Advertisement

ವಿಭಿನ್ನ ಡ್ಯಾನ್ಸ್‌ ನಿಂದ ಮತ್ತೆ ಸುದ್ದಿಯಾದ ಲಡಾಖ್‌ ಸಂಸದ ಜಮ್ಯಾಂಗ್‌

09:34 AM Aug 16, 2019 | keerthan |

ಲೇಹ್:‌ ಸಂಸತ್‌ ನಲ್ಲಿ ತನ್ನ ಪ್ರಖರ ಮಾತುಗಳಿಂದ ಇತ್ತೀಚೆಗೆ ಇಂಟರ್ನೆಟ್‌ ಸೆನ್ಸೇಶನ್‌ ಆಗಿದ್ದ ಲೇಹ್‌ ಲಡಾಖ್‌ ಸಂಸದ ಜಮ್ಯಾಂಗ್‌ ಸೆರಿಂಗ್‌ ನಂಗ್ಯಾಲ್‌ ಈಗ ಮತ್ತೆ ಸುದ್ದಿಯಾಗಿದ್ದಾರೆ. ಆದರೆ ಈ ಬಾರಿ ಸುದ್ದಿಯಾಗಿರುವುದು ಭಾಷಣದಿಂದ ಅಲ್ಲ. ಬದಲಾಗಿ ಡ್ಯಾನ್ಸ್‌ ನಿಂದ!

Advertisement

ಹೌದು. ಲೇಹ್‌ ಲಡಾಖ್‌ ಬಿಜೆಪಿ ಸಂಸದ ಜಮ್ಯಾಂಗ್‌ ಸೆರಿಂಗ್‌ ನಂಗ್ಯಾಲ್‌ ಸ್ವಾತಂತ್ರ್ಯ ದಿನದ ಸಂಭ್ರಮದಲ್ಲಿ ಸಾಂಪ್ರಾದಾಯಿಕ ಕುಣಿತ ಮತ್ತು ಡ್ರಮ್ಸ್‌ ಬಾರಿಸುವ ಮೂಲಕ ಸುದ್ದಿಯಾಗಿದ್ದಾರೆ.

ನೂತನವಾಗಿ ಕೇಂದ್ರಾಡಳಿತ ಪ್ರದೇಶದ ಸ್ಥಾನಮಾನ ಪಡೆದ ನಂತರ ಮೊದಲ ಬಾರಿಗೆ ಸ್ವಾತಂತ್ರ್ಯ ದಿನ ಆಚರಿಸುತ್ತಿರುವ ಲಡಾಖ್‌ ನಲ್ಲಿ ಇಂದು ಎಂದಿನಿಂತ ಹೆಚ್ಚಿನ ಸಂಭ್ರಮ ಇತ್ತು. ಇದೇ ಸಮಯದಲ್ಲಿ ಸಾಂಪ್ರದಾಯಿಕ ಉಡುಗೆ ತೊಟ್ಟು ಹೆಜ್ಜೆ ಹಾಕಿದ ನಂಗ್ಯಾಲ್‌ ನಂತರ ವೃತ್ತಿಪತರ ಡ್ರಮ್‌ ವಾದಕನಂತೆ ಸಾಂಪ್ರಾದಾಯಿಕ ಡ್ರಮ್ಸ್‌ ಬಾರಿಸಿ ಗಮನ ಸೆಳೆದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next