Advertisement

ಕಾನೂನು ಅರಿವಿನಿಂದ ನೆಮ್ಮದಿ

02:41 PM Dec 31, 2017 | Team Udayavani |

ಸುರಪುರ: ಕಾನೂನಿನ ತಿಳುವಳಿಕೆ ಕೊರತೆಯಿಂದ ಅಪರಾಧಗಳು ನಡೆಯುತ್ತಿವೆ. ಆದ್ದರಿಂದ ಪ್ರತಿಯೊಬ್ಬ ನಾಗರಿಕರು ಕಾನೂನಿನ ಅರಿವು ಪಡೆದುಕೊಳ್ಳುವುದು ಅತ್ಯವಶ್ಯಕವಾಗಿದೆ ಎಂದು ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷ ಹಿರಿಯ ಸಿವಿಲ್‌ ನ್ಯಾಯಾಧೀಶ ಡಿ. ನಾಗರಾಜೇಗೌಡ ಹೇಳಿದರು.

Advertisement

ಇಲ್ಲಿಯ ಜೆಎಂಎಫ್‌ಸಿ ಕೋರ್ಟ್‌ನ ಸಭಾಂಗಣದಲ್ಲಿ ಶನಿವಾರ ತಾಲೂಕು ಕಾನೂನು ಸೇವಾ ಸಮಿತಿ ಮತ್ತು ನ್ಯಾಯವಾದಿಗಳ ಸಂಘದ ಆಶ್ರಯದಲ್ಲಿ ಜರುಗಿದ ಕಾನೂನು ಅರಿವು-ನೆರವು ಕಾರ್ಯಕ್ರಮದಡಿ ಹಮ್ಮಿಕೊಂಡಿದ್ದ ಪೊಲೀಸ್‌ ದೂರು ಪ್ರಾಧಿಕಾರ ಕುರಿತಾದ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹುಟ್ಟು ಮತ್ತು ಸಾವುಗಳ ನಡುವೆ ಪ್ರತಿಯೊಬ್ಬರೂ ಕಾನೂನನ್ನು ಅರಿತು ಗೌರವಿಸಿದಾಗ ಮಾತ್ರ ಸಮಸ್ಯೆಗಳಿಗೆ
ಪರಿಹಾರ ದೊರೆಯುತ್ತದೆ. ಸಮಾಜದ ಒಳಗೆ ಬದುಕುವ ನಾವುಗಳು ಕಾನೂನಿನ ಬಗ್ಗೆ ತಿಳಿವಳಿಕೆ ಕಂಡುಕೊಳ್ಳಬೇಕು ಎಂಬ ಉದ್ದೇಶದಿಂದ ಇಂದು ತಾಲೂಕು ಕಾನೂನು ಪ್ರಾಧಿಕಾರ ಉಚಿತ ಸಲಹೆ, ತಿಳಿವಳಿಕೆ ನೀಡುತ್ತದೆ. ಅದಕ್ಕಾಗಿ ಪ್ರತಿಯೊಬ್ಬರು ಇದರ ಲಾಭವನ್ನು ಪಡೆದುಕೊಳ್ಳಬೇಕು ಎಂದರು.

ವಕೀಲರಾದ ಚನ್ನಪ್ಪ ಹೂಗಾರ, ವಿಶ್ವಾಮಿತ್ರ ಕಟ್ಟಿಮನಿ ಉಪನ್ಯಾಸ ನೀಡಿದರು. ವಕೀಲರ ಸಂಘದ ಅಧ್ಯಕ್ಷ ಎಸ್‌. ಸಿದ್ರಾಮಪ್ಪ ಅಧ್ಯಕ್ಷತೆ ವಹಿಸಿದ್ದರು. ನ್ಯಾಯಾಧೀಶ ಅಮರನಾಥ ಬಿ.ಎನ್‌, ಸರಕಾರಿ ಸಹಾಯಕ ಅಭಿಯೋಜಕ
ಮಹಾಂತೇಶ ಮಸಳೆ, ವಕೀಲರಾದ ಯಂಕಾರಡ್ಡಿ ಹವಾಲ್ದಾರ್‌, ನಂದಣ್ಣ ಬಾಕ್ಲಿ ವೇದಿಕೆಯಲ್ಲಿದ್ದರು.

ಕೋರ್ಟ್‌ನ ಶಿರಸ್ತೇದಾರ್‌ ಬಿ. ಗೌಡ ಪ್ರಾರ್ಥಿಸಿದರು. ನಂದನಗೌಡ ಪಾಟೀಲ್‌ ನಿರೂಪಿಸಿದರು. ಮಂಜುನಾಥ ಹುದ್ದಾರ್‌ ವಂದಿಸಿದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next