Advertisement

ಅಪರಾಧ ಮುಕ್ತಕ್ಕೆ ಕಾನೂನು ಅರಿವು ಅಗತ್ಯ: ರೇಖಾ

09:21 PM Jan 28, 2020 | Lakshmi GovindaRaj |

ಕೋಲಾರ: ಕಾನೂನಿನ ಅರಿವು ಪಡೆಯುವ ಮೂಲಕ ಅಪರಾಧ ಮುಕ್ತ ಹಾಗೂ ನೆಮ್ಮದಿ ಜೀವನ ನಡೆಸಿ, ನಿಮ್ಮ ಹಕ್ಕುಗಳ ರಕ್ಷಣೆ ಜತೆಗೆ ಕರ್ತವ್ಯಗಳನ್ನು ಪಾಲಿಸಿ ಎಂದು 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಬಿ.ಎಸ್‌.ರೇಖಾ ತಿಳಿಸಿದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘದ ವತಿಯಿಂದ ತಾಲೂಕಿನ ಕಾಡಹಳ್ಳಿಯಲ್ಲಿ ಬೆಂಗಳೂರಿನ ಕ್ರೈಸ್ಟ್‌ ಸ್ಕೂಲ್‌ ಆಫ್‌ ಲಾ ಹಮ್ಮಿಕೊಂಡಿದ್ದ ಶಿಬಿರದಲ್ಲಿ ಕಾನೂನು ಅರಿವು-ನೆರವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

Advertisement

ನಿರಂತರ ಅಧ್ಯಯನ ಅವಶ್ಯ: ಕಾನೂನು ಪದವಿ ಓದುತ್ತಿರುವ ವಿದ್ಯಾರ್ಥಿಗಳು ಕೇವಲ ಹಣ ಗಳಿಕೆಗೆ ಸೀಮಿತವಾಗದೇ ಕಕ್ಷಿದಾರರ ಹಿತ ಕಾಯುವ, ಬಡವರಿಗೆ ನೆರವಾಗುವ ಗುಣ ಬೆಳೆಸಿಕೊಳ್ಳಿ, ನಿರಂತರ ಅಧ್ಯಯನದಿಂದ ಮಾತ್ರ ಉತ್ತಮ ವಕೀಲರಾಗಲು ಸಾಧ್ಯ ಎಂಬುದನ್ನು ಅರಿಯಿರಿ ಎಂದರು.

ಕಾನೂನನ್ನು ಗೌರವಿಸಿ: ಹಿರಿಯ ಸಿವಿಲ್‌ ನ್ಯಾಯಾ ಧೀಶರು ಹಾಗೂ ಕಾನೂನು ಸೇವಾ ಪ್ರಾ ಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎಚ್‌.ಗಂಗಾಧರ್‌, ಪ್ರತಿಯೊಬ್ಬ ಪ್ರಜೆಯೂ ಕಾನೂನನ್ನು ತಿಳಿದು ಗೌರವಿಸಬೇಕಿದ್ದು ಅದು ನಮ್ಮ ಪ್ರಮುಖ ಕರ್ತವ್ಯಗಳಲ್ಲೊಂದಾಗಿದೆ ಎಂದು ತಿಳಿಸಿದರು.

ಉತ್ತಮ ಜೀವನ ನಡೆಸಿ: ಪ್ರತಿಯೊಬ್ಬರೂ ನಮ್ಮ ಮೂಲಭೂತ ಕರ್ತವ್ಯಗಳೇನು ಎಂಬುದನ್ನು ತಿಳಿದು ನಡೆದುಕೊಳ್ಳುವುದು ಸಮಾಜ ಮತ್ತು ಬದುಕಿಗೆ ತೀರಾ ಅವಶ್ಯಕತೆ ಇದೆ. ಭೂಮಿ ಮೇಲೆ ಇರುವ ಪ್ರತಿ ಜೀವಿಗೂ ಬದುಕುವ ಹಕ್ಕಿದೆ. ಇದನ್ನು ಮನಗಂಡು ಎಲ್ಲರಿಗೂ ಉತ್ತಮ ಜೀವನ ನಡೆಸಲು ಅವಕಾಶ ಮಾಡಿಕೊಡಬೇಕಿದೆ ಎಂದು ಸಲಹೆ ನೀಡಿದರು.

ವಿದ್ಯಾರ್ಥಿಗಳು ಸೇರಿದಂತೆ ಇನ್ನಿತರರು ವಾಹನ ಚಲಾಯಿಸುವ ಮುನ್ನ ಸಾರಿಗೆ ಇಲಾಖೆ ಸೂಚನೆ ಷರತ್ತುಗಳನ್ನು ಪಾಲಿಸುವುದು ಕಡ್ಡಾಯವಾಗಿರುತ್ತದೆ. ಇದರಿಂದ ಅಪಘಾತ ಸೇರಿದಂತೆ ಇನ್ನಿತರೆ ತೊಂದರೆಗಳಿಗೆ ಒಳಗಾದವರಿಗೆ ವಿಮೆ ಪರಿಹಾರ ಸಿಗುವಂತಾಗುತ್ತದೆ ಎಂದರು.

Advertisement

ಕಾನೂನು ಮೀರದಿರಿ: ಕಾನೂನು ಬಾಹಿರ, ಸಮಾಜ ವಿರೋಧಿ ಚಟುವಟಿಕೆಗಳಲ್ಲಿ ಯಾರೂ ಭಾಗವಹಿಸದೆ ಮುಕ್ತವಾದ ಜೀವನ ನಡೆಸುವುದು ಎಲ್ಲರಿಗೂ ಒಳಿತು. ಕಾನೂನು ಮೀರಿ ಹೋದದ್ದೆ ಆದರೆ ತಕ್ಕ ಶಿಕ್ಷೆ ಅನುಭವಿಸಲೇಬೇಕಾಗುತ್ತದೆ ಎಂದು ಎಚ್ಚರಿಸಿದರು.

