ಬೆಂಗಳೂರು: ಕನ್ನಡ ಸೇರಿದಂತೆ ಹಲವು ಭಾಷೆಗಳ ಚಿತ್ರಗಳಿಗೆ ಸಂಗೀತ ನೀಡಿದ್ದ ಹಿರಿಯ ಸಂಗೀತ ನಿರ್ದೇಶಕ ರಾಜನ್ (87) ರವಿವಾರ ರಾತ್ರಿ ನಿಧನರಾದರು.
ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ರಾಜನ್ ಅವರು ರವಿವಾರ ರಾತ್ರಿ 10.30ರ ಸುಮಾರಿಗೆ ತಮ್ಮ ನಿವಾಸದಲ್ಲಿ ನಿಧನರಾದರು.
ಮೂಲತಃ ಮೈಸೂರಿನವರಾದ ರಾಜನ್ ಅವರು ಬೆಂಗಳೂರಿನಲ್ಲಿ ನೆಲೆಸಿದ್ದರು. ಸಹೋದರ ನಾಗೇಂದ್ರ ಅವರ ಜೊತೆ ಸೇರಿ ಚಲನಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡುತ್ತಿದ್ದರು. ಕನ್ನಡ ಚಿತ್ರರಂಗದಲ್ಲಿ ರಾಜನ್ ನಾಗೇಂದ್ರ ಜೋಡಿಯಾಗಿ ಪ್ರಸಿದ್ಧರಾಗಿದ್ದರು. ಇವರು1950ರಿಂದ 1990ರ ವರೆಗೆ ಕನ್ನಡ ಚಿತ್ರರಂಗ ಎಂದೆಂದಿಗೂ ಮರೆಯಲಾರದ ಯಶಸ್ವಿ ಹಾಡುಗಳನ್ನು ನೀಡಿದ್ದಾರೆ.
ಇದನ್ನೂ ಓದಿ:ಸಿದ್ದು ವರ್ಸಸ್ ಎಚ್‌ಡಿಕೆ: ಜಾತಿಯನ್ನು ಯಾರೂ ಗುತ್ತಿಗೆ ತೆಗೆದುಕೊಂಡಿಲ್ಲ- ಸಿದ್ದು
ಕನ್ನಡ, ತೆಲುಗು, ತುಳು ಸಹಿತ ವಿವಿಧ ಭಾಷೆಗಳಲ್ಲಿ 375ಕ್ಕೂ ಹೆಚ್ಚು ಸಿನೆಮಾಗಳಿಗೆ ಸಂಗೀತ ನಿರ್ದೇಶನ ಮಾಡಿದ್ದು, ಇದರಲ್ಲಿ 200ಕ್ಕೂ ಹೆಚ್ಚು ಕನ್ನಡ ಚಿತ್ರಗಳಿವೆ. ಮೆಲೋಡಿ ಹಾಡುಗಳಿಗೆ ಹೆಚ್ಚು ಪ್ರಸಿದ್ಧರಾಗಿದ್ದ ರಾಜನ್, ಹಲವು ಹಿಟ್ ಹಾಡುಗಳನ್ನು ನೀಡಿದ್ದಾರೆ. ಅತಿ ಹೆಚ್ಚು ವರ್ಷ ಚಿತ್ರರಂಗದಲ್ಲಿ ಸೇವೆ ಸಲ್ಲಿಸಿದ ಕೀರ್ತಿ ಕೂಡ ಅವರದ್ದು.
ಆಕಾಶದಿಂದ ಧರೆಗಿಳಿದ ರಂಭೆ, ಆಕಾಶವೇ ಬೀಳಲಿ ಮೇಲೆ, ಎಂದೆಂದೂ ನಿನ್ನನು ಮರೆತು, ತರೀಕೆರೆ ಏರಿ ಮ್ಯಾಲೆ… ಹೀಗೆಅನೇಕ ಹಿಟ್ ಹಾಡುಗಳನ್ನು ಕೊಟ್ಟಿದ್ದಾರೆ,