Advertisement
35 ವರ್ಷಗಳ ಬೇಡಿಕೆ
Related Articles
Advertisement
ಪಾರ್ಕಿಂಗ್
ನಗರದೊಳಗೆ ವಾಹನ ದಟ್ಟಣೆ ಹೆಚ್ಚಿದ್ದು ಈಗಾಗಲೇ ಪೊಲೀಸರು ಜಾಗಗಳನ್ನು ಗುರುತಿಸಿ ಪುರಸಭೆಗೆ ನೀಡಿದ್ದು ಪುರಸಭೆಯಿಂದ ಮೇಲ್ನೋಟಕ್ಕೆ ಪರಿಶೀಲಿಸಲಾಗಿದೆ. ಅಲ್ಲಿ ಅಧಿಕೃತ ಪಾರ್ಕಿಂಗ್‌ಗೆ ನೋಟಿಫಿಕೇಶನ್ ಗೆ ಕಳುಹಿಸಲು ನಿರ್ಧರಿಸಲಾಯಿತು. ತಮ್ಮ ವಾರ್ಡ್ ನಲ್ಲೂ ಪಾರ್ಕಿಂಗ್ ಜಾಗ, ಚರಂಡಿ ಸರಿಪಡಿಸಬೇಕು ಎಂದು ಪ್ರಭಾವತಿ ಶೆಟ್ಟಿ ಹೇಳಿದರು.
ಬಸ್ ಅವಶೇಷ
ಟಿಟಿ ರಸ್ತೆಯಲ್ಲಿ ಖಾಸಗಿ ಬಸ್ಸೊಂದು ಅನೇಕ ವರ್ಷಗಳಿಂದ ಇದ್ದು ಅನೈತಿಕ ಚಟುವಟಿಕೆಗೂ ಆಗರವಾಗಿತ್ತು. ತೆರವಿಗೆ ಸಂಬಂಧಿಸಿದಂತೆ ಕ್ರಮ ಆಗಿಲ್ಲ ಎಂದು ಅಧ್ಯಕ್ಷೆ ಹೇಳಿದರು. ಪ್ರಕರಣ ನ್ಯಾಯಾಲಯದಲ್ಲಿ ಇದೆ ಎಂದು ಸಂಚಾರ ಠಾಣೆ ಎಸ್‌ಐ ಸುಧಾಪ್ರಭು ಹೇಳಿದರು. ಸ್ವತ್ತು ಯಾರ ವಶದಲ್ಲಿ ಇರಬೇಕೆಂದು ನ್ಯಾಯಾಲಯ ಹೇಳಿದೆಯೋ ಅವರು ಅದನ್ನು ಸರಕಾರಿ ಜಾಗದಲ್ಲಿ ಇಟ್ಟರೆ ದಂಡ ಪಾವತಿಸಬೇಕಾಗುತ್ತದೆ. ಪ್ರಕರಣ ಎದುರಿಸಬೇಕಾಗುತ್ತದೆ. ಜಿಲ್ಲಾಧಿಕಾರಿಗಳು ತೆರವಿಗೆ ಆದೇಶಿಸಿದ್ದರೂ ಸಂಚಾರ ಠಾಣೆ ಕಾರ್ಯೋ ನ್ಮುಖವಾಗಿಲ್ಲ ಎಂದು ಮುಖ್ಯಾಧಿಕಾರಿ ಹೇಳಿದರು.
ಒಮ್ಮತದ ನಿರ್ಣಯ
ಹೆದ್ದಾರಿ ಕುರಿತಾದ ಎಲ್ಲ ಬೇಡಿಕೆ ಈಡೇರಿದ ಬಳಿಕವೇ ಸರ್ವಿಸ್ ರಸ್ತೆ ಏಕಮುಖವಾಗಿಸುವ ಕುರಿತು ಜನಾಭಿಪ್ರಾಯ ಪಡೆದು ತೀರ್ಮಾನಿಸಲು ಸರ್ವಸದಸ್ಯರೂ ಒಮ್ಮತದಿಂದ ನಿರ್ಣಯಿಸಿದರು. ಸರ್ವಿಸ್ ರಸ್ತೆ ಏಕಮುಖವಾಗಿಸಿದರೆ ತೊಂದರೆ ಆಗುತ್ತದೆ ಎಂದಾಗ ಸರ್ವಿಸ್ ರಸ್ತೆ ಅಗಲ ಕಡಿಮೆ ಇದೆ ಎಂದು ಡಿವೈಎಸ್‌ಪಿ ಹೇಳಿದರು.
