ಗದಗ: ಉತ್ತರ ಕರ್ನಾಟಕದ ಸಹ್ಯಾದ್ರಿ, ಔಷಧೀಯ ಸಸ್ಯಗಳ ಬೀಡು ಕಪ್ಪತ್ತಗುಡ್ಡದಲ್ಲಿ ಚಿರತೆಯೊಂದು ಗಾಂಭೀರ್ಯ ಹೆಜ್ಜೆ ಹಾಕುತ್ತ ಸಾಗುತ್ತಿರುವ ಫೋಟೊ ಮತ್ತು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕಪ್ಪತ್ತಗುಡ್ಡದ ನಲ್ಲಿ ಹರಿ ಬಸವೇಶ್ವರ ದೇವಸ್ಥಾನದ ಹತ್ತಿರ ಸಾಗುತ್ತಿದ್ದ ಚಿರತೆಯನ್ನು ನೋಡಿರುವ ವಿದ್ಯುತ್ ಇಲಾಖೆ ಸಿಬ್ಬಂದಿ ಪವನ್ ವಿಡಿಯೋ ಚಿತ್ರೀಕರಣ ಮತ್ತು ಪೋಟೋ ತೆಗೆದಿದ್ದಾರೆ ಎನ್ನಲಾಗಿದೆ.
ಕಪ್ಪತ್ತಗುಡ್ಡಕ್ಕೆ ತೆರಳುವವರು ಗಲಾಟೆ, ಗದ್ದಲ ಮಾಡಬಾರದು. ಅರಣ್ಯದ ಸೌಂದರ್ಯ ಸವಿಯುವಾಗ ತುಂಬಾ ಜಾಗೃತಿ ವಹಿಸುವುದು ಸೂಕ್ತ ಎನ್ನುತ್ತಾರೆ ಅರಣ್ಯ ಅಧಿಕಾರಿಗಳು.
ಇದನ್ನೂ ಓದಿ: ಬಂಧಿಸಲು ಹೋದ ಪೊಲೀಸರ ಮೇಲೆ ಆರೋಪಿಗಳಿಂದ ದಾಳಿ ಯತ್ನ: ಓರ್ವನ ಸೆರೆ, ಇನ್ನೋರ್ವ ಪರಾರಿ