ಚನ್ನರಾಯಪಟ್ಟಣ: ತಾಲೂಕಿನ ಗ್ರಾಮಾಂತರ ಪ್ರದೇಶದಲ್ಲಿ ಒಂದು ತಿಂಗಳಿಂದ ನಿರತಂತರ ಚಿರತೆದಾಳಿ ನಡೆಯುತ್ತಿದ್ದು, ಕುರಿ, ಜಾನುವಾರುಗಳಿಗೆತೊಂದರೆಯಾಗಿದೆ. ಗ್ರಾಮಸ್ಥರು ಆತಂಕದಲ್ಲಿಕಾಲಕಳೆಯುವಂತಾಗಿದೆ. ಆರಣ್ಯ ಇಲಾಖೆ ಮಾತ್ರತನಗೆ ಸಂಬಂಧವೇ ಇಲ್ಲದಂತೆ ಮೌನವಹಿಸಿರುವು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಕಾಡಿಂದ ನಾಡಿಗೆ ಬಂದಿರುವ ಚಿರತೆಗಳು ಅನೇಕ ಗ್ರಾಮದಲ್ಲಿನ ನಾಯಿ, ಕುರಿ ಹಾಗೂ ಜಾನುವಾರುಗಳನ್ನು ಬೇಟೆಯಾಡಿ ಪರಾರಿಯಾಗುತ್ತಿವೆ. ಇದಕ್ಕೆ ಸಾಕ್ಷಿಯಾಗಿ ಫೆ.17 ರಂದು ಎನ್‌ಎಚ್.75ಸಮೀಪದ ಗೌಡಗೆರೆ ಗ್ರಾಮದಲ್ಲಿ ತಡರಾತ್ರಿಯಲ್ಲಿ ರೈತತಿಮ್ಮಮ್ಮ ನಾಗರಾಜು ಅವರ ಮನೆಯ ಕೊಟ್ಟಿಗೆಯಲ್ಲಿ ಕಟ್ಟಿದ್ದ ಜಾನುವಾರನ್ನು ತಿಂದು ಹಾಕಿದೆ.
ಇನ್ನು ದಂಡಿಗನಹಳ್ಳಿ ಹೋಬಳಿ ಮುದ್ದನಹಳ್ಳಿ ಗೇಟಿನಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ ಯಲ್ಲಿ ಫೆ.16 ರಂದು ತಡರಾತ್ರಿ 9.30ರಲ್ಲಿ ಕಾರಿಗೆ ಗಂಡು ಚಿರತೆ ಡಿಕ್ಕಿ ಹೊಡೆದ ಪರಿಣಾಮ ಚಿರತೆಸ್ಥಳದಲ್ಲಿ ಮೃತ ಪಟ್ಟಿದೆ. ಒಂದು ತಿಂಗಳ ಹಿಂದೆ ಬಾಗೂರು ಹೋಬಳಿ ಕೆಂಬಾಳು ಗ್ರಾಮದಲ್ಲಿಯೂ ಚಿರತೆ ದಾಳಿಗೆ ಕುರಿಗಳು ಬಲಿಯಾಗಿವೆ ಆದರೂ ಅರಣ್ಯ ಇಲಾಖೆ ಮಾತ್ರ ಸ್ಪಂದಿಸದೆ ಮೌನವಹಿಸಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ಗೌಡಗೆರೆ ಗ್ರಾಮದ ಸುತ್ತಮುತ್ತಲಿನ ಅನೇಕ ಹಳ್ಳಿಯಲ್ಲಿ ಬೀದಿನಾಯಿ ನಿತ್ಯವೂ ನಾಪತ್ತೆಯಾಗಿರುವುದು, ಕೆಲ ಮನೆಗಳಲ್ಲಿ ಕುರಿ, ರಾಸುಗಳ ಕರುಗಳು ರಾತ್ರಿ ಕಳೆದು ಬೆಳಗಾಗುವದುರೊಳಗೆ ಮಾಯವಾಗುತ್ತಿವೆ.ರೈತರ ಮನವಿಗೆ ಸ್ಪಂದನೆ ಇಲ್ಲ: ಚಿರತೆ ಹಾವಳಿಯಿಂದ ಬೇಸತ್ತಿರುವ ರೈತರು ಅರಣ್ಯ ಇಲಾಖೆ ಆಗಮಿಸಿ ತಮ್ಮ ಗ್ರಾಮಕ್ಕೆ ಬೋನು ನೀಡುವಂತೆ ಮನವಿ ಮಾಡುತ್ತಿದ್ದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂಬುದು ಸ್ಥಳಿಯರ ಆರೋಪವಾಗಿದೆ.
