Advertisement
ಕೇಂದ್ರ ಸರಕಾರದ ಮೋಟಾರು ವಾಹನ ಕಾಯ್ದೆಗೆ ಸೆಕ್ಷನ್ 200ರಡಿ ತಿದ್ದುಪಡಿ ತಂದಿದೆ. ಇದರಲ್ಲಿ ಒಟ್ಟಾರೆ 24 ನಿಯಮ ಉಲ್ಲಂಘನೆ ಪ್ರಕರಣಗಳಿಗೆ ದಂಡದ ಮೊತ್ತವನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಳ ಮಾಡಲಾಗಿತ್ತು. ಇದನ್ನು ಯಥಾವತ್ತಾಗಿ ಜಾರಿಗೊಳಿಸಿದ ರಾಜ್ಯ ಸರಕಾರ, ಸೆ. 3ರಂದು ಅಧಿಸೂಚನೆ ಹೊರಡಿಸಿತ್ತು. ಅನಂತರದಲ್ಲಿ ವಾಹನ ಸವಾರರಿಂದ ತೀವ್ರ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ದಂಡದ ಪ್ರಮಾಣ ಇಳಿಸಲು ಮುಂದಾಗಿತ್ತು. ಆದರೆ ತಿದ್ದುಪಡಿ ನಿಯಮದಲ್ಲಿ ಐದು ಪ್ರಕರಣಗಳಿಗೆ ಮಾತ್ರ ದಂಡದ ಮೊತ್ತ ಪರಿಷ್ಕರಿಸುವ ಅಧಿಕಾರ ಇದೆ ಎಂದು ಕಾನೂನು ಇಲಾಖೆ ಅಭಿಪ್ರಾಯಪಟ್ಟಿದೆ.ಗುಜರಾತ್‌ನಲ್ಲಿ 11 ಪ್ರಕರಣಗಳ ದಂಡ ಕಡಿಮೆ ಮಾಡಿದ್ದು, ಆ ಮಾದರಿ ಅನುಸರಿಸಬೇಕಾದರೆ ಕರ್ನಾಟಕ ಇನ್ನೂ ಕನಿಷ್ಠ 6 ಪ್ರಕರಣಗಳಲ್ಲಿ ಕೇಂದ್ರದಿಂದ ಅನುಮತಿ ಪಡೆಯಬೇಕಾಗುತ್ತದೆ ಎಂದು ಕಾನೂನು ಇಲಾಖೆಯು ಸಾರಿಗೆ ಇಲಾಖೆಗೆ ತಿಳಿಸಿದೆ.
ಕಾನೂನು ಇಲಾಖೆ ಪ್ರಕಾರ ಸದ್ಯಕ್ಕೆ ಅವಕಾಶ ಇರುವ ಐದು ನಿಯಮಗಳ ಉಲ್ಲಂಘನೆಯ ದಂಡದ ಪ್ರಮಾಣವನ್ನು ಕಡಿಮೆ ಮಾಡಲಾಗುವುದು. ಉಳಿದ ಉಲ್ಲಂಘನೆಗಳಿಗೆ ಇರುವ ದಂಡದ ಪ್ರಮಾಣ ತಾತ್ಕಾಲಿಕವಾಗಿ ಮುಂದುವರಿಸಲಾಗುವುದು ಎಂದು ಹೆಸರು ಹೇಳಲಿಚ್ಛಿಸದ ಸಾರಿಗೆ ಇಲಾಖೆ ಉನ್ನತ ಅಧಿಕಾರಿಯೊಬ್ಬರು ತಿಳಿಸಿದರು. ಯಾವುದರ ಬದಲಾವಣೆಗೆ ಅವಕಾಶ ?
– ವಾಹನ ಚಾಲನೆ ವೇಳೆ ಮೊಬೈಲ್ ಬಳಕೆ
– ಅತೀ ವೇಗವಾಗಿ ವಾಹನ ಚಾಲನೆ
– ಸಂಚಾರ ಪೊಲೀಸ್ ಅಥವಾ ಸಾರಿಗೆ ಅಧಿಕಾರಿಗಳ ಸೂಚನೆಯನ್ನು ಪಾಲಿಸದಿರುವುದು
– ಅಪಾಯಕಾರಿ ಚಾಲನೆ
– ನೋಂದಣಿ ಇಲ್ಲದ ವಾಹನ ಚಾಲನೆ