ಕೋಲ್ಕತಾ: ಒಂದು ಕೇಸು ಇತ್ಯರ್ಥವಾಗುವುದಕ್ಕೆ 10, 20, 30 ವರ್ಷ ಸಾಕಾಗಬಹುದೆಂದು ನೀವು ಅಂದಾಜಿಸಬಹುದು. ಆದರೆ ಪಶ್ಚಿಮ ಬಂಗಾಳದ ಕಲ್ಕತ್ತಾ ಹೈಕೋರ್ಟ್‌ನ ಈ ಒಂದು ಪ್ರಕರಣ ಬರೋಬ್ಬರಿ 150 ವರ್ಷಗಳಿಂದ ನ್ಯಾಯಾಲ ಯದಲ್ಲಿ ವಿಚಾರಣೆ ಹಂತದಲ್ಲೇ ಇದೆ!
ದಕ್ಷಿಣೇಶ್ವರ ದೇಗುಲ ನಿರ್ಮಿಸಿದ್ದ ರಾಣಿ ರಾಸಮಣಿ 1861ರಲ್ಲಿ ತಾವು ಮೃತರಾಗುವುದಕ್ಕೂ ಮೊದಲು ದೇಗುಲಕ್ಕೆ ಐವರು ಪ್ರಮುಖರನ್ನು ಆಯ್ಕೆ ಮಾಡಿದರು. ಆಯ್ಕೆಯ ಪತ್ರವನ್ನು ಆಕೆಯ ಸಾವಿನ 6 ತಿಂಗಳ ಅನಂತರ ಅಲಿಪೋರ್ ನ್ಯಾಯಾಲಯದಲ್ಲಿ ನೋಂದಾಯಿಸಲಾಯಿತು. 1972ರಲ್ಲಿ ಇಬ್ಬರು ಪ್ರಮುಖರು, ಆ ಪತ್ರದಲ್ಲಿ ದೇಗುಲವನ್ನು ನಡೆಸಲು ಮಾರ್ಗದರ್ಶನವಿಲ್ಲ ವೆಂದು ಹೈ ಕೋರ್ಟ್‌ನ ಬ್ರಿಟಿಷ್ ನ್ಯಾಯಮೂರ್ತಿ ಎದುರು ಅರ್ಜಿ ಇಟ್ಟರು. ಅದನ್ನು 40 ವರ್ಷಗಳ ಕಾಲ ವಿಚಾರಣೆ ನಡೆಸಿ, ಮಾರ್ಗಸೂಚಿ ರಚಿಸಲಾಯಿತು. 1929ರಲ್ಲಿ ದೇಗುಲಕ್ಕೆ ಮಂಡಳಿ ರಚಿಸಲು ಆದೇಶ ನೀಡಲಾಯಿತು.
ದೇಗುಲದ ಪ್ರಮುಖರ ಸಂಖ್ಯೆ 200 ದಾಟಿದ ಅನಂತರ ಮಂಡಳಿಯ ಟ್ರಸ್ಟಿಗಳ ಆಯ್ಕೆ ಮಾಡುವಲ್ಲಿ ತಮ್ಮ ಮತದಾನದ ಹಕ್ಕು ನಿರ್ಧರಿಸಲು 1972ರಲ್ಲಿ ಮತ್ತೆ ಪ್ರಕರಣ ನ್ಯಾಯಾ ಲಯದ ಮೆಟ್ಟಿಲೇರಿತು. 3 ವರ್ಷಗಳಿಗೊಮ್ಮೆ ಚುನಾವಣೆ ನಡೆಸಲು ಸೂಚಿಸಿ 1986ರಲ್ಲಿ ನ್ಯಾಯಾಲಯ ಆದೇಶ ಹೊರಡಿಸಿತು.
ಇದೀಗ 2021ರಲ್ಲಿ ಮತ್ತೂಮ್ಮೆ 1972ರ ಮೂಲ ಪ್ರಕರಣವೇ ನ್ಯಾಯಾಲಯದ ಮೆಟ್ಟಿ ಲೇರಿದೆ. ಕಳೆದ 35 ವರ್ಷಗಳಿಂದ ದೇಗುಲದ ಮಂಡಳಿಗೆ ಒಬ್ಬರೇ ಮುಖ್ಯಸ್ಥರಿದ್ದು, ಪ್ರಮುಖ ರನ್ನು ಮೂಲೆಗುಂಪು ಮಾಡಲಾಗಿದೆ ಎಂದು ಹೊಸದಾಗಿ ದೂರನ್ನು ನ್ಯಾಯಾಲಯದ ಮುಂದಿ ಡಲಾಗಿದೆ. ಇದಿನ್ನೂ ವಿಚಾರಣೆ ಹಂತದಲ್ಲಿದೆ.