Advertisement

Leo ಸಿನಿಮಾದಲ್ಲಿ 13 ಬದಲಾವಣೆ: ನಿಂದನೆಯ ಡೈಲಾಗ್ಸ್‌, ಹಿಂಸೆಯ ದೃಶ್ಯಗಳಿಗೆ ಕತ್ತರಿ

12:55 PM Oct 10, 2023 | Team Udayavani |

ಚೆನ್ನೈ: ದಳಪತಿ ವಿಜಯ್‌ ಅವರ ʼಲಿಯೋʼ ಸಿನಿಮಾದ ಟ್ರೇಲರ್‌ ಇತ್ತೀಚೆಗೆ ರಿಲೀಸ್‌ ಆಗಿದೆ. ಪ್ಯಾನ್‌ ಇಂಡಿಯಾದಲ್ಲಿ ಸಿನಿಮಾದ ಟ್ರೇಲರ್‌ ಸದ್ದು ಮಾಡಿದೆ. ಆ ಮೂಲಕ ಕುತೂಹಲ ಹೆಚ್ಚಿಸಿದೆ.

Advertisement

ಲೋಕೇಶ್ ಕನಕರಾಜ್‌ – ವಿಜಯ್‌ ʼಮಾಸ್ಟರ್‌ʼ ಬಳಿಕ ಮತ್ತೆ ಜೊತೆಯಾಗುತ್ತಿರುವುದರಿಂದ ಸಿನಿಮಾದ ಮೇಲೆ ಬಹು ನಿರೀಕ್ಷೆಯನ್ನಿಟ್ಟುಕೊಳ್ಳಲಾಗಿದೆ. ಅದರಂತೆ ಟ್ರೇಲರ್‌ ಕೂಡ ಹೈಪ್‌ ಹೆಚ್ಚಿಸಿದ್ದು, ಬಿಗ್‌ ಸ್ಕ್ರೀನ್‌ ಮೇಲೆ ʼಲಿಯೋʼ ಅಬ್ಬರ ನೋಡಲು ಫ್ಯಾನ್ಸ್‌ ಗಳು ಕಾಯುತ್ತಿದ್ದಾರೆ.

ಇತ್ತೀಚೆಗೆ ʼಲಿಯೋʼ ಚಿತ್ರಕ್ಕೆ ʼಯು/ಎʼ ಸರ್ಟಿಫಿಕೇಟ್‌ ನ್ನು  ಸೆನ್ಸಾರ್‌ ಬೋರ್ಡ್ ನೀಡಿತ್ತು. ಇದೀಗ ಆ ಸರ್ಟಿಫಿಕೇಟ್‌ ಇಂಟರ್‌ ನೆಟ್‌ ನಲ್ಲಿ ವೈರಲ್‌ ಆಗಿದೆ. ಇದರ ಜೊತೆಗೆ ಸಿನಿಮಾದಲ್ಲಿ ಏನೆಲ್ಲಾ ಬದಲಾವಣೆ ಮಾಡಲು ಸೂಚನೆ ಸಿಕ್ಕಿದೆ ಎನ್ನುವುದರ ಬಗ್ಗೆ ತಿಳಿದುಬಂದಿದೆ.

ಇದನ್ನೂ ಓದಿ: Animal: ರಣ್ಬೀರ್‌ ಜೊತೆ ಲಿಪ್‌ ಲಾಕ್‌ ಕಿಸ್‌ ಮಾಡಿದ ರಶ್ಮಿಕಾ;‌ ಪೋಸ್ಟರ್‌ ವೈರಲ್

13 ಕಡ್ಡಾಯ ಬದಲಾವಣೆಯನ್ನು ಸಿನಿಮಾದಲ್ಲಿ ಮಾಡಬೇಕೆಂದು ಸೆನ್ಸಾರ್‌ ಬೋರ್ಡ್‌ ಸೂಚನೆ ನೀಡಿದೆ. ಸಿನಿಮಾದಲ್ಲಿನ ಕೆಲ ನಿಂದನೆಯ ಡೈಲಾಗ್ಸ್‌ ಗಳನ್ನು ಮ್ಯೂಟ್ (ಬೀಪ್) ಮಾಡಲು ಹಾಗೂ ಕೆಲ ಹಿಂಸಾತ್ಮಕ ದೃಶ್ಯಗಳನ್ನು ತೆಗೆದು ಹಾಕುವಂತೆ ಸೆನ್ಸಾರ್‌ ಬೋರ್ಡ್‌ ಹೇಳಿದೆ. ಈ ಎಲ್ಲಾ ಕಟ್ ಗಳನ್ನು ಮಾಡಿದ ಬಳಿಕ ಸಿನಿಮಾದ ರನ್‌ ಟೈಮ್‌ 2:44 ಗಂಟೆಗಳಾಗಿದೆ.

Advertisement

ಲಿಯೋʼ ಸಿನಿಮಾಕ್ಕೆ ಅನಿರುದ್ಧ್ ರವಿಚಂದರ್‌ ಅವರು ಮ್ಯೂಸಿಕ್ ನೀಡಿದ್ದು, ತ್ರಿಷಾ ಕೃಷ್ಣನ್‌, ಸಂಜಯ್‌ ದತ್‌ ,ಅರ್ಜುನ್, ಮಿಸ್ಕಿನ್, ಮನ್ಸೂರ್ ಅಲಿ ಖಾನ್, ಗೌತಮ್ ಮೆನನ್, ಪ್ರಿಯಾ ಆನಂದ್, ಮ್ಯಾಥ್ಯೂ ಥಾಮಸ್, ಸ್ಯಾಂಡಿ ಮಾಸ್ಟರ್ ಮುಂತಾದ ನಟರು ಸಿನಿಮಾದಲ್ಲಿ ನಟಿಸಿದ್ದಾರೆ.

ಇದೇ ಅಕ್ಟೋಬರ್‌ 19 ರಂದು ಸಿನಿಮಾ ತೆರೆಗೆ ಬರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next