Advertisement

ಶೋಷಿತರಿಗೆ ಪ್ರಾಧಿಕಾರದಿಂದ ಕಾನೂನು ನೆರವು: ಹೊಸಮನಿ

04:50 PM Jan 25, 2021 | Team Udayavani |

ವಿಜಯಪುರ: ಅನ್ಯಾಯ, ಶೋಷಣೆಗೆ ಗುರಿಯಾದವರಿಗೆ ಕಾನೂನು ಸೇವಾ ಪ್ರಾಧಿಕಾರಕ್ಕೆ ದೂರು ಸಲ್ಲಿಸುವ ಮೂಲಕ ನ್ಯಾಯ ಪಡೆಯಲು ಅವಕಾಶವಿದೆ. ಸರ್ಕಾರದ ಯೋಜನೆಗಳ ಅಡಿಯಲ್ಲಿ ಸೌಲಭ್ಯ ಪಡೆಯಲು ಕಾನೂನು ಸೇವಾ ಪ್ರಾ ಧಿಕಾರದ ನೆರವು ಪಡೆಯುವಂತೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಹಿರಿಯ ಸಿವಿಲ್‌ ನ್ಯಾಯಾಧೀಶ ವೆಂಕಣ್ಣ ಹೊಸಮನಿ ಸಲಹೆ ನೀಡಿದರು.

Advertisement

ನಗರದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ, ಜಿಲ್ಲಾ ಪತ್ರಕರ್ತರ ಸಂಘ, ವಾರ್ತಾ ಮತ್ತು ಪ್ರಚಾರ ಇಲಾಖೆ, ಚಿಲ್ಡ್ರನ್ಸ್‌ ಆಫ್‌ ಇಂಡಿಯಾ ಫೌಂಡೇಶನ್‌ ಸಹಯೋಗದಲ್ಲಿ ದೇವದಾಸಿ ಪದ್ಧತಿ ನಿಷೇಧ, ಮಕ್ಕಳ ಮೇಲಾಗುವ ಲೈಂಗಿಕ ದೌರ್ಜನ್ಯ ತಡೆ, ರಾಷ್ಟ್ರ ನಿರ್ಮಾಣದಲ್ಲಿ ಯುವಕರ ಪಾತ್ರ ಮತ್ತು ರ್ಯಾಗಿಂಗ್‌ನಿಂದಾಗುವ ದುಷ್ಪರಿಣಾಮಗಳ ಕುರಿತು ಮಾಧ್ಯಮ ಪ್ರತಿನಿಧಿಗಳಿಗೆ ಏರ್ಪಡಿಸಲಾಗಿದ್ದ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಸರ್ಕಾರ ಕಡುಬಡ, ಶೋಷಣೆಗೆ ಒಳಗಾದ ನೊಂದ ಸಂತ್ರಸ್ತರಿಗೆ ವಿವಿಧ ಯೋಜನೆಗಳ ಅಡಿಯಲ್ಲಿ ಹಲವು ಸೌಲಭ್ಯ ಕಲ್ಪಿಸಿದೆ. ಸಂಬಂಧಪಟ್ಟ ಇಲಾಖೆಗಳ ಅಧಿ
ಕಾರಿಗಳು ಸಕಾಲಕ್ಕೆ ಸಂತ್ರಸ್ತರಿಗೆ ಸೌಲಭ್ಯ ಕಲ್ಪಿಸಬೇಕು. ಇಂತಹ ಸೌಲಭ್ಯ ಪಡೆಯುವಲ್ಲಿ ಯಾವುದೇ ರೀತಿಯ ಶೋಷಣೆಗೆ ಒಳಗಾದಲ್ಲಿ ಕಾನೂನು ಸೇವಾ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸುವ ಮೂಲಕ ಕಾನೂನು ನೆರವು ಪಡೆಯಬಹುದಾಗಿದೆ ಎಂದು ಹೇಳಿದರು.

ವ್ಯಕ್ತಿಯೊಬ್ಬರಿಗೆ ಮಾನಸಿಕ, ದೈಹಿಕವಾಗಿ ಕಿರುಕುಳ ನೀಡುವುದು ಸಹ ರ್ಯಾಗಿಂಗ್‌ ಎಂದು ಪರಿಗಣಿಸಲಾಗುತ್ತಿದೆ. ಇಂತಹ ಪ್ರಕರಣಗಳಲ್ಲಿ ತಪ್ಪಿತಸ್ಥರಿಗೆ 2 ವರ್ಷ ಜೈಲು ಶಿಕ್ಷೆ, 20 ಸಾವಿರ ರೂ. ದಂಡ ವಿ ಸಲಾಗುತ್ತದೆ. ಹೀಗೆ ಯಾವುದೇ ಸಂದರ್ಭದಲ್ಲಿ ಯಾರಿಗಾದರೂ ತೊಂದರೆ ಆದಲ್ಲಿ ಬಾಧಿತರು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಲಿಖೀತ ರೂಪದಲ್ಲಿ ದೂರು ಸಲ್ಲಿಸಲು ಅವಕಾಶವಿದೆ.

