Advertisement

ಪೌರತ್ವ ಕಾಯ್ದೆ ತಿದ್ದುಪಡಿ ವಿರುದ್ದ ಕಾನೂನು ಹೋರಾಟ :ರಾಯರೆಡ್ಡಿ

10:06 AM Dec 12, 2019 | Team Udayavani |

ಬೆಂಗಳೂರು: ಕೇಂದ್ರ ಸರ್ಕಾರ ಪೌರತ್ವ ಕಾಯ್ದೆ ತಿದ್ದುಪಡಿ ಮಾಡಿರುವುದಕ್ಕೆ ರಾಷ್ಟ್ರಪತಿಗಳು ಅಂಕಿತ ಹಾಕಬಾರದು. ಈ ತಿದ್ದುಪಡಿ ವಿರುದ್ಧ ಕಾಂಗ್ರೆಸ್‌ ಕಾನೂನು ಹೋರಾಟ ಮಾಡಲಿದೆ ಎಂದು ಮಾಜಿ ಸಚಿವ ಬಸವರಾಜ್‌ ರಾಯರೆಡ್ಡಿ ಹೇಳಿದ್ದಾರೆ.

Advertisement

ಕೆಪಿಸಿಸಿ ಕಚೇರಿಯಲ್ಲಿ ಪ್ರತಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ದೇಶದಲ್ಲಿ ಪೌರತ್ವ ಹಕ್ಕು ತಿದ್ದುಪಡಿ 1955 ರಿಂದ ಜಾರಿಯಲ್ಲಿದೆ. ಈಗಾಗಲೆ ನಾಲ್ಕು ಬಾರಿ ತಿದ್ದುಪಡಿಯಾಗಿದೆ. ಹಿಂದು ಸಿಖ್‌, ಕ್ರಿಶ್ಚಿಯನ್‌, ಬೌದ್ಧ, ಜೈನ ಹಾಗೂ ಪಾರ್ಸಿ ಸಮುದಾಯದವರು ವಿದೇಶದಿಂದ ಬಂದು ಭಾರತದಲ್ಲಿ ವಾಸವಾದವರಿಗೆ ಭಾರತೀಯ ಪೌರತ್ವ ನೀಡಲು ಸರ್ಕಾರ ಮುಂದಾಗಿದೆ.

ಕೇಂದ್ರ ಸರ್ಕಾರ ದೇಶದಲ್ಲಿ ಪ್ರಥಮ ಬಾರಿಗೆ ಧರ್ಮಾಧಾರಿತ ಆಧಾರದಲ್ಲಿ ಕಾಯ್ದೆ ಜಾರಿಗೆ ತರಲು ಮುಂದಾಗಿದೆ. ಇದು ಸಂವಿಧಾನದ ಕಲಂ 14-15ರ ಉಲ್ಲಂಘನೆಯಾಗುತ್ತದೆ. ರಾಷ್ಟ್ರ ಪತಿಗಳು ಈ ತಿದ್ದುಪಡಿ ಮಸೂದೆಗೆ ಒಪ್ಪಿಗೆ ನೀಡಬಾರದು ಎಂದು ಆಗ್ರಹಿಸಿದರು.

ಎರಡನೇ ಮಹಾಯುದ್ಧ ನಂತರ ಭಾರತದ ಅಕ್ಕ ಪಕ್ಕದ ರಾಷ್ಟ್ರಗಳಿಂದ ನಮ್ಮ ದೇಶಕ್ಕೆ ಅಕ್ರಮವಾಗಿ ಲಕ್ಷಾಂತರ ಜನರು ವಲಸೆ ಬಂದಿದ್ದಾರೆ. ಜಮ್ಮು ಕಾಶ್ಮೀರದ ಪಿಒಕೆ ಭಾಗದಲ್ಲಿ ವಲಸೆ ಬಂದಿ¨ªಾರೆ. ಭರ್ಮಾದಲ್ಲಿ ರೊಹಿಂಗ್ಯಾ.ದಾಳಿಯಿಂದ ಅಕ್ರಮವಾಗಿ ವಲಸೆ ಬಂದಿ¨ªಾರೆ. ಕೇಂದ್ರ ಸರ್ಕಾರ ಆರು ವರ್ಷ ಯಾರು ಭಾರತದಲ್ಲಿ ಇರುತ್ತಾರೊ ಅವರಿಗೆ ಭಾರತಿಯ ಪೌರತ್ವ ನೀಡಲು ಉದ್ದೇಶಿಸಿದೆ. ಭಾರತಕ್ಕೆ ವಲಸೆ ಬಂದಿರುವ ಮುಸ್ಲಿಂರನ್ನು ಏನು ಮಾಡುತ್ತಾರೆ ಎಂದು ಪ್ರಶ್ನಿಸಿದರು. ಮುಂದಿನ ವರ್ಷ ಪಶ್ಚಿಮ ಬಂಗಾಳದಲ್ಲಿ ಚುನಾವಣೆ ಇರುವುದರಿಂದ ಲಾಭ ಮಾಡಿಕೊಳ್ಳಲು ಬಿಜೆಪಿ ಈ ಕೆಲಸ.ಮಾಡುತ್ತಿದೆ ಎಂದು ಆರೋಪಿಸಿದರು.

ನಾಝಿ ನಾಯಕ ಹಿಟ್ಲರ್‌ ಕೂಡ ಜರ್ಮನರನ್ನು ಹೊರತು ಪಡೆಸಿ ಬೆರೆ ಯಾರೂ ದೇಶದಲ್ಲಿ ಇರದಂತೆ ಮಾಡಿದ್ದ ಈಗ ಕೇಂದ್ರ ಸರ್ಕಾರ ಅದನ್ನೆ ಮಾಡಲು ಹೊರಟಿದೆ ಎಂದು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next