ಗಂಗಾವತಿ: ತಾಲೂಕಿನ ಆನೆಗೊಂದಿ ಕಿಷ್ಕಿಂದಾ ಪ್ರದೇಶದ ಬೆಟ್ಟಗಳಲ್ಲಿ ಚಿರತೆ ಉಪಟಳ ಮುಂದುವರಿದಿದ್ದು ವಿರೂಪಾಪೂರಗಡ್ಡಿ ಬೆಟ್ಟದಲ್ಲಿ ಕುರಿ ಮೇಯಿಸಲು ಹೋಗಿದ್ದ ಕುರಿಗಾಯಿ ರಾಘವೇಂದ್ರ (18) ಎಂಬ ಯುವಕನನ್ನು ಕೊಂದು ಹಾಕಿದ ಘಟನೆ ಶುಕ್ರವಾರ ಮಧ್ಯಾಹ್ನ ಜರುಗಿದೆ.
ಕಳೆದ ಮೂರು ತಿಂಗಳಿಂದ ಆನೆಗೊಂದಿ ಭಾಗದಲ್ಲಿ ಚಿರತೆ ಕರಡಿಗಳ ಹಾವಳಿ ಜಾಸ್ತಿಯಾಗಿದ್ದು ಆನೆಗೊಂದಿ ಯುವಕನನ್ನು ಕೊಂದು ಹಾಕಿದೆ. ಜಂಗ್ಲಿ ರಂಗಾಪೂರದ ಮಹಿಳೆ ಹಾಗೂ ಹೈದ್ರಾಬಾದ್ ನ ಬಾಲಕನನ್ನು ಸೇರಿ ಜನ ಜಾನುವಾರುಗಳಿಗೆ ಗಾಯಗೊಳಿವೆ.
ಅರಣ್ಯ ಇಲಾಖೆಯವರು ಚಿರತೆ ಉಪಟಳ ಇರುವ ಪ್ರದೇಶದಲ್ಲಿ ಬೋನ್ ಇರಿಸಿದೆ ಸಿಸಿ ಕ್ಯಾಮರಾಗಳನ್ನು ಅಳವಡಿಸಿದರೂ ಚಿರತೆ ಕರಡಿ ಹಾವಳಿ ತಡೆಯುವಲ್ಲಿ ವಿಫಲವಾಗಿದೆ.
ಇದನ್ನೂ ಓದಿ : ದೆಹಲಿ ರೈತರ ಹೋರಾಟ ದಾರಿ ತಪ್ಪಿದೆ: ಈರಣ್ಣ ಕಡಾಡಿ