ಗುಡಿಬಂಡೆ : ತಾಲೂಕಿನ ಪಲ್ಲೈಗಾರಹಳ್ಳಿ ಗ್ರಾಮದ ಕಲ್ಲು ಕ್ವಾರಿ ಬಳಿ ಚಿರತೆ ದಾಳಿಯಿಂದಾಗಿ ಎರಡು ಹಸುಗಳು ಸಾವನ್ನಪ್ಪಿರುವ ಘಟನೆ ನಡೆದಿದೆ.
ಭಾನುವಾರ ಬೆಳಗಿನ ಜಾವ ನಾಲ್ಕು ಗಂಟೆ ಸುಮಾರಿನಲ್ಲಿ ಚಿರತೆ ದಾಳಿ ನಡೆಸಿದ್ದು, ದಾಳಿಯಿಂದಾಗಿ ಎರಡು ಹಸುಗಳು ಸಾವನ್ನಪ್ಪಿರುತ್ತವೆ, ಉಪ್ಪಾರಹಳ್ಳಿ ಗ್ರಾಮದ ವಾಸಿಯಾದ ಮೋಹದ್ದಿನ್ ಸಾಬ್ ಎಂಬುವರ ಎರಡು ಹಸುಗಳು ಸಾವನ್ನಪ್ಪಿರುತ್ತವೆ, ಸ್ಥಳಕ್ಕೆ ರಾಜಸ್ವ ನಿರೀಕ್ಷಕ ಲಕ್ಷ್ಮೀನಾರಾಯಣ ಬೇಟಿ ನೀಡಿ ಪರಿಶಿಲಿಸಿದ್ದಾರೆ.
ಚಿರತೆ ಹಿಡಿಯಲು ಒತ್ತಾಯ: ಕಲ್ಲು ಕ್ವಾರಿ ಯ ಬಳಿ ಚಿರತೆ ಓಡಾಡುತ್ತಿದ್ದ, ಈ ಹಿಂದೆಯೂ ಸಹ ಕುರಿಗಳ ಮೇಲೆ ದಾಳಿ ಕುರಿಗಳು ಸಾವನ್ನಪ್ಪಿದ್ದು, ಈಗ ಪುನಃ ಕ್ವಾರಿಯ ಸಮೀಪವೇ ಈ ಘಟನೆ ನಡೆದಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಕೂಡಲೇ ಎಚ್ಚೆತ್ತುಕೊಂಡು ಚಿರತೆ ಹಿಡಿಯಲು ಕ್ರಮ ತೆಗೆದುಕೊಳ್ಳಬೇಕು ಎಂದರು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಇದನ್ನೂ ಓದಿ : ಅನಧಿಕೃತ ಮಸೀದಿ ನಿರ್ಮಾಣದ ಆರೋಪ: ಮೂರು ದಿನದೊಳಗೆ ಸೂಕ್ತ ದಾಖಲೆ ನೀಡಲು ಸೂಚನೆ