Advertisement
ನಗರದ ಹೊರ ವಲಯದ ಕೈಐಎಡಿಬಿ ವಲಯದ ಟೈಟಾನ್ ಕಂಪನಿ ಆವರಣದಲ್ಲಿ ಬುಧವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ ಹಾಗೂ ಕಾರ್ಮಿಕ ಇಲಾಖೆ ಮತ್ತು ಟೈಟಾನ್ ಕಂಪನಿ ಲಿಮಿಟೆಡ್ ಐವೇರ್ ಡಿವಿಷನ್ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಅಂತಾರಾಷ್ಟ್ರೀಯ ಕಾರ್ಮಿಕ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
Related Articles
Advertisement
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಎಚ್.ದೇವರಾಜ್ ಮಾತನಾಡಿ, ರೈತರಷ್ಟೇ ಕಾರ್ಮಿಕರು ಕೂಡ ದೇಶದ ಬೆನ್ನಲುಬಾಗಿದ್ದಾರೆ. ಆದರೆ ನಾವು ಎಲ್ಲಿ ಕೂಡ ಕಾರ್ಮಿಕರು ದೇಶದ ಬೆನ್ನಲುಬು ಎನ್ನುವುದಿಲ್ಲ. ದೇಶದ ಪ್ರಗತಿಗೆ ಭುನಾದಿಯಾಗಿರುವ ಕಾರ್ಮಿಕರನ್ನು ಸಮಾಜ ಕಡೆಗಣಿಸಬಾರದು ಎಂದರು.
ಅಭದ್ರತೆಯಲ್ಲಿ ಜೀವನ: ನಾಗರಿಕ ಸಮಾಜದ ಪ್ರಗತಿಗೆ ಕಾರಣವಾಗಿರುವ ಕಾರ್ಮಿಕರ ಬದುಕು ಕೂಡ ಹಸನಾಗಬೇಕಿದೆ. ಕಾರ್ಮಿಕರು ಯಾವುದೇ ಮೋಸ, ವಂಚನೆ, ಅನ್ಯಾಯ, ಅಕ್ರಮಗಳಲ್ಲಿ ತೊಡಗಿಸಿಕೊಳ್ಳದೇ ಇತರರಿಗೆ ಮಾದರಿಯಾಗಿ ಸ್ವಂತ ದುಡಿಮೆಯಲ್ಲಿ ಸ್ವಾವಲಂಬಿಗಳಾಗಿ ಬದುಕುತ್ತಿದ್ದಾರೆ. ಕಾರ್ಮಿಕರ ಶ್ರಮ, ದುಡಿಮೆ ಇತರರಿಗೆ ಮಾದರಿಯಾಬೇಕಿದೆ ಎಂದರು.
ಇಂದಿಗೂ ದೇಶದ ಕಾರ್ಮಿಕರ ಸ್ಥಿತಿ ಬದಲಾಗಿಲ್ಲ. ಲಕ್ಷಾಂತರ ಕಾರ್ಮಿಕ ಕುಟುಂಬಗಳ ಅಭದ್ರತೆಯಲ್ಲಿ ಜೀವನ ನಡೆಸುತ್ತಿವೆ. ಕಾನೂನು ಅರಿವು ಪಡೆದು ಸರ್ಕಾರಗಳು ರೂಪಿಸಿರುವ ಕಾರ್ಮಿಕರ ಕಲ್ಯಾಣ ಕಾರ್ಯಕ್ರಮಗಳನ್ನು ಸದ್ಬಳಕೆ ಮಾಡಿಕೊಂಡು ಸಮಾಜದ ಮುಖ್ಯವಾಹಿನಿಗೆ ಬರಬೇಕೆಂದರು.
ಜಿಲ್ಲಾ ಕಾರ್ಮಿಕ ಇಲಾಖೆ ನಿರೀಕ್ಷಕ ಎಚ್.ಎಂ.ಸೋಮಶೇಖರ್ ಮಾತನಾಡಿ, ಕಾರ್ಮಿಕರ ಕಾನೂನುಗಳು ಇರುವುದು ಯಾರ ಪರವಾಗಿಯು ಅಲ್ಲ. ಮಾಲೀಕರ ಹಾಗೂ ಕಾರ್ಮಿಕರ ನಡುವಿನ ಸಂಬಂಧವನ್ನು ಉತ್ತಮ ಪಡಿಸಲಿಕ್ಕೆ ಕಾನೂನುಗಳು ಇವೆ. ಚಿಕ್ಕಬಳ್ಳಾಪುರ ತಾಲೂಕಿನಲ್ಲಿ ಸುಮಾರು 10 ರಿಂದ 15 ಕೈಗಾರಿಕೆಗಳಿದ್ದು, 4 ರಿಂದ 5 ಸಾವಿರ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ ಎಂದರು.
ವಕೀಲರಾದ ಶ್ರೀನಾಥ್, ಟೈಟಾನ್ ಕಂಪನಿ ಮಾನವ ಸಂಪನ್ಮೂಲ ಅಧಿಕಾರಿ ರಾಜಶೇಖರ್ ಸೇರಿದಂತೆ ಟೈಟಾನ್ ಕಂಪನಿಯ ಕಾರ್ಮಿಕರು, ಜಿಲ್ಲಾ ನ್ಯಾಯಾಲಯದ ವಕೀಲರು, ಕಾರ್ಮಿಕ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ಕಾರ್ಮಿಕರನ್ನು ನಿರ್ಲಕ್ಷಿಸುವ ಯಾವ ಸಮಾಜ ಕೂಡ ಅಭಿವೃದ್ಧಿ ಕಾಣಲು ಸಾಧ್ಯವಿಲ್ಲ. ಜಗತ್ತಿನ ಮುಂದುವರಿದ ದೇಶಗಳು ಎಲ್ಲಾ ರಂಗಗಳಲ್ಲಿ ಇಂದು ಪ್ರಗತಿ ಕಂಡಿದ್ದರೆ ಅದಕ್ಕೆ ಕಾರ್ಮಿಕರ ಶ್ರಮವೇ ಹೊರತು ಬೇರೆ ಏನು ಅಲ್ಲ. ಸಮಾಜವು ಕಾರ್ಮಿಕರನ್ನು ಗೌರಿವಿಸಬೇಕು. ಕಾರ್ಮಿಕರನ್ನು ಮುಖ್ಯವಾಹಿನಿಗೆ ತರುವ ಕೆಲಸವನ್ನು ಸರ್ಕಾರಗಳು, ಸಂಘ ಸಂಸ್ಥೆಗಳು ಜೊತೆಯಾಗಿ ಮಾಡಬೇಕು. -ಎಸ್.ಎಚ್.ಕೋರಡ್ಡಿ, ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಧೀಶರು