ಮಂಡ್ಯ: ಕಳೆದ ಹತ್ತು ದಿನಗಳಿಂದ ಭೀತಿ ಮೂಡಿಸಿದ್ದ ಚಿರತೆಯನ್ನು ಸೆರೆ ಹಿಡಿಯುವಲ್ಲಿ ಅರಣ್ಯಾಧಿಕಾರಿಗಳು ಯಶಸ್ವಿಯಾಗಿದ್ದಾರೆ.
ಕೆ.ಆರ್.ಪೇಟೆ ತಾಲೂಕಿನ ಬೂಕನಕೆರೆ ಹೋಬಳಿಯ ಗವಿಮಠದಲ್ಲಿ ಪ್ರಸಿದ್ದ ಸಿದ್ದಲಿಂಗೇಶ್ವರ ಜಾತ್ರಾ ಮಹೋತ್ಸವ ಹಾಗೂ ಭಾನುವಾರ ರಥೋತ್ಸವ ನಡೆಯಲಿದ್ದು, ಚಿರತೆ ಸೆರೆ ಹಿಡಿದಿದ್ದರಿಂದ ಅಲ್ಲಿನ ಮಠದ ಸಿಬ್ಬಂದಿ ಹಾಗೂ ಸಾರ್ವಜನಿಕರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಕಳೆದ ಹತ್ತು ದಿನಗಳ ಹಿಂದೆ ಬೆಟ್ಟದ ಮೇಲೆ ಕಲ್ಲುಬಂಡೆಯ ಮೇಲೆ ಚಿರತೆ ಮರಿಗಳನ್ನು ಕಂಡ ಮಠದ ಸಿಬ್ಬಂದಿ ಅರಣ್ಯ ಇಲಾಖೆಗೆ ಸುದ್ದಿಯನ್ನು ತಿಳಿಸಿದ್ದಾರೆ. ಕೂಡಲೇ ಅಲ್ಲಿಗೆ ಬೋನು ಇಟ್ಟು ಚಿರತೆಯನ್ನು ಸೆರೆ ಹಿಡಿಯುವ ಕೆಲಸವನ್ನು ಅರಣ್ಯ ಇಲಾಖೆ ಸಿಬ್ಬಂದಿ ಮಾಡಿದ್ದಾರೆ.
ಇದನ್ನೂ ಓದಿ:ಸಿಸಿಬಿ ಪೊಲೀಸರಿಂದ ಕಾರು ಮಾರಾಟ: ನಗರದಲ್ಲಿ ಸಿಐಡಿ ತನಿಖೆ ಆರಂಭ, 4 ಪೊಲೀಸರ ಹೆಸರು ಉಲ್ಲೇಖ
ಕಳೆದ ನಾಲ್ಕು ದಿನಗಳಿಂದ ಗವಿಮಠದ ಜಾತ್ರೆ ಸಂಭ್ರಮ ಬೆಟ್ಟದ ಮೇಲೆ ದಿನನಿತ್ಯ ಸಾವಿರಾರು ಸಂಖ್ಯೆಯ ಭಕ್ತರು ಪೂಜೆ-ಪುನಸ್ಕಾರ ಕೈಗೊಂಡು ಬರುತ್ತಿದ್ದಾರೆ. ಇದರ ನಡುವೆಯೂ ಶುಕ್ರವಾರ ರಾತ್ರಿ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ತಾಯಿ ಚಿರತೆ ಸೆರೆಯಾಗಿದೆ.
ಚಿರತೆಯನ್ನು ಸೆರೆ ಹಿಡಿಯುವಲ್ಲಿ ವಲಯ ಅರಣ್ಯಾಧಿಕಾರಿ ಗಂಗಾಧರ್ ಮತ್ತು ಸಿಬ್ಬಂದಿಗಳ ಸಮಯೋಚಿತ ಜಾಣ್ಮೆಗೆ ಸಾರ್ವಜನಿಕರು ಮೆಚ್ವುಗೆ ವ್ಯಕ್ತಪಡಿಸಿದ್ದಾರೆ.