Advertisement

ಬೆಳೆ ರಕ್ಷಣೆಗೆ ಹಾಕಿದ್ದ ತಂತಿಗೆ ಸಿಲುಕಿ ಒದ್ದಾಡಿದ ಚಿರತೆ : ಅರಣ್ಯ ಅಧಿಕಾರಿಗಳಿಂದ ರಕ್ಷಣೆ

08:32 PM Mar 02, 2022 | Team Udayavani |

ಶಿರಸಿ: ಜಾನ್ಮನೆ ವಲಯ ಅರಣ್ಯ ವ್ಯಾಪ್ತಿಯ ಶಿರಗುಣಿಯಲ್ಲಿ ಬೆಳೆ ರಕ್ಷಣೆಗೆ ಹಾಕಿದ್ದ ತಂತಿಗೆ ಸಿಲುಕಿದ ಚಿರತೆಯನ್ನು ಅರಣ್ಯ ಇಲಾಖೆಯ ಅಧಿಕಾರಿ, ಸಿಬಂದಿಗಳು ವೈದ್ಯರ ನೆರವಿನಿಂದ ರಕ್ಷಿಸಿ ಉಪಚರಿಸಿದ ಘಟನೆ ಬುಧವಾರ ನಡೆದಿದೆ.

Advertisement

ಬುಧವಾರ ಬೆಳಿಗ್ಗೆ 10 ಗಂಟೆ ಸುಮಾರಿಗೆ ಇಂಥದೊಂದು ಘಟನೆ ಅರಣ್ಯ ಅಧಿಕಾರಿಗಳ ಗಮನಕ್ಕೆ ಬಂದಿದ್ದು, ತಕ್ಷಣ ಶಿವಮೊಗ್ಗದ ವನ್ಯಜೀವಿ ವೈದ್ಯ ಡಾ. ವಿನಯ ಅವರಿಗೆ‌ ಮಾಹಿತಿ ತಲುಪಿಸಲಾಯಿತು. ಅವರು ಶಿರಗುಣಿಗೆ ಬಂದ ಬಳಿಕ ಸುಮಾರು ಎರಡು ಗಂಟೆಗಳ ಕಾರ್ಯಾಚರಣೆ ನಡೆಸಿ ಚಿರತೆ ರಕ್ಷಿಸಲಾಗಿದೆ. ಡಿಎಫ್ಓ ಎಸ್.ಜಿ.ಹೆಗಡೆ, ಆರೆಪ್ಪೋ ಪವಿತ್ರ ಸ್ಥಳದಲ್ಲಿ‌ ಮೊಕ್ಕಾಂ ಹೂಡಿದ್ದಾರೆ.

ಸಂಜೆ ಕಂಚಿಕೈನಲ್ಲಿ ಚಿರತೆಗೆ ಉಪಚಾರ ಮಾಡಲಾಗಿದ್ದು, ಚಿಕಿತ್ಸಾ ಪರಿಣಾಮದ ಕಾಲಾವಧಿಯಲ್ಲಿ ಇಡಲಾಗಿದೆ. ಚೇತರಿಕೆ ಇದ್ದು, ಗುಣಮುಖ ಎನಿಸಿದರೆ ಅರಣ್ಯಕ್ಕೆ ಅಥವಾ ಶಿವಮೊಗ್ಗದ ಮೃಗಾಲಯಕ್ಕೆ ಬಿಡಲಾಗುತ್ತದೆ. ಯಾವುದಕ್ಕೂ ವೈದ್ಯರ‌ ಸಲಹೆ ಪಡೆದು ಕ್ರಮ ಕೈಗೊಳ್ಳುವದಾಗಿ ಉದಯವಾಣಿಗೆ ಉಪ‌ಅರಣ್ಯ‌ಸಂರಕ್ಷಣಾಧಿಕಾರಿ ಎಸ್.ಜಿ.ಹೆಗಡೆ ತಿಳಸಿದ್ದಾರೆ.

ಇದನ್ನೂ ಓದಿ : ಕಂದಾಯ ಇಲಾಖೆಯಲ್ಲಿ ಬಾಕಿ ಉಳಿದಿರುವ ಕಡತಗಳಿಗೆ ಮುಕ್ತಿ : ಆರ್‌ ಅಶೋಕ್‌

Advertisement

Udayavani is now on Telegram. Click here to join our channel and stay updated with the latest news.

Next