ಹೆಣ್ಣನ್ನು ಗೌರವಿಸುವುದು ಅವರ ಘನತೆ ಎತ್ತಿ ಹಿಡಿಯುವುದು ನಮ್ಮ ಸಂಸ್ಕೃತಿ. ಬದಲಾಗಿ ಅವರ ಮೇಲೆ ಅತ್ಯಾಚಾರಗಳಂತಹ ಪೈಶಾಚಿಕ ಕೃತ್ಯಗಳನ್ನು ಎಸಗಿದವರಿಗೆ ಗಲ್ಲು ಶಿಕ್ಷೆಯಂತಹ ಕಠಿಣ ಶಿಕ್ಷೆಗೆ ಅವರನ್ನು ಒಳಪಡಿಸಿರುವುದು ನಾವೆಲ್ಲಾ ಪ್ರಸ್ತುತ ಬೆಳವಣಿಗೆಗಳಲ್ಲಿ ಕಾಣುತ್ತಿದ್ದೇವೆ. ಹೀಗಾಗಿ ಕಾನೂನು ಪಾಲನೆ ಮಾಡುವುದು ನಮ್ಮೆಲ್ಲರ ಮೇಲಿದೆ ಎಂದು ನುಡಿದರು.

ಜಾಗೃತಿ ಅವಶ್ಯ: ಶಿಕ್ಷಕ ಸಂಯೋಜಕ ಮಲ್ಲಯ್ಯ, ಎಂ.ಆರ್‌.ಮಲ್ಲಯ್ಯ, ಸಂವಿಧಾನದ ಅರಿವು ನಮ್ಮೆಲ್ಲರಿಗೂ ಬರಬೇಕಾದರೆ ಇತಿಹಾಸ ಅಭ್ಯಾಸಿಸಬೇಕು. ಕಾನೂನಿನಡಿ ನಾವು ನಡೆದರೇ ಸ್ವಾತಂತ್ರ ಭಾರತಕ್ಕೆ ನಿಜವಾದ ಅರ್ಥ ಸಿಗುತ್ತದೆ. ಕಾನೂನಿನ ಜಾಗೃತಿ ಪ್ರತಿ ಹಳ್ಳಿ ಮನೆಗೂ ತಲುಪಿ ಇದರ ಧ್ಯೇಯೋದ್ದೇಶ ತಿಳಿಸುವ ಕೆಲಸಗಳು ಆಗಬೇಕಾಗಿದೆ ಎಂದರು.

ಸಮಾನತೆ ಇರಲಿ: ಶಿಕ್ಷಕ ಸಂಯೋಜಕಿ ಎಚ್‌.ಎಲ್‌.ಜಯಂತಿಬಾಯಿ, ಸಾಮಾಜಿಕವಾಗಿ ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಬದುಕಲು ಸಂವಿಧಾನ ಮತ್ತು ಅದರಲ್ಲಿನ ಕಾನೂನು ಅವಶ್ಯಕತೆ ಬಹಳ ಇದೆ. ಜಾತಿ ಧರ್ಮ ತೊಡೆದು ಮೇಲುಕೀಳುಗಳ ತುತ್ಛ ಮನೋಭಾವ ದೂರಮಾಡಿ ಸಮಾನತೆಯಿಂದ ಬದುಕು ನಡೆಸಬೇಕೆಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಕಾಡಹಳ್ಳಿ ಶಾಲೆ ಮುಖ್ಯ ಶಿಕ್ಷಕ ಅಶ್ವತ್ಥನಾರಾಯಣ, ವಿದ್ಯಾರ್ಥಿ ಕಾರ್ಯನಿರ್ವಾಹಕರಾದ ಗೌರಿ ಎಂ.ಬೆಳವಾಡಿ, ನಿಖೀತಾ ಪ್ರಸಾದ್‌, ಬಿ.ಎನ್‌.ಶಾರದಾ, ಶಿವಪ್ರಕಾಶ್‌ ಎಂ.ನಾಗರಾಳೆ, ಯಶ್‌ವರ್ಧನ್‌ ಜೈನ್‌ ಇದ್ದರು.

ಶಿಕ್ಷಾರ್ಹ ಅಪರಾಧ: ಎಲ್ಲಾ ಕಾನೂನುಗಳ ಅರಿವು ಸಾಧ್ಯವಿಲ್ಲವಾದರೂ ನಮ್ಮ ದೈನಂದಿನ ಬದುಕಿನಲ್ಲಿ ಅಗತ್ಯವಾದ ಕಾನೂನುಗಳ ಅರಿವು ಪಡೆಯುವುದು ಅವಶ್ಯಕ, ತಪ್ಪು ಮಾಡಿದ ಮೇಲೆ ನನಗೆ ಕಾನೂನಿನ ಅರಿವಿಲ್ಲ ಎಂದರೆ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.

ಕಾನೂನನ್ನು ಗೌರವಿಸುವುದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯ, ಇದರಲ್ಲಿ ಬಡವ, ಶ್ರೀಮಂತನೆಂಬ ಬೇಧ ಭಾವವಿಲ್ಲ ಎಂದು ತಿಳಿಸಿದರು. ಬಾಲ್ಯವಿವಾಹ, ವರದಕ್ಷಿಣೆ, ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಇವೆಲ್ಲವೂ ಅತ್ಯಂತ ಕಠಿಣ ಶಿಕ್ಷಾರ್ಹ ಅಪರಾಧ ಎಂದು 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next