Advertisement

Electrocution: ಕೋತಿಯನ್ನು ಬೇಟೆಯಾಡಲು ಟ್ರಾನ್ಸ್ ಫಾರ್ಮರ್ ಏರಿ ಜೀವ ಕಳೆದುಕೊಂಡ ಚಿರತೆ

01:03 PM Nov 05, 2023 | Team Udayavani |

ಮಹಾರಾಷ್ಟ್ರ: ಕೋತಿಯೊಂದನ್ನು ಬೇಟೆಯಾಡಲು ಟ್ರಾನ್ಸ್ ಫಾರ್ಮರ್ ಏರಿದ ಚಿರತೆಯೊಂದು ವಿದ್ಯುತ್ ಸ್ಪರ್ಶಗೊಂಡು ಟ್ರಾನ್ಸ್ ಫಾರ್ಮರ್ ನಲ್ಲೆ ಮೃತಪಟ್ಟ ಘಟನೆ ಮಹಾರಾಷ್ಟ್ರದ ಚಂದ್ರಾಪುರದಲ್ಲಿ ನಡೆದಿದೆ.

Advertisement

ಚಂದ್ರಾಪುರ ಸಿಂಧೇವಾಹಿ ಅರಣ್ಯ ಪ್ರದೇಶದಲ್ಲಿ ಕೋತಿಯೊಂದು ಟ್ರಾನ್ಸ್ ಫಾರ್ಮರ್ ಏರಿ ಕುಳಿತಿತ್ತು ಇದನ್ನು ಕಂಡ ಚಿರತೆ ಬೇಟೆಯಾಡಲು ಟ್ರಾನ್ಸ್ ಫಾರ್ಮರ್ ಮೇಲೇರಿದೆ ಈ ವೇಳೆ ಓಡುವ ಭರದಲ್ಲಿ ಕೋತಿ ಹಾಗೂ ಚಿರತೆಗೆ ವಿದ್ಯುತ್ ಸ್ಪರ್ಶಗೊಂಡು ಅಲ್ಲೇ ಮೃತಪಟ್ಟಿದೆ.

ಇದನ್ನು ಕಂಡ ಸಾರ್ವಜನಿಕರು ಇಲಾಖೆಗೆ ಮಾಹಿತಿ ನೀಡಿದ್ದಾರೆ ಆ ಬಳಿಕ ಅರಣ್ಯ ಇಲಾಖೆ ಹಾಗೂ ವಿದ್ಯುತ್ ಇಲಾಖೆಯ ತಂಡಗಳು ಸ್ಥಳಕ್ಕೆ ಆಗಮಿಸಿ ವಿದ್ಯುತ್ ಸ್ಪರ್ಶದಿಂದ ಚಿರತೆ ಹಾಗೂ ಕೋತಿ ಸಾವನ್ನಪ್ಪಿರುವುದನ್ನು ಖಚಿತಪಡಿಸಿದ್ದಾರೆ.

ಇದನ್ನೂ ಓದಿ: Rajasthan Election: ಆರನೇ ಪಟ್ಟಿ ಬಿಡುಗಡೆ ಮಾಡಿದ ಕಾಂಗ್ರೆಸ್, ಜೋಶಿಗೆ ಕೈ ತಪ್ಪಿದ ಟಿಕೆಟ್

Advertisement

Udayavani is now on Telegram. Click here to join our channel and stay updated with the latest news.

Next