Advertisement

ಅಭಿವೃದ್ಧಿ ಕಾಮಗಾರಿಗೆ ಶಾಸಕರಿಂದ ಚಾಲನೆ

10:56 AM Nov 24, 2019 | Suhan S |

ಹುಬ್ಬಳ್ಳಿ: ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸಿ ಸುಂದರ ಬಡಾವಣೆಗಳನ್ನಾಗಿ ರೂಪಿಸಿ ಕ್ಷೇತ್ರದ ಎಲ್ಲ ಕಾಲೋನಿಗಳನ್ನು ಮಾದರಿಯನ್ನಾಗಿಸುವ ಕನಸು ಶೀಘ್ರ ನನಸಾಗಲಿದೆ ಎಂದು ಶಾಸಕ ಪ್ರಸಾದ ಅಬ್ಬಯ್ಯ ಹೇಳಿದರು.

Advertisement

ಮಂಟೂರು ರಸ್ತೆ ಗಣೇಶ ಕಾಲೋನಿ ಹಾಗೂ ಶಾ ಕಾಲೋನಿಯಲ್ಲಿ 2 ಕೋಟಿ ವೆಚ್ಚದ ಕಾಂಕ್ರೀಟ್‌ ರಸ್ತೆ ಹಾಗೂ 76 ಲಕ್ಷ ವೆಚ್ಚದಲ್ಲಿ ಬಾಸೆಲ್‌ ಮಿಶನ್‌ ಚರ್ಚ್‌ ಬಳಿ ಒಳಚರಂಡಿ ಕೊಳವೆ ಅಳವಡಿಕೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಮಂಟೂರು ರಸ್ತೆ ಭಾಗದ ಪ್ರದೇಶಗಳೆಲ್ಲೆಡೆ ಕಾಂಕ್ರೀಟ್‌ ರಸ್ತೆ, ಗಟಾರ, ಫುಟ್‌ಪಾತ್‌, ಕುಡಿಯುವ ನೀರಿನ ವ್ಯವಸ್ಥೆ, ಯುಜಿಡಿ, ಬೀದಿದೀಪ, ಸ್ಮಶಾನ ಅಭಿವೃದ್ಧಿ ಸೇರಿದಂತೆ ಅಭಿವೃದ್ಧಿ ಕಾರ್ಯಗಳನ್ನು ಹತ್ತಾರು ಕೋಟಿ ವೆಚ್ಚದಲ್ಲಿ ಕೈಗೊಳ್ಳಲಾಗಿದೆ. ಕೆಲವೇ ವರ್ಷಗಳಲ್ಲಿ ಮಾದರಿ ಬಡಾವಣೆಯಾಗಿ ಮಂಟೂರು ರಸ್ತೆ ಭಾಗದ ಪ್ರದೇಶಗಳು ಅಭಿವೃದ್ಧಿ ಹೊಂದಲಿವೆ.

ಮಿಷನ್‌ ಕಾಂಪೌಂಡ್‌ನ‌ಲ್ಲಿ ಒಳಚರಂಡಿ ಕಾಮಗಾರಿ ತಿಂಗಳೊಳಗಾಗಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು. ಫಾಸ್ಟರ್‌ ಡಾ| ಎ. ಗಿಡಿಯಾನ್‌, ರೆವರೆಂಡ್‌ ಕ್ರಿಸ್ಟಾನಂದ ಕೆ., ಶರೀಫ ಅದವಾನಿ, ಯಲ್ಲಪ್ಪ ಮೆಹರವಾಡೆ, ಮುಖಂಡರಾದ ರಾಜಾರಾವ್‌, ಶೋಭಾ, ಗೀತಾ ಕರ್ನೂಲ್‌, ಫರೀದಾ, ದಾಕ್ಷಾಯಿಣಿ, ಜ್ಯೋತಿ ಇನ್ನಿತರರಿದ್ದರು. ಇದೇ ಸಂದರ್ಭದಲ್ಲಿ ಶಾಸಕರು ಶಾ ಕಾಲೋನಿ, ಗುಂಜಾಳ ಪ್ಲಾಟ್‌ನಲ್ಲಿ ಬೋರ್‌ವೆಲ್‌ ಕೊರೆಯುವ ಕಾಮಗಾರಿಗೆ ಚಾಲನೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next