Advertisement

ಚಿರತೆ ಸೆರೆಗೆ ಅರಣ್ಯ ಇಲಾಖೆ ವಿಫ‌ಲ

05:17 AM Jun 03, 2020 | Lakshmi GovindaRaj |

ಮದ್ದೂರು: ಚಿರತೆ ಸೆರೆ ಹಿಡಿಯಲು ವಿಫ‌ಲವಾಗಿರುವ ಅರಣ್ಯ ಇಲಾಖೆ ಅಧಿಕಾರಿಗಳ ವಿರುದಟಛಿ ರೈತ ಸಂಘದ ಕಾರ್ಯಕರ್ತರು ಕೊಪ್ಪ ನಾಡಕಚೇರಿ ಬಳಿ ಪ್ರತಿಭಟನೆ ನಡೆಸಿ, ಉಪ ವಲಯ ಅರಣ್ಯಾಧಿಕಾರಿ ರತ್ನಾಕರ್‌ ಅವರಿಗೆ ಮನವಿ ಸಲ್ಲಿಸಿದರು. ತಾಲೂಕಿನ ಕೊಪ್ಪ ಹೋಬಳಿಯ ನಾಡಕಚೇರಿ ಬಳಿ ಸಂಘಟನೆ ಕಾರ್ಯಕರ್ತರು ಜಿಲ್ಲಾ, ತಾಲೂಕು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳ ವಿರುದಟಛಿ ಆಕ್ರೋಶ ವ್ಯಕ್ತಪಡಿಸಿ, ಕೂಡಲೇ ಚಿರತೆ ಸೆರೆ ಹಿಡಿಯುವ  ಮೂಲಕ ಜನರ ಆತಂಕ ದೂರ ಮಾಡುವಂತೆ ಒತ್ತಾಯಿಸಿದರು.

Advertisement

ಚಿರತೆ ದಾಳಿಗೆ ಪ್ರಾಣಿಗಳು ಬಲಿ: ತಾಲೂಕಿನ ಬಿದರಕೋಟೆ, ಹುರಗಲವಾಡಿ, ಹೊಸಗಾವಿ, ಚೆನ್ನಮ್ಮನಕೊಪ್ಪಲು, ಮೂಡಲು ದೊಡ್ಡಿ, ಆಬಲವಾಡಿ ಗ್ರಾಮಗಳಲ್ಲಿ ಚಿರತೆ ಹಾವಳಿ ಹೆಚ್ಚಾಗಿದೆ. ನಿತ್ಯ ಗ್ರಾಮಗಳಲ್ಲಿ ಕುರಿ, ಮೇಕೆ, ನಾಯಿ,  ಜಾನುವಾರುಗಳನ್ನು ತಿಂದು ಹಾಕುತ್ತಿದ್ದು, ಇದರಿಂದ ರಾಸುಗಳು ಮರಣ ಹೊಂದಿವೆ. ಒಂದು ವಾರದೊಳಗೆ ಚಿರತೆ ಸೆರೆ ಹಿಡಿಯಲು ಮುಂದಾಗದಿದ್ದಲ್ಲಿ ನಿರಂತರ ಪ್ರತಿಭಟನೆ ಹಮ್ಮಿಕೊಳ್ಳುವ ಎಚ್ಚರಿಕೆ ನೀಡಿದರು.

ಚಿರತೆ ಸೆರೆಗೆ ಕ್ರಮ: ಉಪವಲಯ ಅರಣ್ಯಾಧಿಕಾರಿ ರತ್ನಾಕರ್‌ ಮಾತನಾಡಿ, ಆಬಲವಾಡಿ, ಮೂಡಲದೊಡ್ಡಿಯಲ್ಲಿ ಚಿರತೆ ಸೆರೆಗೆ ಬೋನು ಇಟ್ಟಿದ್ದೇವೆ. ಮೇಲಧಿಕಾರಿಗಳೊಂದಿಗೆ ಚರ್ಚಿಸಿ, ಚಿರತೆ ಸೆರೆಗೆ ಕ್ರಮ ಕೈಗೊಳ್ಳಲಾಗುವುದು ಎಂದು  ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆದರು. ರೈತ ಸಂಘದ ಮುಖಂಡರಾದ ಕೀಳಘಟ್ಟ ನಂಜುಂಡಯ್ಯ, ಉಮೇಶ್‌, ಪುಟ್ಟಸ್ವಾಮಿ, ಶಿವು, ತಿಮ್ಮೇಶ್‌, ಶಿವರಾಮು, ತಿಮ್ಮೇಗೌಡ, ರವಿ, ರಮೇಶ್‌, ಜಗದೀಶ್‌ ಮೊದಲಾದವರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next