Advertisement

ಕಾನೂನು ಅರಿವು ಅವಶ್ಯ: ಸುಮನ ಚಿತ್ತರಗಿ

06:31 PM Nov 05, 2021 | Team Udayavani |

ಸಾಂಬ್ರಾ: ಜೀವನದಲ್ಲಿ ಪ್ರತಿಯೊಂದು ವಿಚಾರಗಳು ಕಾನೂನು ಮತ್ತು ನಿಯಮಗಳಿಗೆ ಒಳಪಟ್ಟಿರುತ್ತದೆ. ಹಾಗಾಗಿ ಸರಿಯಾಗಿ ಕಾನೂನು ತಿಳಿದುಕೊಳ್ಳುವ ಅಗತ್ಯವಿದೆ ಎಂದು ಬೆಳಗಾವಿ ಸಿವಿಲ್‌ ಹಾಗೂ ಜೆಎಂಎಪ್‌ಸಿ ನ್ಯಾಯಾಧೀಶರಾದ ಸುಮನ ಚಿತ್ತರಗಿ ಹೇಳಿದರು. ಅವರು ಬಾಳೆಕುಂದ್ರಿ ಖುರ್ದ ಗ್ರಾಮದ ಶ್ರೀ ಶಿದ್ದಲಿಂಗೇಶ್ವರ ಮಠದ ಶಾಲೆಯಲ್ಲಿ ಗ್ರಾ.ಪಂ ಬಾಳೆಕುಂದ್ರಿ ಮತ್ತು ಜಿಲ್ಲಾ ಕಾನೂನು ಸೇವೆ ಪ್ರಾಧಿಕಾರ, ಮಾನವ ಹಕ್ಕುಗಳ ಹಿತರಕ್ಷಣಾ ಮಂಡಳ ಮತ್ತು ನ್ಯಾಯವಾದಿಗಳ ಸಂಘಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿಲಾಗಿದ್ದ ರಾಷ್ಟ್ರೀಯ ಕಾನೂನು ಸಾಕ್ಷರತಾ ಅಭಿಯಾನವನ್ನು ಸಸಿಗೆ ನೀರೆರೆದು ಉದ್ಘಾಟಿಸಿ ಮಾತನಾಡಿದರು.

Advertisement

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನಬದ್ಧವಾಗಿ ಎಲ್ಲರೂ ಸರ್ವ ಸಮಾನರು. ಸಂವಿಧಾನಬದ್ಧವಾಗಿರುವ ಹಕ್ಕುಗಳನ್ನು ಅನುಭವಿಸುವ ನಾವು, ಕರ್ತವ್ಯಗಳನ್ನೂ ತಪ್ಪದೇ ಪಾಲನೆ ಮಾಡಬೇಕೆಂದರು. ಅಭಿಯಾನದಲ್ಲಿ ಜನನ ಮತ್ತು ಮರಣ, ಐಎಂವಿ, ಆಸ್ತಿ ಹಕ್ಕು, ಜೀವನಾಂಶ, ಮಾಹಿತಿ ಹಕ್ಕು ಅಧಿನಿಯಮ, ಮೂಲಭೂತ ಹಕ್ಕುಗಳು, ನೋಂದಣಿ ಕಾಯ್ದೆ, ಅಳತೆ-ಗಡಿ ಗುರುತಿನ ಕಾಯ್ದೆ, ಮಹಿಳಾ ಶೋಷಣೆ, ಮಕ್ಕಳ ಹಕ್ಕುಗಳ ರಕ್ಷಣೆ, ಫೋಕ್ಸೊ, ಪೊಲೀಸ್‌ ಕಾಯ್ದೆ ಸೇರಿದಂತೆ ವಿವಿಧ ಸಾಮಾನ್ಯ ಕಾನೂನುಗಳ ಬಗ್ಗೆ ತಿಳಿಸಿಕೊಡಲಾಗುತ್ತಿದೆ ಎಂದರು.

ನ್ಯಾಯವಾದಿ ಜ್ಯೋತಿ ಹಂಚಾಟೆ ಮಹಿಳೆಯರ ಮೇಲೆ ಆಗುತ್ತಿರುವ ಹಿಂಸೆ, ದೌರ್ಜನ್ಯ, ಬಲಾತ್ಕಾರ, ಹೆಣ್ಣುಮಕ್ಕಳ ಅನೈತಿಕ ಸಾಗಾಣಿಕೆ, ಬಾಲ್ಯ ವಿವಾಹ ತಡೆಗಟ್ಟುವ ಕುರಿತು ಉಪನ್ಯಾಸ ನೀಡಿದರು. ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಹಿತರಕ್ಷಣಾ ಮಂಡಲದ ಜಿಲ್ಲಾಧ್ಯಕ್ಷ ಗುರುನಾಥ್‌ ಬೋರಿ ಮತ್ತು ನ್ಯಾಯವಾದಿ ಡಾ| ರವೀಂದ್ರ ತೋಟಗೇರ ಮಾತನಾಡಿದರು. ಗ್ರಾ.ಪಂ ಅಧ್ಯಕ್ಷೆ ರೇಣುಕಾ ಕರವಿನಕೊಪ್ಪ ಅಧ್ಯಕ್ಷತೆ ವಹಿಸಿದ್ದರು.

ಉಪಾಧ್ಯಕ್ಷೆ ಪದ್ಮಾ ಕೋಲಾ. ಪಿಡಿಒ ಪ್ರಕಾಶ ಕುಡಚಿ, ಕಾರ್ಯದರ್ಶಿ ಪ್ರಕಾಶ ಇಂಗಳೆ, ಗ್ರಾಪಂ.ಸದಸ್ಯ ಯುವರಾಜ ಜಾಧವ, ಪ್ರವೀಣ್‌ ಮುರಾರಿ, ಉದಯ ಭಾಗಣ್ಣವರ, ಹಣಮಂತ ಹಣ್ಣಿಕೇರಿ, ಅಂಜನಾ ಬೆಳಗಾವಂಕರ, ಕಮಲವ್ವಾ ನಾಯಕ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next