ರತ್ನಗಿರಿ(ಮಹಾರಾಷ್ಟ್ರ): ರಾತ್ರಿ ವೇಳೆ ಪೊಲೀಸ್ ಠಾಣೆಯೊಳಗೆ ನುಗ್ಗಿದ ಚಿರತೆಯೊಂದು ಶ್ವಾನದ ಮೇಲೆ ದಾಳಿ ನಡೆಸಿ ಹೊತ್ತೊಯ್ದಿರುವ ಘಟನೆ ಮಹಾರಾಷ್ಟ್ರದ ರತ್ನಗಿರಿಯಲ್ಲಿ ನಡೆದಿದ್ದು, ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ:BBK10: ಇವರೇ ಬಿಗ್ ಬಾಸ್ ವಿನ್ನರ್ – ರನ್ನರ್..? ಯಾರ ಪರ ವೋಟಿಂಗ್ ಟ್ರೆಂಡ್
ಈ ಘಟನೆ ಬುಧವಾರ (ಜನವರಿ 24) ಸಂಭವಿಸಿದ್ದು, ತಡವಾಗಿ ಬೆಳಕಿಗೆ ಬಂದಿದೆ. ರತ್ನಗಿರಿಯ ಪೊಲೀಸ್ ಠಾಣೆಯೊಳಗೆ ಚಿರತೆ ನುಗ್ಗಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಸಂದರ್ಭದಲ್ಲಿ ಠಾಣೆಯೊಳಗೆ ನಾಲ್ಕೈದು ಶ್ವಾನಗಳು ಅಡ್ಡಾಡುತ್ತಿದ್ದವು.
ಠಾಣೆಯೊಳಗೆ ಚಿರತೆ ಬಂದಿದ್ದನ್ನು ಗಮನಿಸಿದ ಪೊಲೀಸ್ ಸಿಬಂದಿಗಳು ಮುನ್ನೆಚ್ಚರಿಕೆಯಾಗಿ ಸುರಕ್ಷಿತ ಸ್ಥಳಕ್ಕೆ ತೆರಳಿದ್ದರು. ಶ್ವಾನವನ್ನು ಬೆನ್ನಟ್ಟಿ ಬಂದ ಚಿರತೆ ನೇರವಾಗಿ ಠಾಣೆಯೊಳಗೆ ನುಗ್ಗಿ ಶ್ವಾನವನ್ನು ಕೊಂದು ಹೊತ್ತೊಯ್ಯುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಅದೃಷ್ಟವಶಾತ್ ಠಾಣೆಯಲ್ಲಿದ್ದ ಯಾವ ಸಿಬಂದಿಗೂ ಯಾವುದೇ ಹಾನಿಯಾಗಿಲ್ಲ. ಠಾಣೆಯೊಳಗೆ ನುಗ್ಗಿ ಶ್ವಾನವನ್ನು ಕೋರ್ಟ್ ಯಾರ್ಡ್ ಸಮೀಪ ಚಿರತೆ ಹೊತ್ತೊಯ್ದ ದೃಶ್ಯ ಸಿಸಿಟಿವಿಯಲ್ಲಿದೆ. ಚಿರತೆ ದಾಳಿಗೆ ಬೆಚ್ಚಿದ್ದ ಇತರ ಶ್ವಾನಗಳು ಭಯದಿಂದ ಓಡಿ ಹೋಗಿ ಜೀವ ಉಳಿಸಿಕೊಂಡಿವೆ.