Related Articles
ರೈತರು ತಮ್ಮ ಸಾಕು ಪ್ರಾಣಿಯನ್ನು ಹೊಲ- ತೋಟ ಮನೆಗಳಿಗೆ ಕರೆದುಕೊಂಡು ಹೋಗಲು ಭಯಪಡುತ್ತದ್ದಾರೆ. ಮಕ್ಕಳು, ಮಹಿಳೆಯರು ಸಂಜೆಯಾಗುತ್ತಿದ್ದಂತೆಮನೆಯಿಂದ ಹೊರಬರಲು ಭಯಪಡುವ ಪರಿಸ್ಥಿತಿ ತಾಲೂಕಿನ ಅನೇಕ ಗ್ರಾಮದಲ್ಲಿ ನಿರ್ಮಾಣ ಆಗಿದೆ.
ಪ್ರತಿ ಬಾರಿ ಗ್ರಾಮದ ರಾಸುಗಳ ಮೇಲೆ ಚಿರತೆ ದಾಳಿ ನಡೆದಾಗಲೂ ಕಾಟಾಚಾರಕ್ಕಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡುತ್ತಾರೆ, ರಾಸುಗಳು ಮೃತ ಪಟ್ಟರೆ ಪಶುಪಾಲನ ಇಲಾಖೆಗೆತಿಳಿಸಿ ಮೃತ ರಾಸು ಅಥವಾ ಕುರಿಯ ದೇಹ ಪಂಚನಾಮೆ ಮಾಡಿಸುವಂತೆ ತಿಳಿಸುವುದಲ್ಲದೆ ಪರಿಹಾರ ನೀಡುವ ಭರವಸೆ ನೀಡಿ ಗ್ರಾಮದಿಂದ ತೆರಳುತ್ತಿದ್ದಾರೆ ಹೊರತು ಈ ವರೆಗೆ ಪರಿಹಾರ ನೀಡಿಲ್ಲ. ಚಿರತೆ ಹಿಡಿಯುವ ಕೆಲಸಕ್ಕೆ ಕೈ ಹಾಕಿಲ್ಲ ಎನ್ನುವುದು ಚಿರತೆ ದಾಳಿಗೆ ರಾಸು ಹಾಗೂ ಕುರಿ ಕಳೆದುಕೊಂಡ ರೈತರ ಅಳಲಾಗಿದೆ.
ಕೋಳಿ ಶೆಡ್ನತ್ತ ಚಿರತೆ ಹೆಜ್ಜೆ: ಬೆಟ್ಟ ಗುಡ್ಡ ಹಾಗೂ ಚಿರತೆ ದಾಳಿ,Leopard attack,Kannadanews, Kannadapapers, udayavanipaper ಹೆಚ್ಚು ಮರಗಿಡಗಳು ಬೆಳೆದಿರುವ ಜಾಗದಲ್ಲಿ ವಾಸವಾಗಿರುವ ಚಿರತೆಗಳು ರಾತ್ರಿಯಾಗುತ್ತಿದಂತೆ ಗ್ರಾಮಕ್ಕೆ ಪ್ರವೇಶ ಮಾಡುತ್ತಿವೆ. ನಾಯಿ, ಕುರಿ,ರಾಸುಗಳ ಮೇಲೆ ದಾಳಿ ಮಾಡುತ್ತಿದ್ದ ಚಿರತೆಗಳು ಕೋಳಿ ಫಾರಂಗಳತ್ತ ಹೆಜ್ಜೆ ಹಾಕುತ್ತಿವೆ. ಇತ್ತೀಚೆಗೆ ಸ್ಥಳೀಯ ಫಾರಂ ಕೋಳಿ ಫಾರಂಗೆ ದಾಳಿ ಮಾಡಿಹತ್ತಾರು ಕೋಳಿಗಳನ್ನು ತಿಂದಿದೆ ಎಂದು ಶೆಡ್ ಮಾಲೀಕರಿಗೆ ಅಳಲು ತೋಡಿಕೊಂಡಿದ್ದಾರೆ.
ಸಿಗದ ಪರಿಹಾರ: ಚಿರತೆಗೆ ದಾಳಿಗೆ ರಾಸು ಬಲಿಯಾದರೆ ರೈತರಿಗೆ 30 ಸಾವಿರ ಪರಿಹಾರ ನೀಡಲಾಗುತ್ತದೆ, ಮೇಕೆ ಅಥವಾ ಕರುಗಳು ಮೃತವಾದರೆ 5 ಸಾವಿರ ಪರಿಹಾರ ನೀಡಬೇಕು ಎಂದು ಸರ್ಕಾರ ಆದೇಶ ಇದೆ. ಈ ಪರಿಹಾರ ಪಡೆಯಲು ರೈತರು ಜನಪ್ರತಿನಿಧಿ ಮನೆ ಇಲ್ಲವೆ ಅರಣ್ಯ ಇಲಾಖೆ ಕಚೇರಿ ಸುತ್ತುವ ಪರಿಸ್ಥಿತಿ ತಾಲೂಕಿನಲ್ಲಿ ನಿರ್ಮಾಣವಾಗಿದೆ.
