Advertisement
ವರ್ಷಕ್ಕೆ 2-3 ಬಾರಿ ಕಾಡಾನೆಗಳ ಹಿಂಡು ಜಿಲ್ಲೆಗೆ ಬಂದು ಜನರಲ್ಲಿ ಆತಂಕ ಉಂಟು ಮಾಡುತ್ತಿದ್ದವು.ಆದರೆ ಇತ್ತೀಚೆಗೆ ಆನೆಗಳ ದಾಳಿ ಕಡಿಮೆಯಾಗುತ್ತಿದೆ. ಆದರೆ ಜಿಲ್ಲೆಯ ಎಲ್ಲಾ ಕಡೆ ಚಿರತೆ ದಾಳಿ ಮುಂದುವರೆದಿದ್ದು, ಇದರ ಜತೆಗೆ ಕರಡಿಗಳ ದಾಳಿಯೂ ಅಲ್ಲಲ್ಲಿನಡೆಯುತ್ತಿರುವುದು ಜನರನ್ನು ಬೆಚ್ಚಿ ಬೀಳಿಸುತ್ತಿದೆ.ಹೆಚ್ಚುತ್ತಿರುವ ಅರಣ್ಯ ನಾಶದಿಂದ ಕಾಡು ಪ್ರಾಣಿಗಳುನಾಡಿನತ್ತಬರಲಾರಂಭಿಸಿವೆ. ಎಲ್ಲೆಡೆ ಮಿತಿ ಮೀರಿಗಣಿಗಾರಿಕೆಯಿಂದ ಮರಗಿಡಗಳ ಮಾರಣಹೋಮಒಂದೆಡೆಯಾದರೆ, ಅಭಿವೃದ್ಧಿ ಹೆಸರಿನಲ್ಲಿ ಕಾಡನ್ನುಒತ್ತುವರಿ ಮಾಡಿಕೊಳ್ಳುತ್ತಿರು ವುದರಿಂದ ಕಾಡುಗಳಲ್ಲಿ ಆಹಾರವಿಲ್ಲದೆ ಅಲೆಯುವ ಕಾಡು ಪ್ರಾಣಿಗಳು ಆಹಾರ ಹರಸಿ ನಗರಕ್ಕೆ ಬರುವುದು ಸಾಮಾನ್ಯವಾಗಿದೆ.
Related Articles
Advertisement
ತುಮಕೂರು ಜಿಲ್ಲೆಯಲ್ಲಿ ಚಿರತೆಗಳು ಈ ಹಿಂದಿಗಿಂತ ಈಗ ಹೆಚ್ಚಾಗಿವೆ. ಕಾಡಿನಿಂದ ಗ್ರಾಮಗಳ ಕಡೆ ಬಂದಾಗ ಗ್ರಾಮಗಳ ಸುತ್ತ ಪೊದೆಗಳು ಬೆಳೆದಿರುವುದರಿಂದ ಪೊದೆಗಳನ್ನು ಅಲ್ಲಿಯ ಗ್ರಾಮ ಪಂಚಾಯ್ತಿಯವರು ಸ್ವತ್ಛ ಮಾಡದೇ ಇರುವುದರಿಂದ ಚಿರತೆಗಳು ಬಂದು ಪೊದಗಳಲ್ಲಿ ಸೇರುತ್ತಿವೆ. ಪ್ರಾಣಿಗಳು ಮತ್ತು ಮನುಷ್ಯರು ಬಂದಾಗ ದಾಳಿ ಮಾಡುತ್ತಿವೆ. ಇದರಿಂದ ಗ್ರಾಮೀಣ ಪ್ರದೇಶದಲ್ಲಿ ರೈತರು ಬೆಳೆ ಕಟಾವು ಮಾಡುವ ಸಂದರ್ಭದಲ್ಲಿ ಅವರು ಹೊಲದಲ್ಲಿ ಕೆಲಸ ಮಾಡಲು ಹೆದರುವ ಸಂದರ್ಭ ಬಂದೊದಗಿದೆ.
2020ರಲ್ಲಿ 6 ಮಂದಿ ಬಲಿ :
ಕಳೆದ 2020ರಲ್ಲಿ ಒಂದು ವರ್ಷದಲ್ಲಿ ಜಿಲ್ಲೆಯಲ್ಲಿ ಚಿರತೆ ದಾಳಿಗೆ 6 ಜನ ಬಲಿಯಾಗಿ ದ್ದಾರೆ. ಅದರಲ್ಲಿತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿಯೇ ಹೆಚ್ಚು ಮಾನವ ದಾಳಿಗಳಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಚಿರತೆಗಳ ಕಾಟ ಇತ್ತು. ಈ ಹಳ್ಳಿಗೆ ಚಿರತೆ ಬಂದಿದೆ, ಕುರಿ ಮೇಕೆ ತಿಂದು ಹೋಗಿದೆ ಎನ್ನುವ
ವರದಿಯಾಗುತ್ತಿತ್ತು. ಮನುಷ್ಯರ ಮೇಲೆ ದಾಳಿ ಮಾಡುತ್ತಿರಲಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಚಿರತೆಗಳು ಮನುಷ್ಯರ ಮೇಲೆ ದಾಳಿಮಾಡಲು ಮುಂದುವರಿಸಿವೆ.
ಚಿರತೆ ಪುನರ್ವಸತಿಕೇಂದ್ರ ಪ್ರಾರಂಭಿಸಲಿ :
ವರ್ಷದಿಂದ ವರ್ಷಕ್ಕೆ ಚಿರತೆ ಸಂತತಿ ಕಲ್ಪತರು ನಾಡಿನಲ್ಲಿ ಹೆಚ್ಚುತ್ತಿದೆ. ಇವುಗಳಿಂದ ಮಾನವ ಮೇಲಿನದಾಳಿಯೂ ಹೆಚ್ಚಾಗಿದೆ. ಮಾನವ ಸಂಘರ್ಷ ತಪ್ಪಬೇಕಾದರೆ ಚಿರತೆ ಪುನರ್ ವಸತಿ ಕೇಂದ್ರ ಪ್ರಾರಂಭಿಸಿದರೆಹೆಚ್ಚು ಅನುಕೂಲ. ರಾಜ್ಯದ ಬನ್ನೇರುಘಟ್ಟ ಮತ್ತು ಮೈಸೂರಿನಲ್ಲಿ ಚಿರತೆ ಪುನರ್ ವಸತಿ ಕೇಂದ್ರಗಳಿದ್ದು ತುಮಕೂರಿನ ದೇವರಾಯನ ದುರ್ಗದಲ್ಲಿ ಚಿರತೆ ಪುನರ್ ವಸತಿ ಕೇಂದ್ರ ಸ್ಥಾಪಿಸಿದರೆ ಈಗಾಗಲೇ ಜಿಂಕೆ ವನದಿಂದ ಹೆಸರಾಗಿರುವನಾಮದ ಚಿಲುಮೆ ಚಿರತೆ ಪುನರ್ ವಸತಿ ಕೇಂದ್ರದಿಂದಲೂ ಹೆಸರಾಗುತ್ತದೆ. ಚಿರತೆ ನೋಡಲು ಪ್ರವಾಸಿಗರಿಗೂ ಅನುಕೂಲವಾಗಲಿದೆ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿಮುಖ್ಯಮಂತ್ರಿಗಳ ಗಮನ ಸೆಳೆದು ಬಜೆಟ್‌ನಲ್ಲಿ ಅನುದಾನ ಮೀಸಲಿಡಿಸಲಿ ಎಂದು ಜಿಲ್ಲೆಯ ಜನತೆಯ ಆಗ್ರಹವಾಗಿದೆ.
ತುಮಕೂರು ಜಿಲ್ಲೆಯ ಗ್ರಾಮಗಳ ಸಮೀಪ ಪೊದೆಗಳು ಹೆಚ್ಚು ಇರುವ ಕಾರಣಚಿರತೆಗಳು ಪೊದೆಗಳಿಗೆ ಬಂದು ಸೇರುತ್ತಿವೆ. ಚಿರತೆ ಸೆರೆಹಿಡಿ ಯಲು ಬೋನ್ ಇಡಲಾಗಿದೆ. ಜನರೂ ಜಾಗೃತಿಯಿಂದ ಇರಬೇಕು. ಈವರೆಗೆ ಚಿರತೆ ಸೇರಿದಂತೆ ಇತರೆ ಪ್ರಾಣಿಗಳಿಂದ ಮೃತಪಟ್ಟವರಿಗೆ ಪರಿಹಾರ ನೀಡಲಾಗಿದೆ.-ಎಚ್.ಸಿ.ಗಿರೀಶ್, ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ
ಚಿ.ನಿ.ಪುರುಷೋತ್ತಮ್