Advertisement

ಠಾಣೆಗಳಲ್ಲಿ ಮಾನವ ಹಕ್ಕು ಹರಣ

03:17 PM Feb 27, 2021 | Team Udayavani |

ಮುಳಬಾಗಿಲು: ಪೊಲೀಸ್‌ ಠಾಣೆಯಲ್ಲಿ ಮಾನವ ಹಕ್ಕುಗಳು ಹರಣ ಆಗುತ್ತಿರುವ ಬಗ್ಗೆ ವ್ಯಾಪಕ ದೂರುಗಳು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಹೈಕೋರ್ಟ್‌ ನಿರ್ದೇಶನದಂತೆ ಠಾಣೆಗೊಬ್ಬರುಪ್ಯಾನಲ್‌ ವಕೀಲರನ್ನು ನೇಮಕ ಮಾಡಿಆರೋಪಿಗಳಿಗೆ ಕಾನೂನು ಜಾಗೃತಿ ಮೂಡಿಸಲಾಗುತ್ತಿದೆ ಎಂದು ಹಿರಿಯಸಿವಿಲ್‌ ನ್ಯಾಯಾಧೀಶರು ಹಾಗೂ ಜಿಲ್ಲಾಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿಗಳಾದ ಸಿ.ಎಚ್‌.ಗಂಗಾಧರ ತಿಳಿಸಿದರು.

Advertisement

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ತಾಲೂಕು ಆಡಳಿತ, ತಾಪಂ, ಗ್ರಾಮ ವಿಕಾಸ ಸಂಸ್ಥೆ, ಕ್ಯಾನ್‌ಸಂಸ್ಥೆ, ಗ್ರಾಮೀಣ ಮಹಿಳಾ ಒಕ್ಕೂಟ,ರೋಟರಿ ಕೋಲಾರ ಲೇಕ್‌ ಸೈಡ್‌, ಪರಿಸರಹಿತರಕ್ಷಣಾ ಸಮಿತಿ ಮತ್ತು ಯುವ ಸೇನೆಆಶ್ರಯದಲ್ಲಿ ತಾಲೂಕಿನ ಹೊನ್ನಶೆಟ್ಟಿಹಳ್ಳಿ ಯಲ್ಲಿ ಏರ್ಪಡಿಸಲಾಗಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪ್ರಧಾನ ಸಿವಿಲ್‌ ನ್ಯಾಯಾಧೀಶ ಹಾಜಿಹುಸೇನಸಾಬ ಯಾದವಾಡ ಮಾತನಾಡಿ, ಫೆ.27ರಂದು ಜಿಲ್ಲೆಯಲ್ಲಿ ಲೋಕಅದಾಲತ್‌ ನಡೆಸಲಾಗುತ್ತಿದ್ದು, ಕಕ್ಷಿದಾರರು ಸದ್ಬಳಕೆ ಮಾಡಿಕೊಳ್ಳಬೇಕೆಂದರು. ಹಿರಿಯ ವಕೀಲ ವಿ.ಜಯಪ್ಪ ಮಾತ  ನಾಡಿದರು. ವಕೀಲರ ಸಂಘದ ಅಧ್ಯಕ್ಷಎಂ.ಎಲ್‌.ವೆಂಕಟೇಶ್‌, ಕಾರ್ಯದರ್ಶಿಕೆ.ಆರ್‌.ವೇಣುಗೋಪಾಲ್‌, ಹಿರಿಯವಕೀಲರಾದ ಎನ್‌.ಪ್ರಭಾಕರ್‌, ಕೆ.ಆರ್‌ .ಧನರಾಜ್‌, ವಕೀಲರಾದ ಎಂ.ರಾಮಚಂದ್ರ, ಎಸ್‌.ಎಂ.ಅಶೋಕ್‌ಕುಮಾರ್‌,ರಮೇಶ್‌, ದುರ್ಗಾಪ್ರಸಾದ್‌, ರಾಘವೇಂದ್ರ, ಎಂ.ಎನ್‌.ಪ್ರವೀಣ್‌ಕುಮಾರ್‌,ಟಿ.ರಾಜವೇಲು, ವಿ.ಸುಬ್ರಹ್ಮಣಿ,ಗ್ರಾಮವಿಕಾಸ ಸಂಸ್ಥೆ ಹಣಕಾಸು ವಿಭಾಗದಮುಖ್ಯಸ್ಥೆ ಎಂ.ಎಸ್‌.ಗಿರಿಜಾ, ವಾಸಂತಿ,ಕೆಜಿಎಫ್ ಮಕ್ಕಳ ವಿಕಾಸ ಎನ್‌ಜಿಒ ಮುಖ್ಯಸ್ಥೆ ಪೂಂಗೂಡಿ, ಹೂಹಳ್ಳಿ ನಾಗರಾಜ್‌ ಪಾಲ್ಗೊಂಡಿದ್ದರು.

