Advertisement

ವಾಟ್ಸಾಪ್‌,ಫೇಸ್‌ಬುಕ್‌, ಇನ್‌ಸ್ಟಾಗ್ರಾಂ, ಟ್ವೀಟರ್‌ ಸಹಜ ಸ್ಥಿತಿಗೆ

09:59 AM Jul 05, 2019 | Vishnu Das |

ಹೊಸದಿಲ್ಲಿ : ಬುಧವಾರ ಸಂಜೆಯಿಂದ ವಿಶ್ವಾದ್ಯಂತ ಫೇಸ್‌ಬುಕ್‌, ವಾಟ್ಸಾಪ್‌, ಇನ್‌ಸ್ಟಾಗ್ರಾಂ ಮತ್ತು ಟ್ವೀಟರ್‌ ಸೇವೆಯಲ್ಲಿ ವ್ಯತ್ಯಯ ಉಂಟಾಗಿತ್ತು. ಶುಕ್ರವಾರ ಬೆಳಗ್ಗಿನ ವೇಳೆ ಮತ್ತೆ ಸಾಮಾಜಿಕ ತಾಣದ ಟಾಪ್‌ ಸೇವೆಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿದೆ.

Advertisement

ಫೋಟೋಗಳು, ವಿಡಿಯೋಗಳು ಮತ್ತು ಸಂದೇಶಗಳನ್ನು ಕಳುಹಿಸಲು, ಡೌನ್‌ಲೋಡ್‌ ಮಾಡಿಕೊಳ್ಳಲು ಸಾಧ್ಯವಾಗದೆ ಕೋಟ್ಯಂತರ ಬಳಕೆದಾರರು ಗೊಂದಲಕ್ಕೆ ಸಿಲುಕಿದ್ದರು.

ಫೇಸ್‌ಬುಕ್‌ ಈ ಬಗ್ಗೆ ಕ್ಷಮೆ ಯಾಚಿಸಿ ಟ್ವೀಟ್‌ ಮಾಡಿದ್ದು, ಸಂದೇಶಗಳು,ಫೋಟೋಗಳು ಮತ್ತು ವಿಡಿಯೋಗಳನ್ನು ಕಳುಹಿಸಲು ಸಾಧ್ಯವಾಗದೆ ತೊಂದರೆಯಾಗಿದೆ. ಇದಕ್ಕಾಗಿ ನಾವು ಕ್ಷಮೆ ಯಾಚಿಸುತ್ತೇವೆ. ಸೇವೆಯ ಸಹಜ ಸ್ಥಿತಿಗೆ ಸಾಧ್ಯವಾದಷ್ಟು ಬೇಗ ಪ್ರಯತ್ನಿಸುತ್ತೇವೆ. ಈಗ ಎಲ್ಲವೂ ಸರಿಯಾಗಿದೆ ಎಂದು ಹೇಳಿದೆ.

ಟ್ವೀಟರ್‌ ಸಪೋರ್ಟ್‌ ಕೂಟ ಟ್ವೀಟ್‌ ಮಾಡಿ ಸೇವೆಯಲ್ಲಿನ ವ್ಯತ್ಯಯಕ್ಕೆ ಕ್ಷಮೆ ಯಾಚಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next