Advertisement

ಶ್ರೇಷ್ಠ ಆಲ್‌ರೌಂಡರ್‌ ಮೈಕ್‌ ಪ್ರಾಕ್ಟರ್‌ ನಿಧನ

11:32 PM Feb 18, 2024 | Team Udayavani |

ಜೊಹಾನ್ಸ್‌ಬರ್ಗ್‌ : ದಕ್ಷಿಣ ಆಫ್ರಿಕಾ ಕಂಡ ಶ್ರೇಷ್ಠ ಆಲ್‌ರೌಂಡರ್‌ ಮೈಕ್‌ ಪ್ರಾಕ್ಟರ್‌ (77) ರವಿವಾರ ನಿಧನ ಹೊಂದಿದರು.

Advertisement

ವರ್ಣ ತಾರತಮ್ಯ ಅನುಸರಿಸುತ್ತಿದ್ದ ಕಾರಣ ದಕ್ಷಿಣ ಆಫ್ರಿಕಾಕ್ಕೆ ಕ್ರಿಕೆಟ್‌ ಬಹಿಷ್ಕಾರ ವಿಧಿಸಿದ್ದರಿಂದ ಪ್ರಾಕ್ಟರ್‌ ಆಟ ಏಳೇ ಟೆಸ್ಟ್‌ಗಳಿಗೆ ಸೀಮಿತಗೊಂಡಿತು (1967-1970). 226 ರನ್‌ ಮತ್ತು 41 ವಿಕೆಟ್‌ ಇವರ ಸಾಧನೆ.

ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 401 ಪಂದ್ಯಗಳನ್ನಾಡಿದ್ದ ಪ್ರಾಕ್ಟರ್‌, 21,936 ರನ್‌, 48 ಶತಕ ಹಾಗೂ 1,417 ವಿಕೆಟ್‌ಗಳ ಸಾಧನೆಯೊಂದಿಗೆ ಮಿಂಚಿದ್ದರು.

ನಿವೃತ್ತಿ ಬಳಿಕ ಕೋಚ್‌, ಆಡಳಿತಗಾರ, ಆಯ್ಕೆಗಾರ, ವೀಕ್ಷಕ ವಿವರಣಕಾರ, ಎಲೈಟ್‌ ಐಸಿಸಿ ಮ್ಯಾಚ್‌ ರೆಫ್ರಿ, ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಕ್ರಿಕೆಟ್‌ ತರಬೇತಿ ನೀಡುವ ಮೂಲಕ ಕ್ರಿಕೆಟ್‌ನಲ್ಲಿ ಸಕ್ರಿಯರಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next