Advertisement

ಇಎಸ್‌ಐ-ಜಯದೇವ ಆಸ್ಪತ್ರೆಗೆ ಶಾಸಕರ ಭೇಟಿ

06:05 PM Apr 28, 2020 | Team Udayavani |

ಕಲಬುರಗಿ: ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ಹಾಗೂ ಜೇವರ್ಗಿ ಶಾಸಕ ಡಾ| ಅಜಯಸಿಂಗ್‌, ಶಾಸಕರಾದ ಪ್ರಿಯಾಂಕ್‌ ಖರ್ಗೆ, ತಿಪ್ಪಣ್ಣಪ್ಪ ಕಮಕನೂರ ಸೋಮವಾರ ಸಂಜೆ ಇಲ್ಲಿನ ಇಎಸ್‌ಐ ಹಾಗೂ ಜಿಮ್ಸ್‌ ಆಸ್ಪತ್ರೆಗೆ ಭೇಟಿ ನೀಡಿ, ವೈದ್ಯರೊಂದಿಗೆ ಸಮಾಲೋಚನೆ ನಡೆಸಿದರು.

Advertisement

ಶಾಸಕರು ಆಸ್ಪತ್ರೆಗಳಿಗೆ ಭೇಟಿ ನೀಡಿ, ಕೊವಿಡ್‌-19 ಪಾಸಿಟಿವ್‌ ರೋಗಿಗಳ ವಾಸ್ತವ ಸ್ಥಿತಿಗತಿ ಕುರಿತು ಮಾಹಿತಿ ಜತೆಗೆ ಶಂಕಿತರ ವಿವರಣೆ ಪಡೆದರು. ಕೊವೀಡ್‌ ರೋಗ ಪತ್ತೆಯ ಪ್ರಯೋಗಾಲಯ ಕಾರ್ಯ ನಿರ್ವಹಣೆ ಕುರಿತಾಗಿ ಸಮಗ್ರ ವಿವರಣೆ ಪಡೆದ ಶಾಸಕರು, ಪ್ರಯೋಗಾಲಯಕ್ಕೆ ಇನ್ನೂ ಯಾವ ಅಗತ್ಯ ಸೌಲಭ್ಯ ಬೇಕಾಗಿವೆ ಎಂಬುದನ್ನು ತಿಳಿಸಿ, ಅದನ್ನು ಸರ್ಕಾರದ ಗಮನಕ್ಕೆ ತರುವುದಾಗಿ ತಿಳಿಸಿದರು.

ದೇಶದಲ್ಲೇ ಮೊದಲ ಕೊರೊನಾಗೆ ಬಲಿಯಾಗಿದ್ದು ಕಲಬುರಗಿಯಲ್ಲಿಯೇ ಆಗಿರುವುದರಿಂದ, ಜತೆಗೆ ಇಲ್ಲಿಯವರೆಗೆ ಆರು ಜನರು ಮೃತಪಟ್ಟಿರುವುದರಿಂದ ಈ ಸೋಂಕು ಹರಡುವುದನ್ನು ತಡೆಗಟ್ಟುವುದು ಎಲ್ಲರ ಮಹತ್ವದ ಜವಾಬ್ದಾರಿ ಆಗಿದೆ. ಹೀಗಾಗಿ ಇದರಲ್ಲಿ ವೈದ್ಯರ ಶ್ರಮಪ್ರಮುಖವಾಗಿ ಅಡಕವಾಗಿದೆ. ಸಾರ್ವಜನಿಕರು ಹೊರಗೆ ಬಾರದೇ ಇನ್ನು ಕೆಲವು ದಿನಗಳ ಕಾಲ ಮನೆಯಲ್ಲೇ ಇರುವ ಮುಖಾಂತರ ಲಾಕ್‌ಡೌನ್‌ಗೆ ಸ್ಪಂದಿಸಬೇಕು. ಅಗತ್ಯವಿದ್ದಲ್ಲಿ ಮಾತ್ರ ಮಾಸ್ಕ್ ಧರಿಸಿ ಹೊರ ಬರಬೇಕು. ಜತೆಗೆ ಆಗಾಗ್ಗೆ ಕೈ ತೊಳೆದುಕೊಳ್ಳಬೇಕೆಂದು ಡಾ| ಅಜಯಸಿಂಗ್‌ ಮನವಿ ಮಾಡಿದರು.

ಆಸ್ಪತ್ರೆ ಮುಖ್ಯಸ್ಥರು ಕೊವಿಡ್‌-19 ಪಾಸಿಟಿವ್‌ ರೋಗಿಗಳ ಹಾಗೂ ಪ್ರಯೋಗಾಲಯ ಕುರಿತು ವಿವರಣೆ ನೀಡಿದರು. ಡಾ| ಕಿರಣ ದೇಶಮುಖ ಇನ್ನಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next