Advertisement

ರೆಸಾರ್ಟ್ ರಾಜಕೀಯ: ಗುಜರಾತ್‌ ಶಾಸಕರು ಅಹ್ಮದಾ‌ಬಾದ್‌ಗೆ ವಾಪಸ್

08:38 AM Aug 07, 2017 | Team Udayavani |

ಬೆಂಗಳೂರು: ಕಳೆದ ಒಂದು ವಾರಗಳಿಂದ ಬಿಡದಿ ಈಗಲ್ಟನ್‌ ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿದ್ದ ಗುಜರಾತ್‌ನ 44 ಜನ ಶಾಸಕರು ರವಿವಾರ ತಡರಾತ್ರಿ ಬೆಂಗಳೂರು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಅಹ್ಮದಾ‌ಬಾದ್‌ಗೆ ತೆರಳಿದರು. 

Advertisement

ಈ ಸಂದರ್ಭ ವಿಮಾನ ನಿಲ್ದಾಣದಲ್ಲಿ ಬೀಗಿ ಬಂದೋಬಸ್ತ್ ಮಾಡಲಾಗಿತ್ತು. ಸಚಿವ ಡಿ.ಕೆ.ಶಿವಕುಮಾರ್‌ ಮತ್ತು ಸಂಸದ ಡಿ.ಕೆ.ಸುರೇಶ್‌ ವಿಮಾನ ನಿಲ್ದಾಣಕ್ಕೆ ತೆರಳಿ ಗುಜರಾತ್‌ ಶಾಸಕರನ್ನು ಬೀಳ್ಕೋಟ್ಟರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್‌ ಕಾಂಗ್ರೆಸ್‌ ಶಾಸಕರು ಅಹಮದ್‌ ಪಟೇಲ್‌ ಅವರಿಗೆ ಮತ ಚಲಾಯಿಸಲಿದ್ದು ಅವರ ಗೆಲುವು ಖಚಿತ ಎಂದರು.

ಆಗಸ್ಟ್ 8 ರಂದು ನಡೆಯುವ ರಾಜ್ಯಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿಯ ಆಪರೇಷನ್ ಕಮಲಕ್ಕೆ ಹೆದರಿದ್ದ ಗುಜರಾತ್ ಶಾಸಕರು ಜುಲೈ 28 ರಂದು ಬೆಂಗಳೂರಿನ ಬಿಡದಿ ಬಳಿಯ ಈಗಲ್ಟನ್ ದಿ ಗಾಲ್ಫ್ ವಿಲೇಜ್ ರೆಸಾರ್ಟಿಗೆ ಬಂದು ತಂಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next