ತುಮಕೂರು: ನಗರದ ಹೊರವಲಯದ ದೇವರಾಯನದುರ್ಗ ಅರಣ್ಯ ಪ್ರದೇಶದಲ್ಲಿ ಚಿರತೆಗಳ ಅಧ್ಯಯನಕ್ಕಾಗಿ ಅಳವಡಿಸಲಾಗಿದ್ದ ಕ್ಯಾಮೆರಾದಲ್ಲಿ ಚಿರತೆಯೊಂದು ಬಹುದೊಡ್ಡ ಬಾವಲಿಯೊಂದನ್ನು ಬೇಟೆಯಾಡಿ ತೆಗೆದುಕೊಂಡು ಹೋಗುತ್ತಿರುವ ದೃಶ್ಯ ಕಂಡುಬಂದಿದೆ.
ಜಿಲ್ಲೆಯ ಸಂಜಯ್ ಗುಬ್ಬಿ ಮತ್ತು ತಂಡ ಅಳವಡಿಸಿದ್ದ ಕ್ಯಾಮೆರಾದಲ್ಲಿ ಹೊಳೆಮತ್ತಿ ನೇಚರ್ ಫೌಂಡೇಶನ್ ಹಾಗೂ ನೇಚರ್ ಕನ್ನರ್ವೇಷನ್ ಫೌಂಡೇಶನ್ ವತಿಯಿಂದ ಆಗಸ್ಟ್- ಸೆಪ್ಟೆಂಬರ್ ಅವಧಿಯಲ್ಲಿ ಚಿರತೆ ಬೇಟೆಯಾಡುವಂತಹ ದೃಶ್ಯ ಕಂಡುಬರುತ್ತದೆ.
ಈ ರೀತಿಯಾದ ಅಪರೂಪದ ದೃಶ್ಯ ಇದೇ ಮೊದಲ ಬಾರಿಗೆ ಕ್ಯಾಮರಾದಲ್ಲಿ ಸೆರೆಯಾಗಿದ್ದು ಸಾಮಾನ್ಯವಾಗಿ ಚಿರತೆಗಳು ಪ್ರಾಣಿಗಳನ್ನು ಬೇಟೆಯಾಡುತ್ತವೆ. ಚಿರತೆಗಳು ಹಲವು ವಿಧದ ಪ್ರಾಣಿಗಳನ್ನು ಭಕ್ಷಿಸುವುದು ವೈಜ್ಞಾನಿಕವಾಗಿ ದಾಖಲಾಗಿದೆ. ಕಡವೆ, ಸಾರಂಗ, ಕಾಡು ಹಂದಿ, ಕುರಿ, ಮೇಕೆ, ನಾಯಿ, ಮೊಲ, ಮುಳ್ಳುಹಂದಿ, ಚಿಪ್ಪು ಹಂದಿಯನ್ನು ಬೇಟೆಯಾಡುತ್ತವೆ. ಆದರೆ ದೇವರಾಯನದುರ್ಗ ಅರಣ್ಯ ಪ್ರದೇಶದಲ್ಲಿಯ ಚಿರತೆ ದೊಡ್ಡ ಬಾವಲಿಯನ್ನೂ ಬೇಟೆಯಾಡಿರೋದು ಕಂಡುಬಂದಿದೆ.
ಸಾಮಾನ್ಯವಾಗಿ ದೇವರಾಯನ ದುರ್ಗಾ ಅರಣ್ಯದಲ್ಲಿ ಕಂಡುಬರುವ (ಹಾಲಕ್ಕಿ) ಎಂದು ಕರೆಲಾಗುವ ಈ ದೊಡ್ಡ ಬಾವಲಿಗಳು 1.5 ಕೆ.ಜಿಯಷ್ಟು ತೂಕವಿರುತ್ತವೆ. ರಕ್ಕೆಗಳನ್ನು ಹರಡಿದರೆ ಐದು ಅಡಿಗಳಷ್ಟು ವಿಸ್ತಾರವಾಗಿದೆ.
ಇದನ್ನೂ ಓದಿ: Ankola : ಸಿಡಿಲು ಬಡಿದು ಮಹಿಳೆ ಅಸ್ವಸ್ಥ, ಆಸ್ಪತ್ರೆಗೆ ದಾಖಲು