ಬಾಗೇಪಲ್ಲಿ: ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಕಾನೂನು ಸೇವೆ ಲಭ್ಯವಾಗಬೇಕು ಎನ್ನುವ ಮಹತ್ತರ ಉದ್ದೇಶದಿಂದ ಕಾನೂನು ಸೇವಾ ಪ್ರಾಧಿಕಾರ ಅಸ್ತಿತ್ವಕ್ಕೆ ಬಂದಿದ್ದು, ತಮ್ಮ ಹಕ್ಕುಗಳ ಮತ್ತು ಕರ್ತವ್ಯಗಳ ಬಗ್ಗೆತಿಳಿದುಕೊಳ್ಳಬೇಕು ಎಂದು ನ್ಯಾಯಾಧೀಶ ಎಸ್. ಎಂ.ಅರುಟಗಿ ತಿಳಿಸಿದರು.
ಪಟ್ಟಣದ ಜೆಎಂಎಫ್ಸಿ ಸಿವಿಲ್ ನ್ಯಾಯಾಲಯದಪ್ರಾಂಗಣದ ಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಬಾಗೇಪಲ್ಲಿ ಆಡಳಿತ ಇಲಾಖೆ,ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಮೂಲಭೂತ ಹಕ್ಕುಗಳ ಮತ್ತು ಕರ್ತವ್ಯಗಳ ಬಗ್ಗೆ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಉತ್ಛ ನ್ಯಾಯಾಲಯದ ನಿರ್ದೇಶನದಂತೆ ಈ ಕಾರ್ಯಕ್ರಮಗಳು ಏರ್ಪಡಿಸಲಾಗಿದ್ದು,ಪ್ರತಿಯೊಬ್ಬರಿಗೂ ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳನ್ನು ತಿಳಿಸಬೇಕು ಎಂಬ ಉದ್ದೇಶಒಳಗೊಂಡಿದೆ. ಉಚಿತ ಕಾನೂನು ಸೇವೆ ಸಿಗಬೇಕೆಂಬುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಅದೇ ರೀತಿಯಲ್ಲಿ ಸರ್ಕಾರದ ಧಇಲಾಖೆಗಳಿಂದ ಜನರಿಗೆ ಸಿಗುವ ಸೌಲಭ್ಯಗಳ ಬಗ್ಗೆ ಮಾತಿ ನೀಡಬೇಕಾಗಿದೆ ಎಂದರು.
ಅರಿವು ಮೂಡಿಸಿ: ವಕೀಲರ ಸಂಘದ ತಾಲೂಕು ಅಧ್ಯಕ್ಷ ಎ.ನಂಜುಂಡ ಮಾತನಾಡಿ,ನ್ಯಾಯಾಲಯಗಳು ಪ್ರತಿಯೊಬ್ಬ ವ್ಯಕ್ತಿಯ ಮೂಲಭೂತ ಹಕ್ಕುಗಳನ್ನು ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ಸಮಾನವಾದ ಕಾನೂನು ಹಾಗೂ ಹಕ್ಕುಗಳು, ಕರ್ತವ್ಯಗಳನ್ನು ರೂಪಿಸಿದ್ದು, ಅದರಂತೆ ನಡೆಯುವುದು ನಮ್ಮೆಲ್ಲರ ಆಧ್ಯ ಕರ್ತವ್ಯವಾಗಿದೆ. ಇಂದು ಕಾನೂನು ಸೇವೆಗಳ ದಿನಾಚರಣೆ. ಬಹುತೇಕ ಜನರಿಗೆಕಾನೂನುಗಳ ಅರಿವು ಇಲ್ಲ. ಆದ್ದರಿಂದ ಕಾನೂನುಗಳನ್ನು ತಿಳಿದವರು ಜನಸಾಮಾನ್ಯರಿಗೆ ತಿಳಿಸಿ ಅರಿವು ಮೂಡಿಸಬೇಕಿದೆ ಎಂದರು.
ಹಿರಿಯ ವಕೀಲ ದತ್ತಾತ್ರೇಯ ಮಾತನಾಡಿದರು. ವಕೀಲರಾದ ನಂಜಪ್ಪ ನಾಗಭೂಷಣ್, ಪಿ.ಅಪ್ಪಸ್ವಾಮಿ, ನಾರಾಯಣ ಮತ್ತಿತರರು ಇದ್ದರು.