ಮುಂಜಾಗ್ರತೆ ವಹಿಸದ ಇಲಾಖೆ :
ಚಿರತೆಗಳು ಶ್ರವಣಬೆಳಗೊಳ, ಹಿರೀಸಾವೆಹೋಬಳಿ, ನುಗ್ಗೇಹಳ್ಳಿ, ಬಾಗೂರು ಹಾಗೂದಂಡಿಗನಹಳ್ಳಿಯಲ್ಲಿ ಹಲವು ಕೆರೆಯಲ್ಲಿದಟ್ಟವಾಗಿ ಬೆಳೆದಿರುವ ಗಿಡಗಳ ತಪ್ಪಲಿನಲ್ಲಿಹಾಗೂ ಅರಣ್ಯಗಳಲ್ಲಿ ಚಿರತೆ ವಾಸವಾಗಿವೆಗ್ರಾಮಕ್ಕೆ ಹೊಂದು ಕೊಂಡಂತೆ ಇರುವ ಕೆರೆಯಲ್ಲಿಚಿರತೆಗಳು ಸಾರ್ವಜನಿಕರಿಗೆ ದರ್ಶನ ನೀಡುವಮೂಲಕ ಗ್ರಾಮದಲ್ಲಿ ಹಗಲು-ರಾತ್ರಿ ಸಂಚರಿಸುತ್ತಿದ್ದು ಈಗಾಗಲೆ ಹಲವು ಬಾರಿ ರೈತರ ಮೇಲೆ,ಸಾಕುಪ್ರಾಣಿಗಳ ಮೇಲೆ ದಾಳಿ ನಡೆಸಿ ಚಿರತೆಗಳುಬಲಿ ತೆಗೆದುಕೊಂಡಿದ್ದರೂ ಈ ಭಾಗದಲ್ಲಿ ಅರಣ್ಯ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ.
ಫೆ.17 ರಂದು ತೋಟದಲ್ಲಿ ಕಟ್ಟಿದ್ದ ಒಂದೂವರೆ ವರ್ಷದ ಹಸುವಿನಕರುವಿನ ಮೇಲೆ ಚಿರತೆ ದಾಳಿ ಮಾಡಿ ಕೊಂದಿದೆ. ಈ ಬಗ್ಗೆ ಅರಣ್ಯ ಇಲಾಖೆ ತಿಳಿಸಿದರೆ, ಅವರು, ಪಶು ಆಸ್ಪತ್ರೆಯಲ್ಲಿ ಸತ್ತ ಕುರುವಿನದೇಹ ಪರೀಕ್ಷಿಸಿ ಪ್ರಮಾಣ ಪತ್ರ ನೀಡಿ ನಂತರ ಪರಿಹಾರ ನೀಡುತ್ತೇವೆ ಎಂದಿದ್ದಾರೆ. –ತಿಮ್ಮಮ್ಮ, ಗೌಡಗೆರೆ ರೈತ ಮಹಿಳೆ ಗೌಡಗೆರೆ
ತಾಲೂಕಿನ ಹಲವು ಗ್ರಾಮಸ್ಥರು ಬೋನಿಗೆ ಬೇಡಿಕೆ ಇಟ್ಟಿದ್ದಾರೆ. ಬೇಡಿಕೆಇರುವಷ್ಟು ಬೋನ್ ಇಲ್ಲದೆ ಇರುವುದರಿಂದತೊಂದರೆ ಆಗುತ್ತಿದೆ. ಯಾವ ಗ್ರಾಮದಲ್ಲಿಹೆಚ್ಚು ಚಿರತೆ ಕಾಣಿಸಿಕೊಳ್ಳುತ್ತದೆ. ಅಲ್ಲಿಗೆಕೂಡಲೆ ಸಿಬ್ಬಂದಿ ಕಳುಹಿಸಿ ಚಿರತೆ ಹಿಡಿಯಲು ಕ್ರಮ ತೆಗೆದುಕೊಳ್ಳುತ್ತಿದ್ದೇವೆ. –ಪಲ್ಲವಿ, ವಲಯ ಅರಣ್ಯಾಧಿಕಾರಿ
–ಶಾಮಸುಂದರ್ ಕೆ. ಅಣ್ಣೇನಹಳ್ಳಿ