ಎಸಿ ವಿರುದ್ಧ ಅಸಮಾಧಾನ
ನವಯುಗ ಸಂಸ್ಥೆ ವಿರುದ್ಧ ಪ್ರಕರಣ ದಾಖಲಿಸಲು ಪುರಸಭೆಯಲ್ಲಿ ನಿರ್ಣಯಿಸಲಾಗಿತ್ತು. ಎಸಿಯವರಿಗೆ ದೂರು ನೀಡಿದ್ದರೂ ಪ್ರಕರಣ ದಾಖಲಿಸಲು ವಿಳಂಬ ಮಾಡಿದ್ದಾರೆ. ಮರು ದೂರು ನೀಡಿದಾಗಲೂ ಅವಸರ ಮಾಡಬೇಡಿ ಎಂದಿದ್ದಾರೆ. ಆದ್ದರಿಂದ ಮುಂದಿನ ಸಭೆಗೆ ಎಸಿಯವರನ್ನು ಕರೆಸಬೇಕು. ಡಿಸಿಯವರಿಗೆ ದೂರು ನೀಡಬೇಕು. ನವಯುಗದವರನ್ನು ಎಸಿಯವರು ರಕ್ಷಿಸುವ ಕಾರಣ ಗೊತ್ತಾಗಬೇಕು ಎಂದು ಸದಸ್ಯರು ಹೇಳಿದರು.
ಏಕಮುಖ ಸಂಚಾರ
ನಗರದ ಸರ್ವಿಸ್ ರಸ್ತೆಗಳನ್ನು ಏಕಮುಖ ಸಂಚಾರವನ್ನಾಗಿಸುವ ಕುರಿತು ಚರ್ಚೆ ನಡೆಯಿತು. ನವಯುಗ ಸಂಸ್ಥೆಯವರು ಹೆದ್ದಾರಿ ಕಾಮಗಾರಿ ವಿಳಂಬ ಮಾಡಿದ್ದಷ್ಟೇ ಅಲ್ಲ ಕೇಂದ್ರ ಸಚಿವರು, ಸಂಸದರು, ಶಾಸಕರು, ಜನಪ್ರತಿನಿಧಿಗಳು, ಪುರಸಭೆ, ಅಧಿಕಾರಿಗಳು ಯಾರದ್ದೇ ಮಾತಿಗೆ ಬೆಲೆ ನೀಡಿಲ್ಲ. ಬೀದಿದೀಪ ಅಳವಡಿಸಿಲ್ಲ, ಸಾವು ನೋವು ಸಂಭವಿಸುತ್ತಿದೆ. ಚರಂಡಿ ವ್ಯವಸ್ಥೆ ಸರಿಪಡಿಸದೇ ರಸ್ತೆಯೇ ಹೊಳೆಯಾಗುತ್ತದೆ. ಫ್ಲೈಓವರ್ ಮೇಲಿನ ನೀರು ಸರ್ವಿಸ್ ರಸ್ತೆಗೆ ಬೀಳುತ್ತದೆ. ಹೆದ್ದಾರಿಯಿಂದ ಸರ್ವಿಸ್ ರಸ್ತೆಗೆ ಇನ್ನೂ ಪ್ರವೇಶ ನೀಡಿಲ್ಲ. ಹೈಮಾಸ್ಟ್ ವಿದ್ಯುತ್ ಬಿಲ್ ಪುರಸಭೆಯಿಂದ ಪಾವತಿಸಲಾಗುತ್ತಿದೆ. ಶಾಸ್ತ್ರಿ ಸರ್ಕಲ್ ಬಳಿ ಕಣ್ಣೊರೆಸುವ ತಂತ್ರದಂತೆ ಡಾಮರು ತೇಪೆ ಹಾಕಲಾಗಿದೆ ಎಂದು ಉಪಾಧ್ಯಕ್ಷ ಸಂದೀಪ್ ಖಾರ್ವಿ, ಸದಸ್ಯರಾದ ಮೋಹನದಾಸ ಶೆಣೈ, ರತ್ನಾಕರ್, ಪ್ರಭಾಕರ್, ಪ್ರಕಾಶ್ ಖಾರ್ವಿ, ರಾಘವೇಂದ್ರ ಖಾರ್ವಿ, ಚಂದ್ರಶೇಖರ ಖಾರ್ವಿ, ಗಿರೀಶ್ ಜಿ.ಕೆ., ಶೇಖರ ಪೂಜಾರಿ, ರೋಹಿಣಿ ಉದಯ್, ಅಶ್ವಿನಿ ಪ್ರದೀಪ್, ಶ್ವೇತಾ, ಶ್ರೀಧರ್ ಶೇರೆಗಾರ್ ಹೇಳಿದರು.