ಸಕಲೇಶಪುರ: ಹಾಸನದಿಂದ – ಸಕಲೇಶಪುರಕ್ಕೆ ಕಾರಿನಲ್ಲಿ ಬರುವಾಗ ವ್ಯಕ್ತಿಯೊಬ್ಬ ಹುಲಿ ಆಕಾರದ ಪ್ರಾಣಿ ನೋಡಿ ಆತಂಕಗೊಂಡಿದ್ದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದರ ಜೊತೆಗೆ ಕೆಲವು ಕಿಡಿಗೇಡಿಗಳು ಕಾಡಿಲಿನಲ್ಲಿ ತನ್ನ ಮರಿಗಳೊಂದಿಗೆ ಹುಲಿ ತಿರುಗಾಡುತ್ತಿದ್ದನ ಕಲಿ ವಿಡಿಯೋವನ್ನು ಹರಿದು ಬಿಟ್ಟಿದ್ದು, ತಾಲೂಕಿನಲ್ಲಿ ಆತಂಕ ಸೃಷ್ಟಿಸಿತ್ತು.
ಹಾಸನದಿಂದ ಸಕಲೇಶಪುರ ಕಡೆಗೆ ಪಟ್ಟಣದ ವರ್ತಕ ಪೃಥ್ವಿ ಎಂಬುವರು ತನ್ನ ಕಾರಿನಲ್ಲಿ ಮಂಗಳವಾರ ರಾತ್ರಿ ಬರುವಾಗಬಾಳ್ಳುಪೇಟೆ ಸಮೀಪದ ಚಿಕ್ಕನಾಯಕನಹಳ್ಳಿ ಬಳಿ ಹುಲಿ ಆಕಾರದ ಪ್ರಾಣಿಯೊಂದು ಬಲದಿಂದ ಎಡಕ್ಕೆ ಹೋಗಿದೆ.
ಇದರಿಂದ ಆತಂಕಗೊಂಡ ಪೃಥ್ವಿ, ಹುಲಿಯೆಂದು ತಿಳಿದು ಅಲ್ಲಿದ್ದ ಪೊಲೀಸರಿಗೆ ತಿಳಿಸಿದ್ದಾರೆ. ಈ ವೇಳೆಯಲ್ಲಿ ಪೃಥ್ವಿ ಹುಲಿ ನೋಡಿದೆ ಎಂದು ಮಾತನಾಡಿದ ವಿಡಿಯೋ ರಾತ್ರೋ ರಾತ್ರಿ ವೈರಲ್ ಆಗಿ, ಬಾಳ್ಳುಪೇಟೆ ಸುತ್ತಲಿನ ಗ್ರಾಮಸ್ಥರು ಆತಂಕಕ್ಕೆ ಒಳಗಾದರು. ಕೆಲವರು ಮನೆಯ ಹೊರಗೆ ಬಿಟ್ಟಿದ್ದ ತಮ್ಮ ಜಾನುವಾರುಗಳನ್ನು ಕೊಟ್ಟಿಗೆಗೆ ತಂದು ಕಟ್ಟು ಹಾಕಿದರು, ಕೆಲವರು ಹುಲಿಗೆ ಹೆದರಿ ಮನೆಯಿಂದ ಆಚೆಗೆ ಬರಲಿಲ್ಲ. ಈ ವೇಳೆ ಅರಣ್ಯ ಅಧಿಕಾರಿ ಮಹಾದೇವ್ ನೇತೃತ್ವದ ತಂಡ ಮುಂಜಾನೆ ಬಂದು ಹುಲಿ ತಿರುಗಾಡುತ್ತಿದ್ದ ಜಾಗವನ್ನು ಪರಿಶೀಲಿಸಿದಾಗ ಚಿರತೆಯ ಹೆಜ್ಜೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ:ಆಚಾರ್ ಕಾ ಪರೋಟ ಮಾಡುವ ವಿಧಾನ
ಆಲೂರು ತಾಲೂಕಿನ ಕೆಲವೆಡೆ ಚಿರತೆ ತಿರುಗಾಡುತ್ತಿದ್ದು, ಇಲ್ಲಿಗೂ ಬಂದು ಹೋಗಿದೆ ಎನ್ನಲಾಗಿದೆ. ಬುಧವಾರ ಬೆಳಗ್ಗೆ ಪೃಥ್ವಿಯ ಹೇಳಿಕೆ ವಿಡಿಯೋ ಜೊತೆ ಹುಲಿಯೊಂದು ತನ್ನ ಮರಿಗಳ ಜೊತೆ ತಿರುಗಾಡುತ್ತಿರುವ ವಿಡಿಯೋವೊಂದನ್ನು ಹಾಕಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದು ಬಿಡಲಾಗಿತ್ತು. ಅದನ್ನು ನೋಡಿದ ಬಹುತೇಕರು ನಿಜವೆಂದುತಿಳಿದು, ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದರು. ಅದನ್ನು ನೋಡಿದವರು ನಿಜವೆಂದು ಬೆಸ್ತು ಬಿದ್ದಿದ್ದರು.