ನ್ಯಾಯಯುತವಾಗಿ ಕೆಲಸ ನಿರ್ವಹಿಸಿ :

ಶ್ರೀನಿವಾಸಪುರ: ಸಾರ್ವಜನಿಕರ ಕೆಲಸಗಳಿಗೆ ಪರ ವಿರೋಧ ಮಾಡುವುದಿಲ್ಲ. ಏನಿದ್ದರೂ ಬಂದವರ ಕೆಲಸಗಳನ್ನು ನ್ಯಾಯ  ಯುತವಾಗಿ ಮಾಡಿ, ದೂರುಗಳು ಬಂದರೆ ಸುಮ್ಮನಿರುವುದಿಲ್ಲ. ಅಧಿಕಾರಿಗಳು ಪ್ರಾಮಾ ಣಿಕವಾಗಿ ಕೆಲಸ ಮಾಡಬೇಕೆಂದು ಶಾಸಕ ಕೆ.ಆರ್‌.ರಮೇಶ್‌ ಕುಮಾರ್‌ ಹೇಳಿದರು.

Advertisement

ತಾಲೂಕು ಕಚೇರಿ ಆವರಣದಲ್ಲಿ ಕಂದಾಯ ಇಲಾಖೆ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಕಂದಾಯ ಅದಾಲತ್‌ನಲ್ಲಿಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ತಾಲೂಕಿನ 25 ಗ್ರಾಪಂಗಳಲ್ಲಿನ ಎಲ್ಲಾಗ್ರಾಮಗಳಿಗೆ ಸ್ವತ್ಛ ಭಾರತ್‌ನಲ್ಲಿ ಜಮೀನು ಕಾಯ್ದಿರಿಸುವುದು, ಸ್ಮಶಾನ, ಸಮುದಾಯಭವನ, ಪಹಣಿಯಲ್ಲಿನ ಪಿ.ನಂಬರ್‌ತೆಗೆಯುವುದರ ಬಗ್ಗೆ ಹಾಗೂ ವಸತಿ,ವಿಧವಾ ವೇತನ, ವೃದ್ಧಾಪ್ಯ, ಸಂಧ್ಯಾಸುರಕ್ಷಾ, ವಸತಿ ಸೇರಿದಂತೆ ಅನೇಕ ಮೂಲಸೌಲಭ್ಯಗಳನ್ನು ಗ್ರಾಮಗಳಿಗೆ ಬಾಕಿಇರದಂತೆ ಕ್ರಮ ಕೈಗೊಳ್ಳುವ ಉದ್ದೇಶಇದಾಗಿದೆ ಎಂದರು.

ತಾಲೂಕಿನ ಕಸಬಾ ಹೋಬಳಿ ವ್ಯಾಪ್ತಿಯ ಮಾಸ್ತೇನಹಳ್ಳಿ ಗ್ರಾಪಂ ಕೇಂದ್ರದಲ್ಲಿ ಮಾ.13ರಂದು ಅಲ್ಲಿನ ಸಮಸ್ಯೆಗಳಿಗೆ

ಪರಿಹಾರ ದೊರಕಿಸಲು ಸಭೆ ನಡೆಸಲಾಗುತ್ತದೆ ಎಂದರು. ಜೆ.ವಿ.ಕಾಲೋನಿಯಲ್ಲಿ ಎಲ್ಲಾ ಕುಟುಂಬಗಳು ಪ.ಜಾತಿಗೆ ಸೇರಿದೆ. ಇವರಿಗೆ ಸ್ವಗ್ರಾಮದಲ್ಲಿ ಪಡಿತರ ನೀಡುವ ವ್ಯವಸ್ಥೆ ಮಾಡಬೇಕು. ಇಲ್ಲದಿದ್ದರೆ ಅಂತಹ ನ್ಯಾಯಬೆಲೆ ಅಂಗಡಿ ಪರವಾನಗಿ ರದ್ದುಮಾಡುವುದಾಗಿ ಆಹಾರ ಇಲಾಖೆ ಕಚೇರಿ ಶಿರಸ್ತೇದಾರ್‌ ಅವರನ್ನು ತರಾಟೆಗೆ ತೆಗೆದುಕೊಂಡರು. ದಿಂಬಾಲ್‌ ಅಶೋಕ್‌, ಆಲಂಬಗಿರಿ ಅಯ್ಯಪ್ಪ, ದ್ವಾರಸಂದ್ರ ಮುನಿ ವೆಂಕಟಪ್ಪ, ನಾರಾಯಣಸ್ವಾಮಿ, ಪಾಳ್ಯ ಗೋಪಾಲರೆಡ್ಡಿ ಇತರೆ ಮುಖಂಡರುಹಾಗೂ ತಹಶೀಲ್ದಾರ್‌ ಎಸ್‌.ಎಂ.ಶ್ರೀನಿವಾಸ್‌, ಇಒ ಎಸ್‌.ಆನಂದ್‌, ಎಲ್ಲಾ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next