ಎಚ್.ಡಿ.ಕೋಟೆ: ಹಂದಿ ಹಾವಳಿಯಿಂದ ಬೆಳೆಗಳ ರಕ್ಷಣೆಗಾಗಿ ರೈತರೋರ್ವರು ಅಳವಡಿಸಿದ್ದ ಉರುಳಿಗೆ ಆಹಾರ ಹರಸಿ ಕಾಡಿನಿಂದ ನಾಡಿಗೆ ಬಂದಿದ್ದ 3 ವರ್ಷದ ಹೆಣ್ಣು ಚಿರತೆ ಮರಿಯೊಂದು ಸಿಲುಕಿಕೊಂಡಿತ್ತು.
ಅರಣ್ಯ ಇಲಾಖೆ ಅ ಧಿಕಾರಿಗಳು ಕಾರ್ಯಾಚರಣೆ ಕೈಗೊಂಡು ಚಿರತೆಯನ್ನು ರಕ್ಷಿಸಿದರು. ತಾಲೂಕಿನ ಬೆಳತ್ತೂರು ಬಿ.ಕಾಲೋನಿಯ ಡ್ರಿಪ್ ಸಿದ್ದನಾಯ್ಕ ಅವರು ಹಂದಿಗಳ ಹಾವಳಿಯಿಂದ ತಾವು ಜಮೀನಿನಲ್ಲಿ ಬೆಳೆದಿರುವ ಬೆಳೆಗಳ ರಕ್ಷಣೆಗಾಗಿ ತಂತಿ ಬೆಲಿಗೆ ಉರುಳನ್ನು ಹಾಕಿದ್ದರು.
ಇದನ್ನು ಅರಿಯದ ಚಿರತೆ ಉರುಳಿಗೆ ಸಿಲುಕಿ ಹಾಕಿಕೊಂಡಿದೆ ಭಾನುವಾರ ಬೆಳಗ್ಗೆ ಘಟನೆ ಬೆಳಕಿಗೆ ಬಂದಿದ್ದು, ತಕ್ಷಣ ಎಚ್.ಡಿ.ಕೋಟೆ ಸಾಮಾಜಿಕ ವಲಯ ಅರಣ್ಯಾಧಿ ಕಾರಿಗಳಿಗೆ ತಿಳಿಸಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಅರವಳಿಕೆ ಮದ್ದನ್ನು ನೀಡಿ ಚಿರತೆಯನ್ನು ಸೆರೆಹಿಡಿದರು.
ದಿಕ್ಕಪಾಲಾಗಿ ಓಡಿದ ಜನ: ಕಾರ್ಯಾಚರಣೆ ವೇಳೆ ಜನರ ಗದ್ದಲದಿಂದಾಗಿ ಅರವಳಿಕೆ ನೀಡಿದ್ದರು ಚಿರತೆ ಬೋನ್‌ಗೆ ಹೋಗುವಾಗ ಬೆದರಿದಂತಾಗಿ ಸಿಬ್ಬಂದಿಯಿಂದ ತಪ್ಪಿಸಿಕೊಂಡು ಓಡಲಾರಂಬಿಸಿತು. ಇದರಿಂದ ಜನರು ದಿಕ್ಕಾಪಾಲಾಗಿ ಓಡಿದರು. ಸ್ಥಳದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.
ತಕ್ಷಣ ಕಾರ್ಯಚರಣೆ ಚುರುಕುಗೊಳಿಸಿದ ಅರಣ್ಯಾಧಿಕಾರಿಗಳ ತಂಡ ಮತ್ತೂಮ್ಮೆ ಅರವಳಿಕೆ ನೀಡಿ ಚಿರತೆಯನ್ನು ಸೆರೆಹಿಡಿದರು.ಬಳಿಕ ಗಾಯಗೊಂಡಿದ್ದ ಚಿರತೆಗೆ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಚಾಮರಾಜ ಮƒಗಾಲಯಕ್ಕೆ ಕರೆದೊಯ್ಯಲಾಯಿತು.
ಕಾರ್ಯಚರಣೆಯಲ್ಲಿ ಸಾಮಾಜಿಕ ವಲಯ ಅರಣ್ಯ ವಿಭಾಗದ ಎಸಿಎಫ್ ಪರಮೇಶ್ವರಪ್ಪ, ಡಿಸಿಎಫ್ ಹನುಮಂತಪ್ಪ, ವಲಯ ಅರಣ್ಯಾ ಕಾರಿ ಮಧು, ವಿಶೇಷ ಹುಲಿ ಸಂರಕ್ಷಣಾ ದಳದ ವಲಯ ಅರಣ್ಯಾಧಿ ಕಾರಿ ಸಂತೋಷ್, ವನ್ಯಜೀವಿ ವಲಯದ ಪಶು ವೈದ್ಯಾಧಿ ಕಾರಿ ಡಾ.ನಾಗರಾಜು, ಅರವಳಿಕೆ ತಜ್ಞ ಅಕ್ರಮ್ ಪೊಲೀಸ್ ಸಿಬ್ಬಂದಿ ಇದ್ದರು.