Advertisement

ಬಾವಿಗೆ ಬಿದ್ದ ಚಿರತೆ ಮರಿ: ಬೋನಿನೊಳಗಿಳಿದು ಸೆರೆ ಹಿಡಿದ ವೈಲ್ಡ್ ಲೈಫ್ ಪಶು ವೈದ್ಯೆಯ ಸಾಹಸ

08:58 PM Feb 13, 2023 | Team Udayavani |

ಮೂಡುಬಿದಿರೆ: ನಿಡ್ಡೋಡಿಯ ಬಾವಿಯೊಂದಕ್ಕೆ ಬಿದ್ದ ಒಂದು ವರ್ಷ ಪ್ರಾಯದ ಚಿರತೆ ಮರಿಯನ್ನು ಬೋನಿನಲ್ಲಿ ಕುಳಿತು ಬಾವಿಗಿಳಿದು ವೈದ್ಯಕೀಯವಾಗಿ ಸೆರೆಹಿಡಿದ ಚಿಟ್ಟೆ ಪಿಲಿ ವೈಲ್ಡ್ ಲೈಫ್ ರೆಸ್‌ಕ್ಯೂ ಸೆಂಟರ್‌ನ ಪಶುವೈದ್ಯೆಯ ಸಾಹಸಕ್ಕೆ ಅರಣ್ಯ ಇಲಾಖೆ ಸಹಿತ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿದೆ.

Advertisement

ಎರಡು ದಿನಗಳ ಹಿಂದೆ ಬಾವಿಗೆ ಬಿದ್ದಿದ್ದ ಈ ಚಿರತೆ ಮರಿಯನ್ನು ಸೆರೆಹಿಡಿದು ಮೇಲಕ್ಕೆ ತರಲು ಅರಣ್ಯ ಇಲಾಖೆಯವರು ಬಹಳಷ್ಟು ಪ್ರಯತ್ನ ಪಟ್ಟಿದ್ದರೂ ಸಾ`À್ಯವಾಗಿರಲಿಲ್ಲ.

ಮೂವತ್ತಡಿಗಿಂತಲೂ ಆಳವಾದ ಬಾವಿಯ ಒಳಗೆ ಗುಹೆಯಂತಿರುವಲ್ಲಿ ಈ ಚಿರತೆ ಮರಿ ಅಡಗಿಕೊಳ್ಳುತ್ತಿತ್ತು. ಇಳಿಸಿದ ಬೋನಿನೊಳಗೂ ಬರಲು ಹಿಂದೇಟು ಹಾಕುತ್ತಿತ್ತು.

