Advertisement

ಹಂಪಿ: ಹಗಲಲ್ಲೇ ಚಿರತೆಗಳು ಪ್ರತ್ಯಕ್ಷ; ಪ್ರವಾಸಿಗರಲ್ಲಿ ಆತಂಕ 

12:28 PM Feb 16, 2017 | |

ಬಳ್ಳಾರಿ: ವಿಶ್ವಪರಂಪರೆಯ ತಾಣ, ಸದಾ ಪ್ರವಾಸಿಗರಿಂದ ತುಂಬಿರುವ ಹಂಪಿಯಲ್ಲಿ ಚಿರತೆಗಳು ಹಗಲಲ್ಲೇ ರಾಜಾರೋಷವಾಗಿ ತಿರುಗುತ್ತಿದ್ದು ಪ್ರವಾಸಿಗರಲ್ಲಿ ಆತಂಕ ಮೂಡಿಸಿದೆ. 

Advertisement

ಕಳೆದ ಕೆಲ ದಿನಗಳಿಂದ ಪದೇ ಪದೇ ಚಿರತೆಗಳು ಹಗಲಲ್ಲೇ ಪ್ರತ್ಯಕ್ಷವಾಗಿದ್ದು ಪ್ರವಾಸಿಗರು ಬೆಚ್ಚಿ ಬಿದ್ದಿದ್ದಾರೆ. ಕೆಲ ಪ್ರವಾಸಿಗರು ಆತಂಕದಿಂದ ಕಾಲ್ಕಿತ್ತ  ಘಟನೆಯೂ ನಡೆದಿದೆ. 

ಕಡ್ಡಿರಾಂಪುರ ಮಾರ್ಗದ ಬಳಿಯ ಕುಸ್ತಿ ಅಖಾಡದ ಬಳಿ ಕೃಷ್ಣ ಬಜಾರ್‌, ಅಕ್ಕ ತಂಗಿಯರ ಗುಡ್ಡ, ಮಾತಂಗ ಪರ್ವತ, ಯಂತ್ರೋದ್ಧಾರಕ ಆಂಜನೇಯ ಗುಡ್ಡಗಳಲ್ಲಿ ಪ್ರವಾಸಿಗರಿಗೆ ಚಿರತೆಗಳು ಪ್ರತ್ಯಕ್ಷ ವಾಗುವ ಮೂಲ ಕ ಭೀತಿ ಮೂಡಿಸಿವೆ. 

ಈ ಹಿಂದೆ ಅರಣ್ಯ ಇಲಾಖೆ ಕೆಲ ಚಿರತೆಗಳನ್ನು ಹಿಡಿರು ಅರಣ್ಯಕ್ಕೆ ಬಿಟಿದ್ದರಾದರೂ ಈಗ 7 ರಿಂದ 8 ಚಿರತೆಗಳು ಸ್ಥಳದಲ್ಲೇ ನೆಲೆಸಿರುವ ಬಗ್ಗೆ ಸ್ಥಳೀಯರು ಮಾಧ್ಯಮಗಳಿಗೆ ತಿಳಿಸಿದ್ದಾರೆ. 

ಇದೀಗ ಹಾಡಹಗಲೇ ಚಿರತೆಗಳು ಕಣ್ಣಿಗೆ ಕಾಣ ಸಿಗುವ ಕಾರಣ ಕೆಲ ಆಸಕ್ತ ವನ್ಯ ಜೀವಿ ಛಾಯಾಗ್ರಾಹಕರು ಹಂಪಿಗೆ ಆಗಮಿಸಿ ಫೋಟೋ ತೆಗೆಯಲು ಮುಂದಾಗಿದ್ದಾರೆ. 

Advertisement

ಹಂಪಿಯ ಸುತ್ತಲಿನ ಪ್ರದೇಶದಲ್ಲಿ ದಟ್ಟ ಪೊದೆಗಳು ಮತ್ತು ಅರಣ್ಯವಿರುವುದರಿಂದ ಚಿರತೆ ಮತ್ತು ಕರಡಿಗಳು ವಾಸವಾಗಿವೆ. ಈ ಬಗ್ಗೆ ಅರಣ್ಯ ಇಲಾಖೆ ಯೂ ತಲೆ ಕೆಡಿಸಿಕೊಂಡಿದ್ದು  ಪ್ರವಾಸಿಗರಿಗೆ ಮುಂದಾಗುವ ಸಂಭಾವ್ಯ ಅಪಾಯವನ್ನು ತಪ್ಪಿಸುವ ಸಲುವಾಗಿ ಚಿರತೆಗಳನ್ನು ಸೆರೆ ಹಿಡಿದು ಸುರಕ್ಷಿತ ಸ್ಥಳದಲ್ಲಿ ಬಿಡುವ ಬಗ್ಗೆ ಚಿಂತನೆ ನಡೆಸಿರುವ ಬಗ್ಗೆ ವರದಿಯಾಗಿದೆ. 

1985ರಲ್ಲಿ ಹಂಪಿ ವಿಶ್ವ ಪಾರಂಪರಿಕ ತಾಣ ಎಂದು ಯುನೆಸ್ಕೋ ಘೋಷಿಸಿದ ಬಳಿಕ ವಿದೇಶಿ ಪ್ರವಾಸಿಗರು ಹರಿದು ಬರುತ್ತಿದ್ದು ವಾರ್ಷಿಕ ಸುಮಾರು 1 ಲಕ್ಷಕ್ಕೂ ಹೆಚ್ಚು ಮಂದಿ ವಿದೇಶಿ ಪ್ರವಾಸಿಗರು ಆಗಮಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next