Advertisement

ಕಾನೂನು ಅರಿವು ಎಲ್ಲರಿಗೂ ಅಗತ್ಯ: ಹೊಸಗೌಡರ್‌

04:06 PM Jul 10, 2018 | Team Udayavani |

ಹೊನ್ನಾಳಿ: ನಿತ್ಯ ಜೀವನಕ್ಕೆ ಬೇಕಾದ ಕಾನೂನು ತಿಳಿವಳಿಕೆ ಎಲ್ಲರಿಗೂ ಅಗತ್ಯ. ಕಾನೂನು ಅರಿವು-ನೆರವು ಮತ್ತು ಲೋಕ ಅದಾಲತ್‌ ಕಾರ್ಯಕ್ರಮ ಕಾನೂನು ಸಾಕ್ಷರತಾ ರಥಯಾತ್ರೆ ಅಂಗವಾಗಿ ನಡೆಯುತ್ತಿದೆ ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಎಸ್‌.ಎಚ್‌. ಹೊಸಗೌಡರ್‌ ಹೇಳಿದರು.

Advertisement

ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘದ ಸಂಯುಕ್ತಾಶ್ರಯದಲ್ಲಿ ಕಾನೂನು ಸಾಕ್ಷರತಾ ರಥಯಾತ್ರೆ ಅಂಗವಾಗಿ ಸೋಮವಾರ ಗುರುಭವನದಲ್ಲಿ ಹಮ್ಮಿಕೊಂಡಿದ್ದ ಕಾನೂನು ಅರಿವು-ನೆರವು ಮತ್ತು ಲೋಕ
ಅದಾಲತ್‌ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ತಾಯಿ ಗರ್ಭದಿಂದ ಸಾಯುವವರೆಗೂ ಕಾನೂನುಗಳ ಅವಶ್ಯಕತೆ ಇದ್ದು, ಕಾನೂನು-ಕಾಯ್ದೆಗಳ ಬಗ್ಗೆ ಅಸಡ್ಡೆ
ತೋರಬಾರದು ಎಂದು ಹೇಳಿದರು. ಕಾನೂನಿನ ಅರಿವು ಇರುವವರು ಶೋಷಣೆಯಿಂದ ತಪ್ಪಿಸಿಕೊಳ್ಳುತ್ತಾರೆ.
ಕಾನೂನು ತಿಳಿಯದವರು ಸದಾ ಶೋಷಣೆಗೆ ಒಳಪಡುತ್ತಾರೆ. ಮಹಿಳೆಯರು ಸದಾ ಶೋಷಣೆಗೆ ಒಳಪಡುವ ವರ್ಗವಾಗಿದೆ. ಇದು ಸಲ್ಲದು ಎಂದು ಹೇಳಿದರು.

ಸರ್ವರಿಗೂ ಸಮಬಾಳು, ಸಮಪಾಲು ಎನ್ನುವಂತೆ ಕಾನೂನುಗಳು ರಚನೆಯಾಗಿವೆ. ಕಾನೂನು ಪ್ರಕಾರ ಲಂಚ ಕೊಡುವುದು ಹಾಗೂ ಲಂಚ ತೆಗೆದುಕೊಳ್ಳುವುದು ಎರಡೂ ತಪ್ಪು. ಆದರೆ ಈ ಎರಡೂ ಅಂಶಗಳು ಸಮಾಜದಲ್ಲಿ
ಗೊತ್ತಿಧ್ದೋ ಗೊತ್ತಿಲ್ಲದೆಯೋ ನಡೆಯುತ್ತಿವೆ. ಸಾಮಾನ್ಯ ಜನರು ಎಚ್ಚೆತ್ತುಗೊಳ್ಳಬೇಕು ಎಂದು ಹೇಳಿದರು.
 
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆಂಗಬಾಲಯ್ಯ ಮಾತನಾಡಿ, ಸಂವಿಧಾನಿಕ ಹಕ್ಕುಗಳು ದೇಶದ ಕಟ್ಟಕಡೆಯ ವ್ಯಕ್ತಿಗೂ ಸಿಗಬೇಕು. ಹಕ್ಕುಗಳು ಸಿಗಲು ಕಾನೂನಿನ ಅರಿವು ಬೇಕು. ಇದಕ್ಕಾಗಿ
ಪೋಷಕರು ಮಕ್ಕಳನ್ನು ಶಿಕ್ಷಣವಂತರನ್ನಾಗಿ ಮಾಡಬೇಕು ಎಂದು ಹೇಳಿದರು. 

ವರದಕ್ಷಿಣೆ ಪದ್ಧತಿ, ಹೆಣ್ಣುಮಕ್ಕಳ ಶೋಷಣೆ ನಿಲ್ಲಬೇಕು ಎಂದು ವೇದಿಕೆಗಳ ಮೇಲೆ ಹೇಳುವುದು ಬಹಳ ಸುಲಭ. ಆದರೆ ಆಚರಣೆ ಕಷ್ಟದ ಕೆಲಸ. ಅನೇಕ ಕುಟುಂಬದಲ್ಲಿ ಇಂದಿಗೂ ಗಂಡು ಮಕ್ಕಳು ಹಾಗೂ ಹೆಣ್ಣು ಮಕ್ಕಳ ಮಧ್ಯೆ ತಾರತಮ್ಯ ನಡೆಯುತ್ತದೆ. ಇದು ಮೊದಲು ನಿಲ್ಲಬೇಕು ಎಂದು ಹೇಳಿದರು. ಮಹಿಳೆ ಮತ್ತು ಮಕ್ಕಳ ಹಕ್ಕುಗಳು ಕುರಿತು ನ್ಯಾಯವಾದಿ ಎಸ್‌. ಎಸ್‌. ಬಳ್ಳೂರು ಹಾಗೂ ದೇಶ ಕಟ್ಟುವಲ್ಲಿ ಯುವಕರ ಪಾತ್ರ ಕುರಿತು ನ್ಯಾಯವಾದಿ ಎಸ್‌. ಎನ್‌.ಪ್ರಕಾಶ್‌ ಉಪನ್ಯಾಸ ನೀಡಿದರು. ವಕೀಲರ ಸಂಘದ ತಾಲೂಕು ಅಧ್ಯಕ್ಷ ಬಿ.ಉಮೇಶ್‌ ಅಧ್ಯಕ್ಷತೆ  ವಹಿಸಿದ್ದರು.

Advertisement

ಹಿರಿಯ ಸಿವಿಲ್‌ ನ್ಯಾಯಾಧೀಶ ವೈ. ಕೆ. ಬೇನಾಳ್‌, ಹೆಚ್ಚುವರಿ ಸಿವಿಲ್‌ ನ್ಯಾಯಾಧೀಶ ಎಂ. ವಿಜಯ್‌, ಸಹಾಯಕ ಸರ್ಕಾರಿ ಅಭಿಯೋಜಕರಾದ ಸುಮುಧ, ಮಂಜುನಾಥ್‌, ತಹಶೀಲ್ದಾರ್‌ ಡಾ| ನಾಗಮಣಿ, ಬಿಇಒ ಜಿ.ಇ. ರಾಜೀವ್‌, ವಕೀಲರಾದ ಎಚ್‌.ಎಂ. ಶ್ರೀನಿವಾಸಮೂರ್ತಿ, ಕೆ.ಬಿ. ಯತಿರಾಜ್‌, ಶಿವಯೋಗಾರಾಧ್ಯ, ಸಿಡಿಪಿಒ ಶಿವಲಿಂಗಪ್ಪ, ಸಿಪಿಐ ಜೆ.ರಮೇಶ್‌ ಉಪಸ್ಥಿತರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next