ಆಗ, ಅರಣ್ಯ ಇಲಾಖೆಯೊಂದಿಗೆ ನಿರಂತರ ಸಹಚರ್ಯ ಹೊಂದಿರುವ ಸ್ವಯಂಸೇವಾ ಸಂಸ್ಥೆ ಚಿಟ್ಟೆ ಪಿಲಿ ವೈಲ್ಡ್ ಲೈಫ್ ರೆಸ್‌ಕ್ಯೂ ಸೆಂಟರ್‌ನ ತಜ್ಞ ವೈದ್ಯರು ಸ್ಥಳಕ್ಕಾಗಮಿಸಿದರು. ಸಂರಕ್ಷಣ ತಂಡದ ಡಾ. ಮೇಘನಾ ಪೆಮ್ಮಯ್ಯ ಅವರು ಅರಿವಳಿಕೆ ಮದ್ದು ತುಂಬಿದ ಡಾರ್ಟ್ ಗನ್ ಹಿಡಿದುಕೊಂಡು ಬೋನಿನೊಳಗೆ ಕುಳಿತರು. ಅರಣ್ಯ ಇಲಾಖೆಯ ಸಿಬಂದಿಗಳು, ಊರವರು ಸೇರಿಕೊಂಡು ಅವರನ್ನು ಜತನದಿಂದ ಬಾವಿಗಿಳಿಸಲಾಯಿತು. ಹೀಗೆ ಹೆಣ್ಣು ಜೀವವೊಂದು ಹೆಣ್ಣು ಚಿರತೆ ಮರಿಯನ್ನು ಸೆರೆಹಿಡಿಯಲು ಬಾವಿಗಿಳಿದದ್ದು ರೋಮಾಂಚಕ. ಹೀಗೆ ಇಳಿದ ಡಾ. ಮೇಘನಾ ಗುಹೆಯೊಳಗೆ ಕುಳಿತ ಚಿರತೆ ಮರಿಯತ್ತ ಗುರಿಇಟ್ಟು ಅರಿವಳಿಕೆ ಚುಚ್ಚುಮದ್ದನ್ನು ಪ್ರಯೋಗಿಸಿದರು. ಚಿರತೆ ಪ್ರಜ್ಞೆ ತಪ್ಪಿದ ಬಳಿಕ ಅರಣ್ಯ ಇಲಾಖೆಯ ಸಿಬಂದಿ ಹಗ್ಗದ ಮೂಲಕ ಕೆಳಗಿಳಿದು ಹೆಣ್ಣು ಚಿರತೆ ಮರಿಯೊಂದಿಗೆ ಹೆಣ್ಣು ಜೀವ ಡಾ. ಮೇಘನಾ ಬಾವಿಯಿಂದ ಮೇಲಕ್ಕೆ ಬಂದರು. ಬಳಿಕ ಚಿರತೆಯನ್ನು ಸೂಕ್ತವಾಗಿ ಬಂಽಸಿ ಪ್ರಜ್ಞೆ ಬರುವ ಚುಚ್ಚು ಮದ್ದು ನೀಡಿ ಅದು ಚೇತರಿಸುತ್ತಿದ್ದಂತೆಯೇ ಅದನ್ನು ಅರಣ್ಯ ಇಲಾಖೆಯವರು ದಟ್ಟ ಕಾಡಿಗೆ ಒಯ್ದು ಬಂಧಮುಕ್ತಗೊಳಿಸಿ ಬಿಟ್ಟರು.

Advertisement

ಡಾ. ಯಶಸ್ವಿ ಅವರ ಹಿರಿತನದಲ್ಲಿ ಕಾರ್ಯಾಚರಿಸಿದ ಚಿಟ್ಟೆ ಪಿಲಿ ವೈಲ್ಡ್ ಲೈಫ್ ರೆಸ್‌ಕ್ಯೂ ತಂಡದಲ್ಲಿ ಡಾ. ಮೇಘನಾ ಜತೆಗೆ ಡಾ. ಪೃಥ್ವೀ, ಡಾ. ನಫೀಸಾ ಇವರಿದ್ದರು. ಅರಣ್ಯ ಸಂರಕ್ಷಣಾಽಕಾರಿ ಸತೀಶ್ ಎನ್., ವಲಯ ಅರಣ್ಯಾಽಕಾರಿ ಹೇಮಗಿರಿ ಅಂಗಡಿ, ಉಪವಲಯ ಅರಣ್ಯಾಧಿಕಾರಿ ಮಂಜುನಾಥ ಗಾಣಿಗ ಹಾಗೂ ಸಿಬಂದಿಗಳು ಈ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನೆರವೇರಿಸಲು ಎಲ್ಲ ಕ್ರಮ ಕೈಗೊಂಡಿದ್ದರು.

` ವೈಲ್ಡ್ ಲೈಫ್ ರೆಸ್‌ಕ್ಯೂ ಸೆಂಟರ್‌ನಲ್ಲಿ ಏಳೆಂಟು ವರ್ಷಗಳ ಕಾರ್ಯಾನುಭವ ಹೊಂದಿರುವ ಡಾ. ಯಶಸ್ವಿ ಜತೆ ಕಳೆದ 2 ವರ್ಷಗಳಿಂದ ನಾನು ಮತ್ತು ಒಡನಾಡಿಗಳಾದ ಡಾ. ಪೃಥ್ವೀ, ಡಾ. ನಫೀಸಾ ಕೆಲಸ ಮಾಡುತ್ತಿದ್ದೇವೆ. ಕಾರ್ಕಳ, ಹಿರಿಯಡ್ಕ, ಉಡುಪಿ ಮೊದಲಾದ ಕಡೆದ ನಾನು ಒಡನಾಡಿಗಳ ಸಹಕಾರದಿಂದ ಕಾರ್ಯಾಚರಣೆ ಮಾಡಿದ್ದೇನೆ.

