ, ನರಗಳ ಮೇಲೆ ಪ್ರಭಾವ ಬೀರುತ್ತದೆ ಎಂದರು.
ಇದನ್ನೂ ಓದಿ:ರೈತ ವಿರೋಧಿ ಕೃಷಿ ಕಾಯ್ದೆ ಹಿಂಪಡೆಯಲು ಆಗ್ರಹ
ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ: ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ.ಪಿ. ಮಾರುತಿ ಮಾತನಾಡಿ, ಕುಷ್ಠ ರೋಗಕ್ಕೆ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಎಂಡಿಟಿ ಚಿಕಿತ್ಸೆ ನೀಡಲಾಗುತ್ತದೆ. ಈ ರೋಗವನ್ನು ಸಂಪೂರ್ಣ ಗುಣಪಡಿಸಬಹುದು. ಕುಷ್ಠ ರೋಗವನ್ನು ಶೀಘ್ರ ಪತ್ತೆ ಮಾಡಿ, ಚಿಕಿತ್ಸೆ ನೀಡಬೇಕು ಎಂದು ಹೇಳಿದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್. ಡಿ.ಬೆನ್ನೂರ್ ಪ್ರತಿಜ್ಞಾ ವಿಧಿ ಬೋಧಿಸಿದರು. ಹಿರಿಯ ಮೇಲ್ವಿಚಾರಕ ಜಿ.ಮೋಹನ್, ಹಿರಿಯ ಆರೋಗ್ಯ ಸಹಾಯಕರಾದ ಸಲೀಂ ಪಾಷ, ಶಶಿಧರ್, ಕೆಂಪೇಗೌಡ, ಹೇಮಣ್ಣ, ಕಿರಿಯ ಆರೋಗ್ಯ ಸಹಾಯಕರಾದ ಚಂದನ್, ಫಣೀಂದ್ರ, ಕೃಷ್ಣೇಗೌಡ ಉಪಸ್ಥಿತರಿದ್ದರು.