ಕುಣಿಗಲ್ : ಮನೆಯ ಒಳಗೆ ಚಿರತೆ ನುಗ್ಗಿ ಆತಂಕ ಸೃಷ್ಠಿಸಿದ ಘಟನೆ ತಾಲೂಕಿನ ಹುಲಿಯೂರುದುರ್ಗ ಹೋಬಳಿ ಮುದ್ದಲಿಂಗನದೊಡ್ಡಿ ಗ್ರಾಮದಲ್ಲಿ ನಡೆದಿದೆ. ಕೂದಲೆಳೆ ಅಂತರದಲ್ಲಿ ದಂಪತಿಗಳು ಪ್ರಾಣಪಯದಿಂದ ಪಾರಾಗಿದ್ದಾರೆ.
ಕಳೆದ ರಾತ್ರಿ ಚಿರತೆ ರಾಜ್ಯ ಹೆದ್ದಾರಿ 33 ಮದ್ದೂರು, ಕುಣಿಗಲ್ ರಸ್ತೆಯ ಪಕ್ಕದ ಗುಡ್ಡದ ಕಡೆಯಿಂದ ಬಂದು ಗ್ರಾಮದ ಶಿವಣ್ಣ ಅವರ ಮನೆಗೆ ನುಗ್ಗಿದೆ, ಆ ವೇಳೆ ಶಿವಣ್ಣ ಮತ್ತು ಆತನ ಪತ್ನಿ ಪದ್ಮಮ್ಮ ಅವರು ಮನೆಯ ಹಾಲ್‌ನಲ್ಲಿ ಇದ್ದರು, ಚಿರತೆ ಮನೆಯ ಒಳಗೆ ಬರುತ್ತಿರುವುದನ್ನು ನೋಡಿದ ಶಿವಣ್ಣ ಹಾಗೂ ಆಕೆಯ ಪತ್ನಿ ಕಿರಿಚಿಕೊಂಡು ಮನೆಯಿಂದ ಹೊರ ಓಡಿ ಬಂದು ಮನೆಯ ಬಾಗಿಲಿಗೆ ಚಿಲ್ಕ ಹಾಕಿ ಚಿರತೆಯನ್ನು ಕೂಡಿಹಾಕಿದರು, ಚಿರತೆ ಹಾಗೂ ಮನೆಯವರ ಕಿರುಚಾಟದಿಂದ ಅಕ್ಕಪಕ್ಕದ ಮನೆಯವರು ಸ್ಥಳಕ್ಕೆ ಬಂದು ಚಿರತೆಯನ್ನು ನೋಡಿ ಗಾಬರಿಗೊಂಡರು, ತಕ್ಷಣ ಹುಲಿಯೂರುದುರ್ಗ ವಲಯ ಅರಣ್ಯಾಧಿಕಾರಿಗಳಿಗೆ ವಿಷಯವನ್ನು ತಿಳಿಸಿದ್ದಾರೆ.
ಚಿರತೆ ಸೆರೆ: ವಿಷಯ ತಿಳಿಸುತ್ತಿದಂತೆ ಸ್ಥಳಕ್ಕೆ ಆಗಮಿಸಿದ ಅರಣ್ಯ ಸಂರಕ್ಷಣಾಧಿಕಾರಿ ಮಹಮದ್ ಮನ್ಸೂರ್ ಹಾಗೂ ಸಿಬ್ಬಂದಿಗಳು, ಮನೆಯ ಬಾಗಿಲಗೆ ಬೋನನ್ನು ಇಟ್ಟು ಚಿರತೆಯನ್ನು ಸೆರೆಯಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಬಳಿಕ ಚಿರತೆ ಆರೋಗ್ಯ ತಪಾಸಣೆ ನಡೆಸಿದರುಮ, ಸೆರೆಸಿಕ್ಕ ಚಿರತೆಯನ್ನು ಸುರಕ್ಷಿತ ಅರಣ್ಯ ಪ್ರದೇಶಕ್ಕೆ ಬಿಡುವುದೆಂದು ಆರ್‌ಎಫ್‌ಓ ಮನ್ಸೂರ್ ತಿಳಿಸಿದ್ದಾರೆ.
ದೇವರೇ ಕಾಪಾಡಿದ : ಮನೆಯ ಯಜಮಾನ ಶಿವಣ್ಣ ಮಾತನಾಡಿ ರಾತ್ರಿ ನಾನು ನನ್ನ ಹೆಂಡತಿ ಮನೆಯ ಹಾಲ್‌ನಲ್ಲಿ ಕುಳಿತಿದ್ದವು ಚಿರತೆಯೊಂದು ಏಕಾಏಕಿ ಮನೆ ಒಳಗೆ ನುಗಿತ್ತು, ಇದನ್ನು ನೋಡಿದ ನಾವು ಗಾಬರಿಗೊಂಡವು ಕೂಡಲೇ ಮನೆಯಿಂದ ಹೊರಗೆ ಓಡಿ ಬಂದು ಬಾಗಿಲು ಚಿಲಕ ಪ್ರಾಣ ಉಳಿಸಿಕೊಂಡವು, ನಮ್ಮನು ಆ ದೇವರೆ ಕಾಪಾಡಿದನ್ನು ಎಂದು ನಿಟ್ಟುಸಿರು ಬಿಟ್ಟರು.
ಚಿರತೆಗಳ ಉಪಟಳ : ತಾಲೂಕಿನಲ್ಲಿ ಇತ್ತೀಚಿಗೆ ಚಿರತೆಗಳ ಉಪಟಳ ಹೆಚ್ಚಾಗಿದ್ದು, ಸಾಕು ಪ್ರಾಣಿಗಳ ಮೇಲೆ ದಾಳಿ ಮಾಡಿ ತಿಂದು ಹಾಕುತ್ತಿವೆ, ಇದರಿಂದ ಗ್ರಾಮೀಣ ಪ್ರದೇಶ ಜನರು ಆತಂಕಕ್ಕೆ ಒಳಗಾಗಿದ್ದಾರೆ, ಎರಡು ಮೂರು ವರ್ಷಗಳ ಹಿಂದೆ ತಾಲೂಕಿನ ಇಬ್ಬರನ್ನು ಚಿರತೆ ಕೊಂದು ಹಾಕಿದೆ, ಆದರೆ ಈಗಿನ ಅರಣ್ಯ ಸಂರಕ್ಷಣಾಧಿಕಾರಿ ಮಹಮದ್ ಮನ್ಸೂರ್ ಅವರ ಅರಣ್ಯ ಇಲಾಖೆಯ ತಂಡ ಚಿರತೆ ಇರುವ ಸ್ಥಳಗಳಲ್ಲಿ ಬೋನ್‌ಗಳನ್ನು ಇಟ್ಟು ಆನೇಕ ಚಿರತೆಗಳನ್ನು ಸೆರೆ ಹಿಡಿದಿದ್ದಾರೆ.