Advertisement

Leo 2nd Song ರಿಲೀಸ್:‌ “Badass” ಮೂಲಕ ಹೈಪ್‌ ಹೆಚ್ಚಿಸಿದ ʼಲಿಯೋದಾಸ್‌ʼ

06:04 PM Sep 28, 2023 | Team Udayavani |

ಚೆನ್ನೈ: ದಳಪತಿ ವಿಜಯ್‌ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ ʼಲಿಯೋʼ ಸಿನಿಮಾದ ಎರಡನೇ ಹಾಡು ರಿಲೀಸ್‌ ಆಗಿದೆ.

Advertisement

ಲೋಕೇಶ್‌ ಕನಕರಾಜ್‌ ನಿರ್ದೇಶನದ ಬಹು ನಿರೀಕ್ಷಿತ ʼಲಿಯೋʼ ಸಿನಿಮಾ ಕಳೆದ ಕೆಲ ದಿನಗಳಿಂದ ಸದ್ದು ಮಾಡುತ್ತಿದೆ. ಇತ್ತೀಚೆಗೆ ಫ್ಯಾನ್ಸ್‌ ಗಳಿಗೆ ಆಡಿಯೋ ಲಾಂಚ್‌ ಕಾರ್ಯಕ್ರಮ ರದ್ದಾದ ವಿಚಾರದಿಂದ ಭಾರೀ ನಿರಾಶೆಯಾಗಿತ್ತು. ಆಡಿಯೋ ಕಾರ್ಯಕ್ರಮ ರದ್ದಾದ್ದಕ್ಕೆ ರಾಜಕೀಯ ಕಾರಣಗಳಿವೆ ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದರು. ಆದರೆ ಇದರ ಹಿಂದೆ ಯಾವುದೇ ರಾಜಕೀಯ ಒತ್ತಡಗಳಿಲ್ಲ ಎಂದು ನಿರ್ಮಾಣ ಸಂಸ್ಥೆ ಸವೆನ್‌ ಸ್ಕ್ರೀನ್‌ ಸ್ಟುಡಿಯೋ ಟ್ವೀಟ್‌ ಮಾಡಿ ಹೇಳಿತ್ತು.

ಇದಾದ ಕೆಲ ಸಮಯದ ಬಳಿಕ ʼಲಿಯೋʼ ಎರಡನೇ ಹಾಡನ್ನು ರಿಲೀಸ್‌ ಮಾಡುವುದಾಗಿ ಅನೌನ್ಸ್‌ ಮಾಡಿತ್ತು. ʼಬಾದಾಸ್ʼ(Badass) ಎನ್ನುವ ಹಾಡನ್ನು ರಿಲೀಸ್‌ ಮಾಡುವುದಾಗಿ ಮಧ್ಯರಾತ್ರಿ ಹಾಡಿನ ತುಣುಕನ್ನು ರಿಲೀಸ್‌ ಮಾಡಿತ್ತು.

ಈಗಾಗಲೇ ʼನಾ ರೆಡಿʼ ನಲ್ಲಿ ಹುಚ್ಚೆದ್ದು ಕುಣಿದ ದಳಪತಿ ಅವರನ್ನು ಮತ್ತೊಮ್ಮೆ ಡ್ಯಾನ್ಸ್‌ ನಂಬರ್‌ ನಲ್ಲಿ ನೋಡಲು ಫ್ಯಾನ್ಸ್‌ ಗಳು ಕಾಯುತ್ತಿದ್ದರು. ಇದೀಗ ʼಬಾದಾಸ್‌ʼ ಹಾಡನ್ನು ಚಿತ್ರತಂಡ ರಿಲೀಸ್‌ ಮಾಡಿದೆ. ಅನಿರುದ್ಧ್‌ ಮ್ಯೂಸಿಕ್‌ ಕಿವಿಗೆ ಕಿಕ್‌ ಕೊಡುವಂತೆ ಇದ್ದು, ಹಾಡು ಸೌತ್‌ ಬೀಟ್‌ ಹಿನ್ನೆಲೆಯಲ್ಲಿ ಮೂಡಿಬಂದಿದೆ.

ವಿಶೇಷವೆಂದರೆ ಹಾಡನ್ನು ಸಂಯೋಜಿದ ಅನಿರುದ್ದ್‌ ಅವರೇ ಹಾಡನ್ನು ಪವರ್‌ ಫುಲ್‌ ಆಗಿ ಹಾಡಿದ್ದಾರೆ. ಲಿರಿಕಲ್‌ ಹಾಡಿನಲ್ಲಿ ʼಲಿಯೋದಾಸ್‌ʼ ಶೌರ್ಯವನ್ನು ಲಿರಿಕಲ್‌ ರೂಪದಲ್ಲಿ ತೋರಿಸಲಾಗಿದೆ. ದಳಪತಿ ಅವರ ಮಾಸ್‌ ಅವತಾರವನ್ನು ಹಾಡಿನ ರೂಪದಲ್ಲಿ ತೋರಿಲಾಗಿದೆ.

Advertisement

ಈಗಾಗಲೇ ಒಂದೊಂದೇ ಕ್ಯಾರೆಕ್ಟರ್‌ ಗಳ ಪೋಸ್ಟರ್‌ ನ್ನು ರಿಲೀಸ್‌ ಮಾಡಿ ಹೈಪ್‌ ಹೆಚ್ಚಿಸಿರುವ ʼಲಿಯೋʼ ಇದೇ ಅಕ್ಟೋಬರ್‌ 19 ರಂದು ಸಿನಿಮಾ ತೆರೆಗೆ ಬರಲಿದೆ.‌

ʼಲಿಯೋʼ ಸಿನಿಮಾಕ್ಕೆ ಅನಿರುದ್ಧ್ ರವಿಚಂದರ್‌ ಅವರು ಮ್ಯೂಸಿಕ್ ನೀಡಿದ್ದು, ನಟಿ ತ್ರಿಷಾ ಕೃಷ್ಣನ್‌ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಸಂಜಯ್‌ ದತ್‌ ,ಅರ್ಜುನ್ ಸರ್ಜಾ, ಮಿಸ್ಕಿನ್, ಮನ್ಸೂರ್ ಅಲಿ ಖಾನ್, ಗೌತಮ್ ಮೆನನ್, ಪ್ರಿಯಾ ಆನಂದ್, ಮ್ಯಾಥ್ಯೂ ಥಾಮಸ್, ಸ್ಯಾಂಡಿ ಮಾಸ್ಟರ್ ಮುಂತಾದ ನಟರು ಸಿನಿಮಾದಲ್ಲಿ ನಟಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next