ಸಂವಿಧಾನದ 21ನೇ ವಿಧಿಯನ್ವಯ ಎಲ್ಲರಿಗೂ ಸಮಾನ ಮತ್ತು ಜೀವಿಸುವ ಹಕ್ಕನ್ನು ನೀಡಿದೆ. ಕಾರಣ ಬಿಪಿಎಲ್‌ ಕುಟುಂಬಗಳಿಗೆ ಸರ್ಕಾರದ ಯೋಜನೆಗಳ
ಬಗ್ಗೆ ಸೂಕ್ತ ಮಾಹಿತಿ ನೀಡಬೇಕು ಎಂದು ಹೇಳಿದರು. ಅದರಂತೆ ಕೋವಿಡ್‌ ಸಂದರ್ಭದಲ್ಲಿ ವೈದ್ಯಕೀಯ ಇಲಾಖೆ, ಪೊಲೀಸ್‌, ಪೌರಕಾರ್ಮಿಕರಂತೆ
ಮಾಧ್ಯಮದವರೂ ಕೊರೊನಾ ವಾರಿಯರ್‌ಗಳಾಗಿ ಸೇವೆ ಸಲ್ಲಿಸಿರುವುದು ಶ್ಲಾಘನೀಯ ಎಂದರು.

Advertisement

ನ್ಯಾಯವಾದಿ ಅಶೋಕ ಜೈನಾಪುರ ಮಾತನಾಡಿ, ಸಮಾಜದಲ್ಲಿ ದೇವದಾಸಿ ಪದ್ಧತಿ ಅತ್ಯಂತ ಕೆಟ್ಟ, ಅಮಾನವೀಯ ಹಾಗೂ ಅನಿಷ್ಟ ಪದ್ಧತಿ. ಹಿಂದೆ
ಕೆಲವರು ದೇವರ ಹೆಸರಿನಲ್ಲಿ ಮುತ್ತು ಕಟ್ಟುವುದನ್ನು ಮಾಡಿ ಆ ಮೂಲಕ ತಮ್ಮ ಭೋಗವಿಲಾಸ  ಜೀವನಕ್ಕಾಗಿ ರೂಢಿಸಿಕೊಂಡು ಬಂದ ಅತ್ಯಂತ ಹೀನ
ಪದ್ಧತಿಯಾಗಿದೆ ಎಂದು ಹೇಳಿದರು.

ತಂದೆ ಇಲ್ಲದ ಮಕ್ಕಳೆಂದು ಕರೆಯುವ ದೇವದಾಸಿಯರ ಮಕ್ಕಳು ಸಮಾಜದಲ್ಲಿ ಸಾಮಾಜಿಕ ಮೌಲ್ಯಗಳನ್ನು ಕಳೆದುಕೊಳ್ಳುತ್ತಾರೆ. ಅಲ್ಲದೇ ಅವರು ಅನೇಕ ದೈಹಿಕ ರೋಗಗಳಿಗೂ ಬಲಿಯಾಗುತ್ತಾರೆ. ಇದನ್ನೆಲ್ಲ ತಡೆಗಟ್ಟಲು ಸರ್ಕಾರ ಪ್ರಯತ್ನಿಸುತ್ತಿದ್ದರೂ ಇದು ತೆರೆಮರೆಯಲ್ಲಿ ಮುಂದುವರಿದಿದೆ ಎಂದು ವಿಷಾದಿಸಿದರು.

ಇದಲ್ಲದೇ ರ್ಯಾಗಿಂಗ್‌ ಕೂಡಾ ಅತ್ಯಂತ ಕೆಟ್ಟ ಪದ್ಧತಿಯಾಗಿದೆ. ಇದನ್ನು ನಿರ್ಬಂಧಿಸಲು ಸರ್ಕಾರ ರ್ಯಾಗಿಂಗ್‌ ತಡೆ ಕಾಯ್ದೆಯನ್ನು ಜಾರಿಗೆ ತಂದಿದ್ದು,
ಇದಕ್ಕಾಗಿ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಲಾಗುತ್ತದೆ ಎಂದು ತಿಳಿಸಿದರು. ಚಿಲ್ಡ್ರನ್ಸ್‌ ಆಫ್‌ ಇಂಡಿಯಾ ಫೌಂಡೇಶನ್‌ನ ಬಸವರಾಜ ಹುಲಗನ್ನವರ ಪ್ರಾಸ್ತಾವಿಕ
ಮಾತನಾಡಿದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಎಸ್‌.ಡಿ. ನದಾಫ್‌, ವಿಜಯಪುರ ಕಾರ್ಯನಿರತ ಪತ್ರಕರ್ತರ
ಸಂಘದ ಜಿಲ್ಲಾಧ್ಯಕ್ಷ ಸಚೇಂದ್ರ ಲಂಬು, ಮಕ್ಕಳ ಕಲ್ಯಾಣ ಸಮಿತಿ ಸದಸ್ಯ ದಾನೇಶ ಅವಟಿ, ದೇವೇಂದ್ರ ಹೇಳವರ, ಎಜೆಎಂಎಸ್‌ ಅಧ್ಯಕ್ಷೆ ಮಹಾದೇವಿ
ಹುಲ್ಲೂರು, ಶಾಂತಾ ಬೇಲಾಳ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next