ಕಾಪು: ಅದಮಾರು ಮತ್ತು ಎರ್ಮಾಳು ಮೂಡಬೆಟ್ಟು ಪ್ರದೇಶದಲ್ಲಿ ಕಳೆದೆರಡು ದಿನಗಳಿಂದ ರಾತ್ರಿ ಸಮಯ ರಸ್ತೆಯಲ್ಲಿ ಚಿರತೆಯೊಂದು ಕಾಣಿಸಿಕೊಂಡಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ಅಟೋ ರಿಕ್ಷಾದಲ್ಲಿ ಹೋಗುತ್ತಿದ್ದ ವೇಳೆ ಎರ್ಮಾಳು ಅದಮಾರು ರಸ್ತೆಯ ಮೂಡಬೆಟ್ಟು ಸಮೀಪದಲ್ಲಿ ಚಿರತೆ ಸಂಚರಿಸುತ್ತಿರುವುದು ಕಂಡು ಬಂದಿದೆ.
ಚಿರತೆ ನೋಡಿದವರು ನೀಡಿದ ಮಾಹಿತಿಯಂತೆ ಸ್ಥಳೀಯರು ಪೊಲೀಸ್ ಹಾಗೂ ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಅಧಿಕಾರಿಗಳು ಹುಡುಕಾಟ ನಡೆಸಿದ್ದಾರೆ.
ಅದಮಾರು, ಎರ್ಮಾಳು ಪರಿಸರವು ಶಾಲಾ ಮಕ್ಕಳು ಸಂಚರಿಸುವ ಪ್ರದೇಶವಾಗಿದೆ. ಇಲ್ಲಿನ ಜನತೆ ಕೃಷಿ, ಹೈನುಗಾರಿಕೆಯಿಂದ ಜೀವನ ನಡೆಸುತ್ತಿದ್ದು, ದನಗಳನ್ನು ಹೊರಗೆ ಬಿಡಲು ಹೆದರುವಂತಾಗಿದೆ. ದಟ್ಟ ಪೊದೆಗಳಿಂದ ಕೂಡಿರುವ ಪ್ರದೇಶಗಳಲ್ಲಿ ಜನ ಸಂಚರಿಸಲು ಹೆದರುವಂತಾಗಿದೆ ಎಂದು ಸ್ಥಳೀಯರಾದ ಬರ್ಪಾಣಿ ಸಂತೋಷ್ ಶೆಟ್ಟಿ ತಿಳಿಸಿದ್ದಾರೆ.