ರವಿವಾರ ನಿಡ್ಡೋಡಿಯಲ್ಲಿ ನಡೆಸಿದ ಕಾರ್ಯಾಚರಣೆ ಸ್ವಲ್ಪ ಚ್ಯಾಲೆಂಜಿಂಗ್ ಆಗಿಯೇ ಇತ್ತು. ನಮಗೆ ಬೆಳಗ್ಗೆ 9 ರ ಸುಮಾರಿಗೆ ಕರೆ ಬಂದಿದ್ದು 10.30ಕ್ಕೆ ಸ್ಥಳ ತಲುಪಿದ್ದೆವು. ಆಗಲೇ ಅರಣ್ಯ ಇಲಾಖೆಯವರು ಜನಸಂದಣಿ ನಿಯಂತ್ರಣ ಮಾಡಿ ನಮಗೆ ಅನುಕೂಲ ಮಾಡಿಕೊಟ್ಟರು. ಏಕೆಂದ್ರೆ ಜನರ ಗದ್ದಲ ಜಾಸ್ತಿ ಆದಷ್ಟೂ ಚಿರತೆ ಗಲಿಬಿಲಿಗೊಳ್ಳುತ್ತದೆ, ನಮ್ಮ ಕೆಲಸ ಕಷ್ಟ ಆಗುತ್ತದೆ. ಇಲಾಖೆಯವರು, ಸ್ಥಳೀಯರು ಎಲ್ಲ ಸಂಪೂರ್ಣ ಸಹಕಾರ ಕೊಟ್ಟ ಕಾರಣ ಸುಮಾರು ಒಂದು ಗಂಟೆಯೊಳಗೆ ಚಿರತೆ ಮರಿಯನ್ನು ಮೇಲಕ್ಕೆ ತರಲು ಸಾಧ್ಯವಾಯಿತು. ಮೇಲಿನಿಂದ ಬಿದ್ದ ಕಾರಣ ಮೈಯಲ್ಲಿ ಏನಾದರೂ ಗಾಯಗಳಾಗಿದೆಯೋ ಎಂದು ಪರಿಶೀಲಿಸಿದೆವು. ಏನೂ ಆಗಿರಲಿಲ್ಲ. ಆದರೆ ನಿರ್ಜಲೀಯತೆಯ ಸಮಸ್ಯೆ ಇರುವುದು ಸಹಜವಾಗಿದ್ದ ಕಾರಣ ಅದಕ್ಕೆ ಪ್ರಜ್ಞೆ ಮರಳಿದ ಬಳಿಕ ನಿರ್ಜಲೀಯತೆಯನ್ನು ಹೋಗಲಾಡಿಸಿ, ಈ ಪ್ರಾಣಿ ಇನ್ನು ಸ್ವತಂತ್ರವಾಗಿ ಓಡಾಡಬಹುದು ಎಂದು ವೈದ್ಯಕೀಯ ಪ್ರಮಾಣ ಪತ್ರ ನೀಡಿದ ಬಳಿಕ ಅರಣ್ಯ ಇಲಾಖೆಯವರು ಅದನ್ನು ಕಾಡಿಗೆ ಬಿಡುವ ಕ್ರಮ ಕೈಗೊಂಡರು’.
– ಡಾ. ಮೇಘನಾ ಪೆಮ್ಮಯ್ಯ

Advertisement

Udayavani is now on Telegram. Click here to join our channel and stay updated with the latest news.

Next