Advertisement

ಬೆಳಗಾವಿ : ಗಾಲ್ಫ್ ಕೋರ್ಸ್ ಪೊದೆಯೊಳಗೆ ಚಿರತೆ ಕಾರ್ಯಾಚರಣೆ ಆರಂಭಿಸಿದ ಅರ್ಜುನ, ಆಲೆ ಆನೆ

07:33 AM Aug 24, 2022 | Team Udayavani |

ಬೆಳಗಾವಿ: ಇಲ್ಲಿಯ ಗಾಲ್ಫ್ ಮೈದಾನದಲ್ಲಿ 20 ದಿನಗಳಿಂದ ಅರಿತುಕೊಂಡಿರುವ ಚಿರತೆ ಸೆರೆ ಹಿಡಿಯಲು ಶಿವಮೊಗ್ಗದ ಸಕ್ರೇಬೈಲು ಆನೆಬಿಡಾರದಿಂದ ಬುಧವಾರ ಬೆಳಗ್ಗೆ ಬಂದ ಎರಡು ಆನೆಗಳು ಕಾರ್ಯಾಚರಣೆ ಆರಂಭಿಸಿವೆ.

Advertisement

ಅರಣ್ಯ ಸಚಿವರ ಕ್ಷೇತ್ರದಲ್ಲಿ ಚಿರತೆ ಸೆರೆ ಕಾರ್ಯಾಚರಣೆಗೆ ಆಗಮಿಸಿರುವ ಈ ಎರಡೂ ಆನೆ‌ಗಳು ಗಾಲ್ಫ್ ಕೋರ್ಸ್ ನ ಪೊದೆಯೊಳಗೆ‌ ನುಗ್ಗಿವೆ.

ಡಾಟಿಂಗ್ ಸ್ಪೆಷಲಿಸ್ಟ್ ವನ್ಯಜೀವಿ ತಜ್ಞ ಡಾ. ವಿನಯ ನೇತೃತ್ವದಲ್ಲಿ ಈ ಸ್ಪೇಷಲ್ ಟೀಂ ಬಂದಿವೆ. ಸಕ್ರೇಬೈಲು ಬಿಡಾರದ ಅರ್ಜುನ ಹಾಗೂ ಆಲೆ ಆನೆ ಬಂದಿವೆ. ವೈದ್ಯರು, ಸಹಾಯಕ ಸಿಬ್ಬಂದಿ, ಮಾವುತರು, ಕಾವಾಡಿಗಳು ಮತ್ತು ಬಿಡಾರದ ಸಹಾಯಕ ಸಿಬ್ಬಂದಿ ಸೇರಿದಂತೆ 8 ಜನರ ತಂಡ ಆಗಮಿಸಿದೆ.

ಇದನ್ನೂ ಓದಿ : ಭಾರತ್‌ ಜೋಡೋ ಲಾಂಛನ ಬಿಡುಗಡೆ: ಭಾರತ್‌ ಯಾತ್ರಿ ಆಗಲಿದ್ದಾರೆ ರಾಹುಲ್‌ ಗಾಂಧಿ

Advertisement

Udayavani is now on Telegram. Click here to join our channel and stay updated with the latest news.

Next